More

    ಮೊಟ್ಟೆ ನೀಡಿಕೆ ಕುರಿತು ಸಮೀಕ್ಷೆ: ಮೊಟ್ಟೆ ಬೇಕೆಂದ ಶೇ.93 ಮಕ್ಕಳು

    ಕೊಪ್ಪಳ: ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಬಗ್ಗೆ ಪರ-ವಿರೋಧ ಚರ್ಚೆ ನಡೆದಿದ್ದು, ಈ ಬಗ್ಗೆ ಜಿಲ್ಲೆಯಲ್ಲಿ‌ ಸಮೀಕ್ಷೆ ಕೈಗೊಳ್ಳಲಾಗಿದ್ದು, ಶೇ.93 ರಷ್ಟು ಮಕ್ಕಳು ಮೊಟ್ಟೆ ಬೇಕು ಎಂದು ತಿಳಿಸಿದ್ದಾರೆ.

    ಅಕ್ಷರ ದಾಸೋಹ ಅಧಿಕಾರಿಗಳು ಈ ಬಗ್ಗೆ ಜಿಲ್ಲೆಯಲ್ಲಿ ಸಮೀಕ್ಷೆ ಕೈಗೊಂಡಿದ್ದಾರೆ. ಜಿಲ್ಲೆಯಲ್ಲಿ 1145 ಶಾಲೆಗಳಿದ್ದು, 178455 ಮಕ್ಕಳು ದಾಖಲಾಗಿದ್ದಾರೆ. ಇವರಲ್ಲಿ 167111 ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. 157045 ಮಕ್ಕಳು (ಶೇ.93) ಮೊಟ್ಟೆ ತಿಂದರೆ, 10666 ಮಕ್ಕಳು‌(ಶೇ.7) ಬಾಳೆ ಹಣ್ಣು ಸೇವಿಸುತ್ತಿದ್ದಾರೆಂದು ತಿಳಿದು ಬಂದಿದೆ.

    ಮೊಟ್ಟೆ ನೀಡುವುದನ್ನು ವಿರೋಧಿಸಿದ್ದ ಸ್ವಾಮೀಜಿಗಳ ವಿರುದ್ಧ ಬಾಲಕಿಯೊಬ್ಬಳು ಪ್ರತಿಭಟಿಸಿದ್ದಳು. ತಂದೆಯೊಬ್ಬರು ತಮ್ಮ ಮಗನ ಟಿಸಿ ಪಡೆದು ಖಾಸಗಿ ಶಾಲೆಗೆ ದಾಖಲಿಸಿದ್ದರು.

    ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ: ಸರ್ಕಾರಿ ಶಾಲೆ ಟಿಸಿ ಪಡೆದು ಮಗನನ್ನು ಖಾಸಗಿ ಶಾಲೆಗೆ ಸೇರಿಸಿದ ತಂದೆ

    ಮಠಕ್ಕೆ ಬಂದು ಮೊಟ್ಟೆ ತಿನ್ನುತ್ತೇವೆ! ತನ್ನ ಹೇಳಿಕೆ ಹಿಂಪಡೆದ ವಿದ್ಯಾರ್ಥಿನಿ ಕೊಟ್ಟ ಸ್ಪಷ್ಟನೆ ಹೀಗಿದೆ..

    ಮೊಟ್ಟೆ ವಿರೋಧಿಸಿದ್ರೆ ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗ್ತೀವಿ ಎಂದ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts