More

    ಪೆಟ್ರೋಲ್ 40 ರೂ.ಗೆ ಸಿಗುತ್ತೇ ಅಂದಿದ್ರಿ: ಪತ್ರಕರ್ತನ ಪ್ರಶ್ನೆಗೆ ಬಾಬಾ ರಾಮ್​ದೇವ್​ ಉತ್ತರ ಹೀಗಿತ್ತು…

    ನವದೆಹಲಿ: ಪೆಟ್ರೋಲ್​ ಮತ್ತು ಗ್ಯಾಸ್​ ಬೆಲೆ ಕಡಿಮೆಯಾಗುತ್ತದೆ ಎಂಬ ಈ ಹಿಂದಿನ ಹೇಳಿಕೆಯನ್ನು ನೆನಪು ಮಾಡಿದ್ದಕ್ಕೆ ಪತ್ರಕರ್ತರ ವಿರುದ್ಧ ಯೋಗ ಗುರು ಬಾಬಾ ರಾಮ್​ದೇವ್ ಅವರು ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ​

    ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಪತ್ರಕರ್ತರೊಬ್ಬರು ಪತಂಜಲಿ ಬ್ರಾಂಡ್ ಅಂಬಾಸಿಡರ್ ಬಾಬಾ ರಾಮ್​ದೇವ್​ ಅವರು ಈ ಹಿಂದೆ ಮಾಧ್ಯಮಕ್ಕೆ ನೀಡಿದ ಹೇಳಿಕೆಯ ಬಗ್ಗೆ ಪ್ರಶ್ನಿಸಿದರು. ಜನರು ಲೀಟರ್‌ಗೆ 40 ರೂಪಾಯಿಗೆ ಪೆಟ್ರೋಲ್ ಮತ್ತು 300 ರೂಪಾಯಿಗೆ ಎಲ್​ಪಿಜಿ ಸಿಲಿಂಡರ್​ ನೀಡುವ ಸರ್ಕಾರವನ್ನು ಪರಿಗಣಿಸಬೇಕು ಎನ್ನುವ ಮೂಲಕ ಬಿಜೆಪಿ ಪರ ಮಾತನಾಡಿದ್ದರು.

    ಈ ಬಗ್ಗೆ ಪತ್ರಕರ್ತ ಕೇಳಿದ್ದಕ್ಕೆ ಅಸಮಾಧಾನಗೊಂಡ ರಾಮ್​ದೇವ್​, ನಾನು ಕಾಮೆಂಟ್ ಮಾಡಿದೆ. ನೀವು ಏನು ಮಾಡುತ್ತೀರಿ? ಸದ್ಯಕ್ಕೆ ಬಾಯಿ ಮುಚ್ಚು. ಮತ್ತೆ ಕೇಳಿದರೆ ಚೆನ್ನಾಗಿಲ್ಲ. ಈ ರೀತಿ ಮಾತನಾಡಬೇಡ, ನೀನು ಸಭ್ಯ ತಂದೆ ತಾಯಿಯ ಮಗನಾಗಿರಬೇಕು ಎಂದಿದ್ದಾರೆ.

    ಕಷ್ಟದ ಸಮಯದಲ್ಲಿ ಜನರು ಕಷ್ಟಪಟ್ಟು ಕೆಲಸ ಮಾಡುವಂತೆ ರಾಮ್‌ದೇವ್ ಮನವಿ ಮಾಡಿದರು. ಸರ್ಕಾರ ಹೇಳುತ್ತದೆ ಇಂಧನ ಬೆಲೆ ಕಡಿಮೆಯಾದರೆ, ನಾವು ತೆರಿಗೆ ಪಡೆಯುವುದಿಲ್ಲ. ಇದರಿಂದ ಅವರು ದೇಶವನ್ನು ಹೇಗೆ ನಡೆಸುತ್ತಾರೆ? ಹೇಗೆ ಸಂಬಳ ಪಾವತಿಸುತ್ತಾರೆ? ರಸ್ತೆಗಳನ್ನು ನಿರ್ಮಿಸುತ್ತಾರೆ? ಹೌದು, ಹಣದುಬ್ಬರ ಕಡಿಮೆಯಾಗಬೇಕು, ನಾನು ಒಪ್ಪುತ್ತೇನೆ … ಆದರೆ ಜನರು ಕಷ್ಟಪಟ್ಟು ಕೆಲಸ ಮಾಡಬೇಕು. ನಾನು ಕೂಡ ಬೆಳಗ್ಗೆ 4 ಗಂಟೆಗೆ ಎದ್ದು ರಾತ್ರಿ 10 ಗಂಟೆಯವರೆಗೆ ಕೆಲಸ ಮಾಡುತ್ತೇನೆ ಎಂದು ರಾಮ್‌ದೇವ್ ಹೇಳಿದರು. ಈ ವೇಳೆ ಅವರ ಸುತ್ತಲೂ ಕುಳಿತಿದ್ದ ಅವರ ಬೆಂಬಲಿಗರು ಚಪ್ಪಾಳೆ ತಟ್ಟಿದರು.

    ದೇಶದ ಜನತೆಗೆ ಸತತ ಇಂಧನ ದರ ಏರಿಕೆಯ ಬಿಸಿ ಜೋರಾಗಿಯೇ ತಟ್ಟಿದೆ. ಕಳೆದ 10 ದಿನಗಳಿಂದ ನಿರಂತರವಾಗಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆ ಕಾಣುತ್ತಿದೆ. ಕೇವಲ 10 ದಿನಗಳಲ್ಲೇ 9ನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಆಯಿಲ್​ ಕಂಪನಿಗಳು ಗ್ರಾಹಕರಿಗೆ ಬ್ಯಾಕ್​ ಟು ಬ್ಯಾಕ್​ ಶಾಕ್​ ನೀಡುತ್ತಿವೆ. ಇಂದು (ಮಾ.31) ಪೆಟ್ರೋಲ್ ಮತ್ತು ಡೀಸೆಲ್​ ಕ್ರಮವಾಗಿ 80​ ಪೈಸೆಯಷ್ಟು ಏರಿಕೆಯಾಗಿದೆ. ಕಳೆದ 10 ದಿನಗಳಲ್ಲಿ ಒಟ್ಟು 6.40 ರೂ. ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರ ಬದುಕು ಭಾರವಾಗಿದೆ. (ಏಜೆನ್ಸೀಸ್​)

    ಜೀವನದಲ್ಲಿ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ: ಅತ್ಯಂತ ನೋವಿನ ಕ್ಷಣ ಬಿಚ್ಚಿಟ್ಟ ಪ್ರಕಾಶ್​ ರಾಜ್​

    ಕಚ್ಚಾ ಬಾದಾಮ್​ ಹಾಡಿಗೆ ಸೊಂಟ ಬಳುಕಿಸಿದ ಶಾಸಕಿ ರೋಜಾ: ವಿಡಿಯೋ ವೈರಲ್​!

    ನನ್ನ ಸಾವು ನನ್ನ ಮುಗ್ಧತೆಯನ್ನು ನಿರೂಪಿಸುತ್ತದೆ: ಆತ್ಮಹತ್ಯೆ ಮಾಡ್ಕೊಂಡ ವೈದ್ಯೆಯ ನೋವಿನ ಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts