More

    ಮನುಕುಲಕ್ಕೆ ಅಪಾಯಕಾರಿ ಸುದ್ದಿ: ಸಮುದ್ರದಲ್ಲಾಗುತ್ತಿದೆ ಬದಲಾವಣೆ, 2050ರ ವೇಳೆಗೆ ಕಾದಿದೆ ಗಂಡಾಂತರ!

    ವಾಷಿಂಗ್ಟನ್​: ಮನುಕಲಕ್ಕೆ ಅಪಾಯಕಾರಿ ಎನಿಸುವ ಮಾಹಿತಿಯೊಂದು ಹೊರಬಿದ್ದಿದೆ. 2050ರ ವೇಳೆಗೆ ಯುನೈಟೆಡ್​ ಸ್ಟೇಟ್ಸ್ ಕರಾವಳಿ ಪ್ರದೇಶ​ದ ಉದ್ದಕ್ಕೂ ಸಮುದ್ರದ ಮಟ್ಟ 10 ರಿಂದ 12 ಇಂಚು (25 ರಿಂದ 30 ಸೆಂಟಿ ಮೀಟರ್)​ ಹೆಚ್ಚಾಗಲಿದೆ ಎಂಬ ಆತಂಕಕಾರಿ ವರದಿಯನ್ನು ನ್ಯೂ ಇಂಟರ್​ ಏಜೆನ್ಸಿ ಬಹಿರಂಗಪಡಿಸಿದೆ.

    ಸಮುದ್ರ ಮಟ್ಟ ಏರಿಕೆಯಿಂದಾಗಿ ಮುಂದಿನ 30 ವರ್ಷಗಳಲ್ಲಿ ಕರಾವಳಿ ಪ್ರದೇಶದಲ್ಲಿ ಪ್ರವಾಹಗಳು ಹೆಚ್ಚಾಗಲಿವೆ ಎಂದು ನಾಸಾ (NASA), ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇತರ ಫೆಡರಲ್ ಏಜೆನ್ಸಿಗಳನ್ನು ಒಳಗೊಂಡಿರುವ ಅಂತರ-ಸಂಸ್ಥೆಯ ಸಮುದ್ರ ಮಟ್ಟ ಏರಿಕೆಯ ಕಾರ್ಯಪಡೆಯ ವರದಿಯಲ್ಲಿ ಉಲ್ಲೇಖವಾಗಿದೆ.

    ಮುಂದಿನ 30 ವರ್ಷಗಳಲ್ಲಿ ಉಂಟಾಗುವ ಸಮುದ್ರ ಮಟ್ಟದ ಏರಿಕೆಯು ಕಳೆದ 100 ವರ್ಷಗಳಲ್ಲಿ ಉಂಟಾಗಿರುವ ಸಮುದ್ರ ಮಟ್ಟದ ಏರಿಕೆಗೆ ಸಮವಾಗಿರಲಿದೆ ಎಂದು ಇಂಟರ್​ ಏಜೆನ್ಸಿ ವರದಿಯಲ್ಲಿರುವುದನ್ನು ಕ್ಸಿನುವಾ ಸುದ್ದಿ ಸಂಸ್ಥೆ ತಿಳಿಸಿದೆ.

    ಹಿಮನದಿಗಳು ಮತ್ತು ಮಂಜುಗಡ್ಡೆಗಳ ಕರಗುವಿಕೆ ಹಾಗೂ ಸಮುದ್ರ, ಭೂಮಿ ಮತ್ತು ಮಂಜುಗಡ್ಡೆಗಳ ನಡುವಿನ ಸಂಕೀರ್ಣ ಪ್ರಕ್ರಿಯೆಗಳು ಸಮುದ್ರ ಮಟ್ಟದ ಏರುವಿಕೆಗೆ ಯಾವ ರೀತಿ ಕೊಡುಗೆ ನೀಡುತ್ತಿದೆ ಎಂಬ ಸುಧಾರಿತ ತಿಳುವಳಿಕೆಯ ರೇಖಾ ಚಿತ್ರದ ಮೂಲಕ ಕಾರ್ಯಪಡೆಯು ಸಮುದ್ರ ಮಟ್ಟ ಏರಿಕೆಯ ಯೋಜನೆಯನ್ನು ಅಭಿವೃದ್ಧಿಪಡಿಸಿದೆ.

    ಇನ್ನು ಈ ವರದಿಯು ಹಿಂದಿನ ಅಧ್ಯಯನಗಳನ್ನು ಬೆಂಬಲಿಸುತ್ತದೆ. ಸಮುದ್ರ ಮಟ್ಟಗಳು ಅಪಾಯಕಾರಿ ದರದಲ್ಲಿ ಏರುತ್ತಲೇ ಇದ್ದು, ಪ್ರಪಂಚದಾದ್ಯಂತದ ಸಮುದಾಯಗಳಿಗೆ ಅಪಾಯವನ್ನು ಉಂಟುಮಾಡುತ್ತದೆ ಎಂದು ನಾಸಾದ ನಿರ್ವಾಹಕ ಬಿಲ್ ನೆಲ್ಸನ್ ತಿಳಿಸಿದರು. ಅಲ್ಲದೆ, ವಿಜ್ಞಾನವು ನಿರ್ವಿವಾದವಾಗಿದ್ದು, ಸದ್ಯದ ಹವಾಮಾನ ಬಿಕ್ಕಟ್ಟನ್ನು ತಗ್ಗಿಸಲು ತುರ್ತು ಕ್ರಮದ ಅಗತ್ಯವಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)

    ಹಿಜಾಬ್​ ವಿವಾದದ ಬಗ್ಗೆ ಮಾತನಾಡಿದ್ದಕ್ಕೆ ಹಾಟ್​ ಫೋಟೋ ಶೇರ್​: ನೆಟ್ಟಿಗನಿಗೆ ಸ್ವರಾ ಕೊಟ್ಟ ಉತ್ತರ ಹೀಗಿತ್ತು…

    VIDEO: ನಗ್ನವಾಗಿ ಮಲಗಿ, ಅಂದ ಹೆಚ್ಚಿಸಿಕೊಳ್ಳಿ ಎಂದ ವಿಶ್ವದ ಹಾಟೆಸ್ಟ್‌ ಅಜ್ಜಿ- ಗುಟ್ಟು ಹೇಳಿದ ನಾಲ್ಕು ಮಕ್ಕಳ ಅಮ್ಮ!

    ಹಿಜಾಬ್​ ವಿವಾದ: ಉಡುಪಿ ಎಂಜಿಎಂ ಕಾಲೇಜಲ್ಲಿ ಪಿಯುಸಿ ಪ್ರಾಕ್ಟಿಕಲ್ ಎಕ್ಸಾಂ ಮುಂದೂಡಿಕೆ

    ಮದ್ವೆ ಸಂಭ್ರಮದ ವೇಳೆ ದುರಂತ ಪ್ರಕರಣ: ಚಪ್ಪಡಿ ಕುಸಿದು ಬಾವಿಗೆ ಬಿದ್ದು ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts