More

    ದಸರಾ ದಿನವೇ‌ ಸರ್ಕಾರಕ್ಕೆ ಶಾಕ್​ ಕೊಟ್ಟ ರೈತ ಸಂಘ: ಮೈಸೂರಿಗೆ ಸಂಪರ್ಕ ಕಲ್ಪಿಸೋ 8 ಕಡೆ ಹೆದ್ದಾರಿ ಬಂದ್

    ಮಂಡ್ಯ: ವಿಶ್ವ ವಿಖ್ಯಾತ ಜಂಬೂ ಸವಾರಿ ಮೆರವಣಿಗೆಯ ದಿನವೇ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ತಲೆನೋವಾಗಿ ಪರಿಣಮಿಸಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೆದ್ದಾರಿ ತಡೆ ನಡೆಸುತ್ತಿರುವ ರೈತ ಸಂಘ, ಮೈಸೂರು ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಸಂಪೂರ್ಣ ಬಂದ್ ಮಾಡಲು ಕರೆ ನೀಡಿದೆ.

    ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಂಟು ಕಡೆ ಹೆದ್ದಾರಿ ಸಂಪರ್ಕವನ್ನು ಇಂದು ಬೆಳಗ್ಗೆ 9 ಗಂಟೆಯಿಂದಲೇ ಬಂದ್ ಮಾಡಲು ರೈತ ಸಂಘದ ಕಾರ್ಯಕರ್ತರು ಸಿದ್ಧತೆ ಮಾಡಿಕೊಂಡಿದ್ದಾರೆ. ಒಂದು ವೇಳೆ ಹೆದ್ದಾರಿಯನ್ನು ತಡೆದರೆ, ಮೈಸೂರಿಗೆ ಬರಲಿರುವ ಪ್ರವಾಸಿಗರಿಗೆ ತುಂಬಾ ಸಮಸ್ಯೆಯಾಗಲಿದೆ.

    ಪ್ರತಿ ಟನ್ ಕಬ್ಬಿಗೆ 4,500 ರೂಪಾಯಿ ನಿಗದಿ, ಕೆ.ಆರ್.ಎಸ್ ಸುತ್ತಮುತ್ತ ಶಾಶ್ವತ ಗಣಿಗಾರಿಕೆ ನಿಲ್ಲಿಸಬೇಕು ಹಾಗೂ ಪ್ರತಿ ಲೀಟರ್ ಹಾಲಿಗೆ 40 ರೂ. ನಿಗದಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಮಾಡಿದ್ದ ರೈತ ಸಂಘ, ದಸರಾ ಹಬ್ಬದೊಳಗೆ ದರ ಘೋಷಣೆಗೆ ಕಾಲಾವಕಾಶ ನೀಡಿತ್ತು. ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಹೆದ್ದಾರಿ ಸಂಚಾರ ಬಂದ್‌ ಮಾಡಲು ಮುಂದಾಗಿದೆ. ಹಸು, ಕುರಿ, ಎತ್ತಿನಗಾಡಿ ಹಾಗೂ ಟ್ರ್ಯಾಕ್ಟರ್‌ಗಳೊಂದಿಗೆ ರಸ್ತೆಯಲ್ಲೇ ಪ್ರತಿಭಟಿಸಲು ರೈತ ಸಂಘದ ಕಾರ್ಯಕರ್ತರು ಸಿದ್ಧವಾಗಿದ್ದಾರೆ.

    ದಸರಾ ದಿನವೇ‌ ಸರ್ಕಾರಕ್ಕೆ ಶಾಕ್​ ಕೊಟ್ಟ ರೈತ ಸಂಘ: ಮೈಸೂರಿಗೆ ಸಂಪರ್ಕ ಕಲ್ಪಿಸೋ 8 ಕಡೆ ಹೆದ್ದಾರಿ ಬಂದ್

    ಮಂಡ್ಯ ಜಿಲ್ಲೆಯಲ್ಲಿ ವಿ.ಸಿ.ಫಾರ್ಮ್ ಗೇಟ್, ಮದ್ದೂರಿನಲ್ಲಿ ಅಡಿಗಾಸ್ ಹೋಟೆಲ್, ಮಳವಳ್ಳಿಯಲ್ಲಿ ಅಂಚೆದೊಡ್ಡಿ ಗೇಟ್, ಶ್ರೀರಂಗಪಟ್ಟಣದಲ್ಲಿ ಕಿರಂಗೂರು ವೃತ್ತ ಹಾಗೂ ಕೆ.ಆರ್.ಪೇಟೆಯಲ್ಲಿ ಪ್ರತಿಭಟನೆ ನಡೆಸಲಿದೆ. ಅಲ್ಲದೆ, ಮೈಸೂರು‌ ಜಿಲ್ಲೆಯಲ್ಲಿ ಟಿ.ನರಸೀಪುರದ ಎಡತೊರೆ, ಇಲವಾಲ ಮತ್ತು ನಂಜನಗೂಡಿನ ಕಬಿನಿ ಸೇತುವೆ ಬಳಿ ಸಂಚಾರ ಬಂದ್ ಮಾಡಲು ರೈತ ಸಂಘ ಮುಂದಾಗಿದೆ.

    ಎರಡು ದಿನದ ಹಿಂದೆಯಷ್ಟೇ ಸಚಿವರಾದ ಕೆ.ಗೋಪಾಲಯ್ಯ ಮತ್ತು ಎಸ್.ಟಿ.ಸೋಮಶೇಖರ್ ಅವರೊಂದಿಗೆ ನಡೆದಿದ್ದ ಮಾತುಕತೆ ವಿಫಲವಾಗಿತ್ತು. ದಸರಾ ಹಬ್ಬದ ನಂತರ ಮಾತುಕತೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗಲೇ ದರ ಘೋಷಣೆ ಮಾಡುವಂತೆ ರೈತ ಸಂಘ ಆಗ್ರಹಿಸಿತ್ತು. ಯಾವುದೂ ಕೈಗೂಡದ ಹಿನ್ನೆಲೆಯಲ್ಲಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಸಂಪೂರ್ಣ ಬಂದ್ ಮಾಡಲು ಮುಂದಾಗಿದೆ. ಕೆಲವಡೆ ರಾತ್ರಿಯೇ ರೈತರು ಜಮಾವಣೆಗೊಂಡಿದ್ದಾರೆ. ಬೇಡಿಕೆ ಈಡೇರದಿದ್ದರೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.

    ದಸರಾ ದಿನವೇ‌ ಸರ್ಕಾರಕ್ಕೆ ಶಾಕ್​ ಕೊಟ್ಟ ರೈತ ಸಂಘ: ಮೈಸೂರಿಗೆ ಸಂಪರ್ಕ ಕಲ್ಪಿಸೋ 8 ಕಡೆ ಹೆದ್ದಾರಿ ಬಂದ್

    ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್, ಜಿಲ್ಲಾಧ್ಯಕ್ಷ ಕೆಂಪೂಗೌಡ, ಪ್ರಸನ್ನ ಎನ್.ಗೌಡ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. (ದಿಗ್ವಿಜಯ ನ್ಯೂಸ್​)

    ಜಂಬೂ ಸವಾರಿಗೆ ಕ್ಷಣಗಣನೆ: ಅರಮನೆ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಹಳೇ ಕಟ್ಟಡಗಳ ಮೇಲೆ ನಿಂತು ವೀಕ್ಷಣೆ ನಿಷೇಧ

    ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ: ಈ ಬಾರಿ ಮೆರವಣಿಗೆಯಲ್ಲಿ ಭಾಗಿಯಾಗುವ ಸ್ತಬ್ಧಚಿತ್ರಗಳ ಪಟ್ಟಿ ಹೀಗಿದೆ…

    ಈ ಬಾರಿ 2 ಗಂಟೆ ತಡವಾಗಿ ಆರಂಭವಾಗಲಿದೆ ಜಂಬೂ ಸವಾರಿ ಮೆರವಣಿಗೆ: ಮೈಸೂರಿನಲ್ಲಿ ಹೇಗಿದೆ ದಸರಾ ಭದ್ರತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts