ಟ್ವಿಟರ್​ ವಿರುದ್ಧ ಸಿಡಿದೆದ್ದ ಪುನೀತ್ ಅಭಿಮಾನಿಗಳು: ಸುಶಾಂತ್​- ಸಿದ್ಧಾರ್ಥ್​ಗೆ ಇರುವ ಮನ್ನಣೆ ಅಪ್ಪುಗೆ ಯಾಕಿಲ್ಲ… ​

1 Min Read
ಟ್ವಿಟರ್​ ವಿರುದ್ಧ ಸಿಡಿದೆದ್ದ ಪುನೀತ್ ಅಭಿಮಾನಿಗಳು: ಸುಶಾಂತ್​- ಸಿದ್ಧಾರ್ಥ್​ಗೆ ಇರುವ ಮನ್ನಣೆ ಅಪ್ಪುಗೆ ಯಾಕಿಲ್ಲ... ​

ಬೆಂಗಳೂರು: ‘ನಗುಮುಖದ ರಾಜಕುಮಾರ’, ಸ್ಯಾಂಡಲ್​ವುಡ್​ನ ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಬಾರದ ಲೋಕಕ್ಕೆ ಹೋಗಿ 8 ತಿಂಗಳು ಕಳೆದರೂ ಕೋಟ್ಯಂತರ ಅಭಿಮಾನಿಗಳ ಮನದಲ್ಲಿ ನೋವು ಮಾತ್ರ ಕರಗಿಲ್ಲ. ಅಪ್ಪು ಫೋಟೋವನ್ನು ಅಸಂಖ್ಯಾತ ಜನರು ಮನೆಗಳಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದಾರೆ. ಪುನೀತ್​ ಭೂತಾಯಿಯ ಮಡಿಲು ಸೇರಿದ್ದರೂ ಅಭಿಮಾನಿಗಳಿಗೆ ಅವರ ಮೇಲಿರುವ ಪ್ರೀತಿ ಕಿಂಚಿತ್ತೂ ಕರಗಿಲ್ಲ. ಆದರೆ, ಈ ಸುದ್ದಿ ಅಪ್ಪು ಅಭಿಮಾನಿಗೆ ಕೊಂಚ ಬೇಸರ ಉಂಟು ಮಾಡುವುದಂತೂ ನಿಜ.

ಹೌದು, ಇದುವರೆಗೂ ಪುನೀತ್​ ರಾಜ್​ಕುಮಾರ್ ಅವರ ಅಧಿಕೃತ​ ಟ್ವಿಟರ್ ಖಾತೆಯಲ್ಲಿದ್ದ ಬ್ಲೂ ಟಿಕ್​ ಅನ್ನು ಇದೀಗ ತೆಗೆದು ಹಾಕಲಾಗಿದೆ. ಈ ಸಂಗತಿ ಪುನೀತ್​ ಫ್ಯಾನ್ಸ್​ಗೆ ಬೇಸರ ತರಿಸಿದೆ. ಹೀಗಾಗಿ ಟ್ವಿಟರ್​ನಲ್ಲಿ ಅಭಿಮಾನಿಗಳು ತಮ್ಮ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ.

ಟ್ವಿಟರ್​ ವಿರುದ್ಧ ಸಿಡಿದೆದ್ದ ಪುನೀತ್ ಅಭಿಮಾನಿಗಳು: ಸುಶಾಂತ್​- ಸಿದ್ಧಾರ್ಥ್​ಗೆ ಇರುವ ಮನ್ನಣೆ ಅಪ್ಪುಗೆ ಯಾಕಿಲ್ಲ... ​

ಬಾಲಿವುಡ್​ ನಟರಾದ ಸುಶಾಂತ್​ ಸಿಂಗ್​ ರಜಪೂತ್​ ಮತ್ತು ಸಿದ್ಧಾರ್ಥ್​ ಶುಕ್ಲಾ ಮೃತಪಟ್ಟಿದರೂ ಕೂಡ ಅವರ ಟ್ವಿಟರ್​ ಖಾತೆಯಲ್ಲಿ ಇನ್ನು ಬ್ಲೂ ಟಿಕ್​ ಇರುವುದು ಪುನೀತ್​ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಟ್ವಿಟರ್​ ಅನ್ನು ಪ್ರಶ್ನೆ ಮಾಡಿ ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಟ್ವಿಟರ್​ ಕಂಪನಿ ಅಭಿಮಾನಿಗಳನ್ನು ನೋಯಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.

ಟ್ವಿಟರ್​ ವಿರುದ್ಧ ಸಿಡಿದೆದ್ದ ಪುನೀತ್ ಅಭಿಮಾನಿಗಳು: ಸುಶಾಂತ್​- ಸಿದ್ಧಾರ್ಥ್​ಗೆ ಇರುವ ಮನ್ನಣೆ ಅಪ್ಪುಗೆ ಯಾಕಿಲ್ಲ... ​

ಈ ಕ್ಷಣದಲ್ಲಿ ಬ್ಲೂ ಟಿಕ್​ ಮರಳಿಸಿ ಎಂದು ಟ್ವಿಟರ್​ ಅನ್ನು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಟ್ರೆಂಡ್​ ಮಾಡಲು ನಿರ್ಧಾರ ಮಾಡಿದ್ದಾರೆ. ಕೊನೆಯ ಪಕ್ಷ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮೇಡಂ ಅವರ ಗಮನಕ್ಕೆ ಈ ವಿಚಾರವನ್ನು ತನ್ನಿ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾಕಷ್ಟು ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ಇಂದು ಪುನೀತ್​ ನಮ್ಮ ನಡುವೆ ಇಲ್ಲದಿದ್ದರೂ ಅವರ ಮೇಲಿನ ಅಭಿಮಾನ ಮಾತ್ರ ಅಭಿಮಾನಿಗಳಿಗೆ ಕಿಂಚಿತ್ತೂ ಕಡಿಮೆ ಆಗಿಲ್ಲ.

See also  ಮಹತ್ವದ ಕೇಸ್​ಗಳ ತನಿಖೆಗೆ ಕರೊನಾ ಅಡ್ಡಿ, ಸೋಂಕು ಭೀತಿಯಿಂದ ಹಳ್ಳ ಹಿಡಿಯುತ್ತಿವೆ ಶೇ.70 ಪ್ರಕರಣ

ಟ್ವಿಟರ್​ ವಿರುದ್ಧ ಸಿಡಿದೆದ್ದ ಪುನೀತ್ ಅಭಿಮಾನಿಗಳು: ಸುಶಾಂತ್​- ಸಿದ್ಧಾರ್ಥ್​ಗೆ ಇರುವ ಮನ್ನಣೆ ಅಪ್ಪುಗೆ ಯಾಕಿಲ್ಲ... ​

ಬಿಗ್​ಬಾಸ್ ಫೀವರ್ ಶುರು​: 9ನೇ ಸೀಸನ್​ನಲ್ಲಿ ಯಾರೆಲ್ಲ ಡೊಡ್ಮನೆ ಪ್ರವೇಶಿಸಲಿದ್ದಾರೆ? ಇಲ್ಲಿದೆ ಸಂಭವನೀಯ ಪಟ್ಟಿ​…

ಭಾರತ ಇಸ್ಲಾಮಿಕ್​ ಭಾರತದ ಆಡಳಿತ ಕಡೆಗೆ! ಬಿಹಾರದಲ್ಲಿ ಸಿಕ್ಕಿಬಿದ್ದ ಉಗ್ರರಿಬ್ಬರ ಭಯಾನಕ ಸಂಚು ಬಯಲು

ಮಹಿಳಾ ಪೊಲೀಸ್​ ಪರ ನಿಂತ ಸರ್ಕಾರಕ್ಕೆ ಸವಾಲೆಸೆದಿದ್ದ 8ರ ಬಾಲೆಗೆ ಕೊನೆಗೂ ಸಿಕ್ಕಿತು ಜಯ!

Share This Article