More

    ಕ್ರಿಸ್​ಮಸ್​ ವೇಳೆ ಮಕ್ಕಳಿಗೆ ಮಾಂಸಾಹಾರ ವಿತರಣೆ: ಶಾಲೆ ಮುಚ್ಚಿಸಿದ್ದ ಬಿಇಒ ಆದೇಶಕ್ಕೆ ಶಿಕ್ಷಣ ಇಲಾಖೆ ತಡೆ

    ಬಾಗಲಕೋಟೆ: ಕ್ರಿಸ್​ಮಸ್ ಆಚರಣೆಯ ದಿವಸ ಶಾಲಾ ಮಕ್ಕಳಿಗೆ ಮಾಂಸಾಹಾರ ನೀಡಿದ ಆರೋಪ ಕೇಳಿಬಂದಿದ್ದು, ಇಳಕಲ್​ ತಾಲೂಕಿನ ಸೆಂಟ್​ ಪೌಲ್​ ಶಾಲೆಯನ್ನು ಮುಚ್ಚುವಂತೆ ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ಶಿಕ್ಷಣ ಇಲಾಖೆ ತಡೆ ನೀಡಿದೆ.

    ಶಾಲೆಯ ಆಡಳಿತ ಮಂಡಳಿಗೆ ಶಿಕ್ಷಣಾಧಿಕಾರಿ ಪತ್ರ ಬರೆದಿದ್ದಾರೆ. ಕ್ರಿಸ್​ಮಸ್​ ಆಚರಣೆಯಂದು ನಿಮ್ಮ ಶಾಲೆಯಲ್ಲಿ ಮಕ್ಕಳಿಗೆ ಮಾಂಸಾಹಾರ ನೀಡಿರುವುದು ನಮ್ಮ ಗಮನಕ್ಕೆ ತರಲಾಗಿದೆ. ಈ ನಿಮ್ಮ ವರ್ತನೆ ನಮ್ಮ ಇಲಾಖೆ ಹಾಗೂ ಸಾರ್ವನಿಕರನ್ನು ಮುಜುಗರಕ್ಕೆ ದೂಡಿದೆ. ಮತ್ತೊಂದು ಆದೇಶ ಬರುವವರೆಗೂ ಶಾಲೆಯನ್ನು ತೆರೆಯುವಂತಿಲ್ಲ ಎಂದು ಪತ್ರದಲ್ಲಿ ಶಿಕ್ಷಣಾಧಿಕಾರಿ ಉಲ್ಲೇಖಿಸಿದ್ದಾರೆ.

    ಬಳಿಕ ಈ ವಿಚಾರ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಾಗ ಆದೇಶವನ್ನು ರದ್ದುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಅಥವಾ ಶಿಕ್ಷಣ ಇಲಾಖೆಗೆ ಮಾಹಿತಿ ನೀಡದೆ ಸ್ಥಳೀಯ ಅಧಿಕಾರಿ ಶಾಲೆ ಮುಚ್ಚುವಂತೆ ಆದೇಶ ನೀಡಿದ್ದರು ಎನ್ನಲಾಗಿದೆ. ಮಾಂಸಾಹಾರಿ ಆಹಾರವನ್ನು ನೀಡಿದ್ದಾರೆಂದ ಮಾತ್ರಕ್ಕೆ ನಾವು ಶಾಲೆಯನ್ನು ಮುಚ್ಚಲು ಸಾಧ್ಯವಿಲ್ಲ. ಇದೀಗ ಆ ಆದೇಶವನ್ನು ಹಿಂಪಡೆಯಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಶುಕ್ರವಾರ ತಿಳಿಸಿದೆ.

    ಈ ಹಿಂದೆ, ಬಲಪಂಥೀಯ ಗುಂಪುಗಳು ಶಾಲೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದವು ಮತ್ತು ಶಾಲೆಯು ಮಕ್ಕಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಲಾಗುತ್ತಿದೆ ಹಾಗೂ ಬೈಬಲ್ ಅನ್ನು ನಂಬುವಂತೆ ಮರುಳು ಮಾಡುತ್ತಿದೆ ಎಂದು ಆರೋಪಿಸಿತ್ತು. (ಏಜೆನ್ಸೀಸ್​)

    ಸುಮಾರು ಒಂದು ಗಂಟೆಗಳ ಕಾಲ ಲಿಫ್ಟ್​ನಲ್ಲಿ ಸಿಲುಕಿ ಪರದಾಡಿದ ಆಸಿಸ್​ ಮಾಜಿ ನಾಯಕ ಸ್ಟೀವ್​ ಸ್ಮಿತ್ ​

    ‘ಹೆಚ್ಚು ಹೆಂಡ್ತೀರು ಇರ್ಬೋದು, ಆದ್ರೆ ಸಂಸಾರ ನಡೆಸು ಎಂದು ಅವ್ರನ್ನ ಫೋರ್ಸ್‌ ಮಾಡೋ ಅಧಿಕಾರ ನಿಮಗಿಲ್ಲ’ ಎಂದ ಹೈಕೋರ್ಟ್‌

    ದುರಂತಕ್ಕೆ ದಾರಿ ಮಾಡಿದ್ದೇ ಅರ್ಚನಾಳ 3ನೇ ಗಂಡನ ಜತೆ ಮಗಳ ಸಲ್ಲಾಪ! ಒಂದೂವರೆ ತಿಂಗಳ ರಹಸ್ಯ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts