More

    ಸತತ 5 ದಿನ ಪೆಟ್ರೋಲ್​ ಬಂಕ್​ ಮುಂದಿನ ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ದುರಂತ ಸಾವು! ಲಂಕಾದಲ್ಲಿ ದುರ್ಘಟನೆ

    ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಅಲ್ಲಿನ ಜನರು ಪ್ರತಿನಿತ್ಯವೂ ಸಂಕಷ್ಟಗಳ ಸರಮಾಲೆಯನ್ನು ಎದುರಿಸುತ್ತಿದ್ದಾರೆ. ಜನ ಪ್ರತಿನಿಧಿಗಳು ಮಾಡಿದ ತಪ್ಪಿನಿಂದಾಗಿ ಸಾಮಾನ್ಯ ಜನರು ಸಾವಿನ ದವಡೆಗೆ ಸಿಲುಕುತ್ತಿದ್ದಾರೆ.

    ಲಂಕಾದಲ್ಲಿ ಇಂಧನ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದೀಗ ವರದಿಯಾಗಿರುವ ಮನಕಲಕುವ ಘಟನೆಯೊಂದರಲ್ಲಿ ತನ್ನ ಟ್ರಕ್​ಗೆ ಇಂಧನ ತುಂಬಿಸಿಕೊಳ್ಳಲು ಪೆಟ್ರೋಲ್​ ಬಂಕ್​ ಮುಂದೆ ಸತತ ಐದು ದಿನಗಳ ಕಾಲ ಕ್ಯೂನಲ್ಲಿ ನಿಂತಿದ್ದ 65 ವರ್ಷದ ವೃದ್ಧನೊಬ್ಬ ಸಾವಿಗೀಡಾಗಿದ್ದಾನೆ.

    ಮೃತ ವೃದ್ಧ ಅಂಗೂರುವಾತೋಟದಲ್ಲಿರುವ ಪೆಟ್ರೋಲ್​ ಬಂಕ್​ ಮುಂದೆ ಕ್ಯೂನಲ್ಲಿ ನಿಂತಿದ್ದ. ಬೆಳಗ್ಗೆ ಬಂದು ಪೊಲೀಸರು ಟ್ರಕ್​ ನೋಡಿದಾಗ ಆತ ಒಳಗೆ ಸತ್ತು ಬಿದ್ದಿರುವುದು ಗೊತ್ತಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.

    ಲಂಕಾದಲ್ಲಿ ಇದೇನು ಮೊದಲಲ್ಲ. ಈ ವರ್ಷದ ಆರಂಭದಿಂದಲೂ ಈ ರೀತಿಯ ಘಟನೆಗಳು ಲಂಕಾದಲ್ಲಿ ನಡೆಯುತ್ತಿದೆ. ಇದುವರೆಗೂ 10 ಮಂದಿ ಇದೇ ರೀತಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಕಳೆದ ವಾರ 53 ವರ್ಷದ ವ್ಯಕ್ತಿಯೊಬ್ಬ ಆಟೋ ರಿಕ್ಷಾಗೆ ಇಂಧನ ಹಾಕಿಸಿಕೊಳ್ಳಲು ಕ್ಯೂನಲ್ಲಿ ಕಾಯುತ್ತಿರುವಾಗ ಮೃತಪಟ್ಟಿದ್ದ.

    ಲಂಕಾವೂ ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಇಂಧನ ಕೊರತೆಯನ್ನು ಎದುರಿಸುತ್ತಿದೆ. ಅಲ್ಲದೆ, ಅಗತ್ಯ ಸೇವೆ ಹಾಗೂ ಅಗತ್ಯ ವಸ್ತುಗಳು ಕೂಡ ಲಂಕಾದಲ್ಲಿ ದುಬಾರಿಯಾಗಿದೆ. ಹೀಗಾಗಿ ಜನರು ನಿತ್ಯವೂ ನರಕದ ಜೀವನ ಎದುರಿಸುತ್ತಿದ್ದಾರೆ. (ಏಜೆನ್ಸೀಸ್​)

    ಡಾ. ವಿಜಯ ಸಂಕೇಶ್ವರರ ಸಂದರ್ಶನ ಚಂದನ ವಾಹಿನಿಯಲ್ಲಿ ಇಂದು ಪ್ರಸಾರ

    ಕರೆಯದಿದ್ರೂ ಗೃಹ ಪ್ರವೇಶ ಸಮಾರಂಭಕ್ಕೆ ಬಂದಿದ್ದಲ್ಲದೆ ಅಸಹ್ಯವಾಗಿ ವರ್ತಿಸಿದ ತೃತೀಯ ಲಿಂಗಿಗಳು!

    ಸೂಲಿಬೆಲೆಯಲ್ಲಿ ರಾಜಕಾಲುವೆಗಳ ಅವ್ಯವಸ್ಥೆ; ಮಳೆ ಬಂದರೆ ಮನೆಗೇ ನುಗ್ಗುತ್ತೆ ನೀರು ಒತ್ತುವರಿಯಿಂದ ಸಾರ್ವಜನಿಕರಿಗೆ ಸಂಕಷ್ಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts