More

    ಯೂಕ್ರೇನ್​ನಿಂದ ಬಾಂಗ್ಲಾ ಪ್ರಜೆಗಳ ಸ್ಥಳಾಂತರ: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬಾಂಗ್ಲಾ ಪ್ರಧಾನಿ

    ನವದೆಹಲಿ: ಯುದ್ಧ ಪೀಡಿತ ಯೂಕ್ರೇನ್​ನಿಂದ ತಮ್ಮ ದೇಶದ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದಕ್ಕೆ ಬಾಂಗ್ಲಾದೇಶದ ಪ್ರಧಾನಿ ಶೇಖ್​ ಹಸಿನಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

    ರಷ್ಯಾವು ಬೆಳಗ್ಗೆ 10 ಗಂಟೆಯಿಂದ (ಮಾಸ್ಕೋ ಸಮಯ) ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿ, ಕೈವ್, ಚೆರ್ನಿಹಿವ್, ಸುಮಿ, ಖಾರ್ಕಿವ್ ಮತ್ತು ಮರಿಯುಪೋಲ್ ನಗರಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ಸ್ಥಾಪಿಸಿದೆ. ಬಳಿಕ ಭಾರತವು ಮಂಗಳವಾರ ಯೂಕ್ರೇನ್‌ನ ಸುಮಿಯಿಂದ ಪೋಲ್ಟವಾಗೆ ‘ಆಪರೇಷನ್ ಗಂಗಾ’ ಅಡಿಯಲ್ಲಿ ಯೂಕ್ರೇನ್​ನಲ್ಲಿ ಸಿಲುಕಿರುವ ನಾಗರಿಕರನ್ನು ಸ್ಥಳಾಂತರಿಸಲು ಪ್ರಾರಂಭಿಸಿತು.

    ಇಂಡಿಯನ್ ವರ್ಲ್ಡ್ ಫೋರಂನ ಅಧ್ಯಕ್ಷ ಪುನೀತ್ ಸಿಂಗ್ ಚಾಂಧೋಕ್ ಅವರ ಪ್ರಕಾರ, ಸುಮಿಯಿಂದ ಭಾರತೀಯರನ್ನು ಹೊತ್ತ 12 ಬಸ್‌ಗಳು ಸುರಕ್ಷಿತ ತಾಣಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. ಭಾರತೀಯ ರಾಯಭಾರಿ ಕಚೇರಿ ಮತ್ತು ರೆಡ್‌ಕ್ರಾಸ್‌ನ ಅಧಿಕಾರಿಗಳು 12 ಬಸ್​ಗಳಿಗೆ ಬೆಂಗಾವಲು ಪಡೆಯಾಗಿ ಸಹಾಯ ಮಾಡಿದರು ಎಂದು ಹೇಳಿತು.

    ಸ್ಥಳಾಂತರ ವೇಳೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳನ್ನು ಸಹ ಭಾರತೀಯ ರಾಯಭಾರಿ ಕಚೇರಿ ಸುರಕ್ಷಿತ ತಾಣಕ್ಕೆ ಸ್ಥಳಾಂತರ ಮಾಡಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾ ಪ್ರಧಾನಿ ಶೇಖ್​ ಹಸಿನಾ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.


    ಪಾಕಿಸ್ತಾನಿ ಯುವತಿಯೊಬ್ಬಳು ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾಳೆ. ವಿಡಿಯೋದಲ್ಲಿ ಮಾತನಾಡಿರುವ ಯುವತಿ, ಸಂಕಷ್ಟದ ಸ್ಥಿತಿಯಲ್ಲಿ ನಮ್ಮನ್ನು ಯುದ್ಧ ಭೂಮಿಯಿಂದ ಸುರಕ್ಷಿತವಾಗಿ ಹೊರಬರಲು ಸಹಾಯ ಮಾಡಿದ ಭಾರತೀಯ ರಾಯಭಾರಿ ಕಚೇರಿ ಮತ್ತು ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾಳೆ. ಅಲ್ಲದೆ, ನಾವು ಸುರಕ್ಷಿತವಾಗಿ ನಮ್ಮ ದೇಶಕ್ಕೆ ಮರಳುತ್ತೇವೆ ಎಂಬ ಭರವಸೆ ಇದೆ ಎಂದಿದ್ದಾಳೆ. (ಏಜೆನ್ಸೀಸ್​)

    ಯುದ್ಧ ಪೀಡಿತ ಯೂಕ್ರೇನ್​ನಿಂದ ಸುರಕ್ಷಿತ ಸ್ಥಳಾಂತರ: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪಾಕ್​ ಯುವತಿ

    ಖಂಡಿತ ಮದುವೆ ಆಗ್ತಾನೆ! ಪ್ರಭಾಸ್ ಬಗ್ಗೆ​ ಯಾರಿಗೂ ತಿಳಿಯದ ರಹಸ್ಯವೊಂದನ್ನು ಬಿಚ್ಚಿಟ್ಟ ಅವರ ದೊಡ್ಡಮ್ಮ

    ಬೆತ್ತಲೆ ದೇಹ ತೋರಿಸು ಎಂದ ನೆಟ್ಟಿಗನಿಗೆ ನಟಿ ಯಶಿಕಾ ಆನಂದ್​ ಕೊಟ್ಟ ಖಡಕ್​ ಉತ್ತರ ಹೀಗಿತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts