More

    ಇದನ್ನು ನೋಡಿ ಅಳಬೇಕೋ ಅಥವಾ ನಗಬೇಕೋ ಎಂದು ಗೊತ್ತಾಗ್ತಿಲ್ಲ ಎಂದ ಯುಪಿ ಮಾಜಿ ಸಿಎಂ!

    ನವದೆಹಲಿ: ಹೆಮ್ಮಾರಿ ಕರೊನಾ ವೈರಸ್​ನಿಂದ ಗೋಮೂತ್ರ ಮತ್ತು ಸಗಣಿ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬ ನಂಬಿಕೆಯಿಂದ ಅವುಗಳ ಮಿಶ್ರಣವನ್ನು ದೇಹಕ್ಕೆ ಲೇಪಿಸಿಕೊಂಡಿರುವ ಗುಜರಾತಿನ ಅಹಮದಾಬಾದ್​ ಜನರ ವಿಡಿಯೋವೊಂದರ ಕುರಿತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಬುಧವಾರ ಟೀಕಿಸಿದ್ದಾರೆ.

    ಈ ವಿಡಿಯೋ ನೋಡಿ ನಾವು ನಗಬೇಕೋ ಅಥವಾ ಅಳಬೇಕೋ? ಎಂದು ಅಖಿಲೇಶ್​ ಯಾದವ್​ ಅವರು ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

    ಅಹಮದಾಬಾದ್​ನ ಶ್ರೀ ಗುರುಕುಲ ವಿಶ್ವವಿದ್ಯಾ ಪ್ರತಿಷ್ಠಾಣಂ ಹೆಸರಿನ ಶಾಲೆಯಲ್ಲಿ ಈ ಅಭ್ಯಾಸ ಪ್ರತಿದಿನ ನಡೆಯುತ್ತಿದೆ. ಇಲ್ಲಿಗೆ ವಾರಕ್ಕೊಮ್ಮೆ ಬರುವ ಜನರು ಸಗಣಿ ಮತ್ತು ಗೋಮೂತ್ರವನ್ನು ಮಿಶ್ರಣ ಮಾಡಿ ತಮ್ಮ ದೇಹಕ್ಕೆ ಲೇಪಿಸಿಕೊಳ್ಳುತ್ತಾರೆ ಮತ್ತು ಗೋವುಗಳನ್ನು ತಬ್ಬಿಕೊಳ್ಳುವ ಮೂಲಕ ಅವುಗಳಿಗೆ ಗೌರವ ನೀಡುತ್ತಾರೆ. ಅಲ್ಲದೆ, ಯೋಗಾಭ್ಯಾವೂ ಸಹ ನಡೆಯುತ್ತದೆ. ಅಚ್ಚರಿಯಂದರೇ ತಾವು ಲೇಪಿಸಿಕೊಂಡ ಸಗಣಿ ಮತ್ತು ಗೋವಿನ ಮಿಶ್ರಣವನ್ನು ಹಾಲು ಮತ್ತು ಮಜ್ಜಿಗೆಯಿಂದ ತೊಳೆಯುತ್ತಾರೆ.

    ನಾವು ನೋಡುತ್ತಿದ್ದೇವೆ… ವೈದ್ಯರು ಸಹ ಇಲ್ಲಿಗೆ ಬರುತ್ತಿದ್ದಾರೆ. ಈ ಚಿಕಿತ್ಸೆಯು ಅವರ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಅವರು ಯಾವುದೇ ಭಯವಿಲ್ಲದೆ ರೋಗಿಗಳ ಮುಂದೆ ಹೋಗಬಹುದು ಎಂದು ನಂಬಿರುವುದಾಗಿ ಔಷಧೀಯ ಕಂಪನಿಯೊಂದರ ಸಹಾಯಕ ವ್ಯವಸ್ಥಾಪಕ ಗೌತಮ್ ಮನಿಲಾಲ್ ಬೋರಿಸಾ ಹೇಳಿದ್ದಾರೆ. ಕಳೆದ ವರ್ಷ ಕೋವಿಡ್​ನಿಂದ ಚೇತರಿಸಿಕೊಳ್ಳಲು ಸಹ ಇದು ಸಹಾಯ ಮಾಡಿತು ಎಂದಿದ್ದಾರೆ.

    ಭಾರತ ಮತ್ತು ವಿಶ್ವದಾದ್ಯಂತ ವೈದ್ಯರು ಮತ್ತು ವಿಜ್ಞಾನಿಗಳು ಕೋವಿಡ್​ಗೆ ಪರ್ಯಾಯ ಚಿಕಿತ್ಸೆಯನ್ನು ಅಭ್ಯಾಸ ಮಾಡುವುದರ ವಿರುದ್ಧ ಪದೇ ಪದೇ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಹೀಗೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಸಂಕೀರ್ಣ ಆಗಬಹುದು ಎಂದು ಎಚ್ಚರಿಸಿದ್ದಾರೆ.

    ಕರೊನಾ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಗೋವಿನ ಸಗಣಿ ಅಥವಾ ಮೂತ್ರವು ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧಾರಿತವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ. ಜಯಲಾಲ್​ ತಿಳಿಸಿದ್ದಾರೆ. ಗೋವಿನ ಈ ಉತ್ಪನ್ನಗಳನ್ನು ಹಚ್ಚಿಕೊಳ್ಳುವುದು ಅಥವಾ ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯವಾಗಲಿದೆ ಮತ್ತು ಇತರ ರೋಗಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಕಾನ್ಸ್​ಟೇಬಲ್​ ಜತೆ ವಿಷ ಕುಡಿದಿದ್ದ ಮಹಿಳಾ ಎಸ್​ಐ ಸಾವು: ದುರಂತ ಸಾವಿನ ರಹಸ್ಯ ಬಯಲು!

    2 ಇನ್​ಕ್ರಿಮೆಂಟ್​ ನೀಡಿದ ಐಟಿ ಕಂಪನಿಗಳು: ಶೇಕಡ 6ರಿಂದ 14ರಷ್ಟು ಸಂಬಳ ಹೆಚ್ಚಳ ಕರೊನಾ ಸಂಕಷ್ಟದ ಕಾರಣ ವಿಳಂಬ

    ಇದೀಗ ಪಕ್ಕಾ; ಜೂನಿಯರ್‌ NTR ಗೆ ಪ್ರಶಾಂತ್ ನೀಲ್ ನಿರ್ದೇಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts