More

    ಮಾಜಿ ಸಚಿವ ಪಾರ್ಥ ಚಟರ್ಜಿ-ನಟಿ ಅರ್ಪಿತಾ ನಡುವೆ ಲೈಂಗಿಕ ಸಂಬಂಧ? ಸುಳಿವು ಕೊಟ್ಟ ಲೈಂಗಿಕ ಆಟಿಕೆಗಳು

    ಕೋಲ್ಕತ: ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರ ಮನೆಗಳಲ್ಲಿ ರಾಶಿ ರಾಶಿ ಹಣವನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿರುವುದು ಬಹುತೇಕರಿಗೆ ತಿಳಿದಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ, ಚಿನ್ನದ ಗಟ್ಟಿ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಅರ್ಪಿತಾ ಮನೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಇದೀಗ ಮತ್ತೊಂದು ವಸ್ತು ಬೆಳಕಿಗೆ ಬಂದಿದೆ. ಈ ವಿಚಾರವನ್ನು ನಟಿ ಶ್ರೀಲೇಖಾ ಮಿತ್ರಾ ಅವರು ತಮ್ಮ ಟ್ವಿಟರ್​ ಮೂಲಕ ತಿಳಿಸಿದ್ದಾರೆ. ಅದೇನೆಂದರೆ, ಅರ್ಪಿತಾ ಮನೆಯಲ್ಲಿ ಅನೇಕ ಸೆಕ್ಸ್​ ಟಾಯ್ಸ್​ (ಲೈಂಗಿಕ ಆಟಿಕೆಗಳು) ಪತ್ತೆಯಾಗಿವೆಯಂತೆ.

    ಲೈಂಗಿಕ ಆಟಿಕೆಗಳು ಪತ್ತೆಯಾಗಿರುವು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಯಾರು ಅವುಗಳನ್ನು ತಂದವರು? ಅವುಗಳ ಉಪಯೋಗವೇನು? ಅವುಗಳನ್ನು ಅರ್ಪಿತಾರಿಗೆ ಯಾರು ಕೊಟ್ಟಿದ್ದು? ಅವುಗಳನ್ನು ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ್ರಾ? ಅವುಗಳನ್ನು ಕೊಳ್ಳಲು ಕಾರಣ ಏನು? ಎಂದು ಪ್ರಶ್ನೆಗಳು ಹುಟ್ಟಿಕೊಂಡಿವೆ. ಅರ್ಪಿತಾ-ಪಾರ್ಥ ಚಟರ್ಜಿ ನಡುವಿನ ವೈಯಕ್ತಿಕ ಜೀವನ ಅಥವಾ ಲೈಂಗಿಕ ಜೀವನದ ಪ್ರಮುಖ ಅಂಶಗಳು ಈ ಸೆಕ್ಸ್ ಟಾಯ್ಸ್​ ಮೂಲಕ ಬರಬಹುದು ಎಂದು ಕೆಲವರು ನಂಬುತ್ತಾರೆ.

    ಬೆಳ್ಳಿಯ ಬಟ್ಟಲುಗಳು ಸಹ ಅರ್ಪಿತಾ ಮನೆಯಲ್ಲಿ ಸಿಕ್ಕಿವೆ. ಬೆಳ್ಳಿಯ ಬಟ್ಟಲುಗಳು ತುಂಬಾ ದುಬಾರಿಯಲ್ಲ. ಆದರೆ ಈ ಬೆಳ್ಳಿಯ ಬಟ್ಟಲಿಗೆ ಇನ್ನೊಂದು ಸಾಮಾಜಿಕ ಅಂಶವಿದೆ. ಬಂಗಾಳದಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳಿಗೆ ಬೆಳ್ಳಿಯ ಬಟ್ಟಲನ್ನು ನೀಡಲಾಗುತ್ತದೆ. ಇದು ಪ್ರಾಚೀನ ಕಾಲದಿಂದ ನಡೆದುಕೊಂಡು ಬಂದಿದೆ. ಮಡಿಲು ಬೆಳಗುವ ಮೂಲಕ ಮುಂದಿನ ಪೀಳಿಗೆಯನ್ನು ಜಗತ್ತಿಗೆ ತರಲಿ ಎಂಬ ಶುಭ ಹಾರೈಕೆ ಇದೆ. ಇಷ್ಟೆಲ್ಲ ವಸ್ತುಗಳು ಅರ್ಪಿತಾ ಫ್ಲಾಟ್‌ಗೆ ಏಕೆ ಬಂದವು ಎಂಬ ಗೊಂದಲವಿದೆ. ಇದಕ್ಕೆಲ್ಲ ವಿಚಾರಣೆಯ ಬಳಿಕ ಉತ್ತರ ದೊರೆಯಲಿದೆ.

    ಏನಿದು ಹಗರಣ?
    ಬಂಗಾಳದ ಗ್ರೂಪ್ ‘ಸಿ’ ಮತ್ತು ‘ಡಿ’ ಹಾಗೂ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿನ ಹಗರಣದ ತನಿಖೆ ನಡೆಸುವಂತೆ ಕೋಲ್ಕತ ಹೈಕೋರ್ಟ್​ ಈ ಹಿಂದೆ ನಿರ್ದೇಶಿಸಿತ್ತು. ಇದಾದ ಬಳಿಕ ಸಿಬಿಐ ಈ ಸಂಬಂಧ ಎಫ್​ಐಆರ್​ ದಾಖಲಿಸಿತ್ತು. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಇ.ಡಿ ಅರ್ಪಿತಾ ಹಾಗೂ ಸೇರಿದಂತೆ ಅನೇಕರ ಮನೆಗಳ ಮೇಲೆ ದಾಳಿ ನಡೆಸಿದೆ.

    ಅಂದಹಾಗೆ ಸಚಿವ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದರು. ಆದರೆ, ಅವರನ್ನು ವಜಾಗೊಳಿಸಲಾಗಿದೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. (ಏಜೆನ್ಸೀಸ್​)

    VIDEO| ವೃದ್ಧರೊಬ್ಬರ ಮೇಲೆ ಮನಬಂದಂತೆ ಥಳಿಸಿದ ಕಾನ್ಸ್​ಟೇಬಲ್​: ವಿಡಿಯೋ ನೋಡಿ ನೆಟ್ಟಿಗರ ಆಕ್ರೋಶ

    ರವಿತೇಜರ ಹೊಸ ಚಿತ್ರದಲ್ಲಿ ನರೇಶ್​-ಪವಿತ್ರಾರನ್ನು ತೆರೆ ಮೇಲೆ ನೋಡಿ ಬಿದ್ದು ಬಿದ್ದು ನಕ್ಕಿದ ಪ್ರೇಕ್ಷಕರು! ಕಾರಣ ಹೀಗಿದೆ…

    ಚಿಕ್ಕ ವಯಸ್ಸಿನಲ್ಲೇ ಪ್ರೀತಿಸಿ 18 ವರ್ಷ ತುಂಬಿದ ಬಳಿಕ ಮದ್ವೆಯಾದ ಯುವತಿಯ ಬದುಕು ದುರಂತ ಅಂತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts