More

    ಸರ್ಜಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ: ಹೆಣ್ಣು ಮಗುವಿಗೆ ಜನ್ಮ ನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

    ಬೆಂಗಳೂರು: ಸರ್ಜಾ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ನಟ ಧ್ರುವ ಸರ್ಜಾರ ಪತ್ನಿ ಪ್ರೇರಣಾ ಭಾನುವಾರ (ಅ.2) ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

    ನಿನ್ನೆ (ಅ.1) ಸಂಜೆಯೇ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರು ಬನಶಂಖರಿಯ ಕೆ.ಆರ್. ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ಹೆರಿಗೆಗೆಂದು ದಾಖಲಾಗಿದ್ದರು. ಪತಿ ಧ್ರುವ ಸರ್ಜಾ ಕೂಡ ನಿನ್ನೆಯಿಂದಲೂ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರು. ಇದೀಗ ಹೆಣ್ಣು ಮಗು ಜನಿಸಿರುವ ಬಗ್ಗೆ ಧ್ರುವ ಸರ್ಜಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

    ಸುಂದರವಾದ ಹೆಣ್ಣು ಮಗುವಿನೊಂದಿಗೆ ಆಶೀರ್ವಾದ ಪಡೆದಿದ್ದೇವೆ. ಪ್ರೇರಣಾಗೆ ನಾರ್ಮಲ್ ಡೆಲಿವರಿ ಆಗಿದೆ. ವೈದ್ಯರಿಗೆ ಧನ್ಯವಾದಗಳು ಎಂದು ಧ್ರುವ ಸರ್ಜಾ ಅವರು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

    ಸರ್ಜಾ ಕುಟುಂಬಕ್ಕೆ ಹೊಸ ಅತಿಥಿ ಆಗಮನ: ಹೆಣ್ಣು ಮಗುವಿಗೆ ಜನ್ಮ ನೀಡಿದ ಧ್ರುವ ಸರ್ಜಾ ಪತ್ನಿ ಪ್ರೇರಣಾ

    ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರವು ಕಳೆದ ಸೆ.7ರಂದು ರಾಜಧಾನಿ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಅದ್ಧೂರಿಯಾಗಿ ನೆರವೇರಿತು. ಧ್ರುವ ಅವರ ಸೋದರ ಮಾವ, ಖ್ಯಾತ ನಟ ಅರ್ಜುನ್​ ಸರ್ಜಾ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಸರ್ಜಾ ಕುಟುಂಬಸ್ಥರು ಮತ್ತು ಅತ್ಯಾಪ್ತರ ವರ್ಗದವರು ಪಾಲ್ಗೊಂಡಿದ್ದರು. ವಿಶೇಷ ಫೋಟೋಶೂಟ್​ ಮೂಲಕ ಸೆ. 3ರಂದು ಧ್ರುವ ಸರ್ಜಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಪ್ರೇರಣಾ ಗರ್ಭಿಣಿಯಾಗಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದರು.

    ICU ಬೆಡ್​ ಮೇಲೆ ಮಲಗಿಕೊಂಡೇ ಸಬ್​ರಿಜಿಸ್ಟ್ರಾರ್​ ಕಚೇರಿಗೆ ಬಂದು ಆಸ್ತಿ ಪತ್ರಕ್ಕೆ ಸಹಿ ಹಾಕಿದ ವೃದ್ಧೆ!

    ರಸ್ತೆಯಲ್ಲಿ ಸಿಕ್ಕ 45 ಸಾವಿರ ರೂ. ಹಣವನ್ನು ಹಿಂತಿರುಗಿಸಿ ಮಾನವೀಯತೆ ಮೆರೆದ ತುಮಕೂರು ವ್ಯಕ್ತಿ

    ದೇವಸ್ಥಾನದಿಂದ ಹಿಂದಿರುಗುವಾಗ ಕೆರೆಗೆ ಉರುಳಿದ ಟ್ರ್ಯಾಕ್ಟರ್​: 26 ಯಾತ್ರಿಕರ ದುರ್ಮರಣ, ಪ್ರಧಾನಿ ಮೋದಿ ಸಂತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts