More

    VIDEO| ಥಾಯ್ಲೆಂಡ್​ ಪ್ರವಾಸದ ವಿಡಿಯೋ ಡೈರಿಯಲ್ಲಿ ಬಿಕಿನಿ ಅವತಾರದಲ್ಲಿ ದರ್ಶನ ಕೊಟ್ಟ ಹಾಟ್​ ಬ್ಯೂಟಿ ಆಶಿಕಾ!

    ಬೆಂಗಳೂರು: ಪ್ರಸ್ತುತ ಸ್ಯಾಂಡಲ್​ವುಡ್​ನಲ್ಲಿ ಇರುವ ಸ್ಟಾರ್​ ನಟಿಯರಲ್ಲಿ ಆಶಿಕಾ ರಂಗನಾಥ್​ ಕೂಡ ಒಬ್ಬರು. ಕೌಟುಂಬಿಕ ಪಾತ್ರಗಳಿಗೂ ಸೈ ಹಾಗೂ ಮೈಮಾಟ ಪ್ರದರ್ಶಿಸುವ ಬೋಲ್ಡ್​ ಪಾತ್ರಗಳಿಗೂ ಸೈ ಎನ್ನುವ ಆಶಿಕಾ, ಚಂದನವನದ ಬಹು ಬೇಡಿಕೆ ನಟಿಯಾಗಿದ್ದಾರೆ.

    ಸಾಲು ಸಾಲು ಸಿನಿಮಾಗಳಲ್ಲಿ ಆಶಿಕಾ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಅವತಾರ ಪುರುಷ ಸಿನಿಮಾ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಇದರ ಮಧ್ಯೆ ಶೂಟಿಂಗ್​ನಿಂದ ಬಿಡುವು ಪಡೆದುಕೊಂಡಿದ್ದ ಆಶಿಕಾ, ಥಾಯ್ಲೆಂಡ್​ ಪ್ರವಾಸಕ್ಕೂ ಹೋಗಿ ಬಂದಿದ್ದಾರೆ.

    ತಮ್ಮ ಸಹಜ ಸೌಂದರ್ಯದ ಮೂಲಕ ಸ್ಯಾಂಡಲ್​ವುಡ್​ನ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ, ಕೆಲ ದಿನಗಳ ಹಿಂದಷ್ಟೇ ಥಾಯ್ಲೆಂಡ್​ ಸಮುದ್ರ ಕಿನಾರೆಯಲ್ಲಿ ಬೋಲ್ಡ್​ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ್ದ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಈ ಹಿಂದೆ ವೈರಲ್​ ಆದ ಫೋಟೋಗಳಲ್ಲಿ ಆಶಿಕಾ ಅವರು ಥಾಯ್ಲೆಂಡ್​ನ ಟಪ್ ಐಲ್ಯಾಂಡ್ ನ್ಯಾಚುರಲ್​ ಬೀಚ್​ನಲ್ಲಿ ಕೆಂಪು ಬಣ್ಣದ ಬಿಕಿನಿ ಕಟ್​ ಮತ್ತು ಜೀನ್ಸ್​ ಶಾರ್ಟ್ಸ್​ ಧರಿಸಿ ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಬೋಟ್​ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಈ ಫೋಟೋಗಳು 2 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆಯುವ ಮೂಲಕ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.

    ಇದೀಗ ಪಟಾಕಿ ಪೋರಿಯೋ ಥಾಯ್ಲೆಂಡ್​ ಪ್ರವಾಸದ ವಿಡಿಯೋ ಡೈರಿ ಹಾಗೂ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದ ಒಂದು ದೃಶ್ಯದಲ್ಲಿ ಆಶಿಕಾ, ಬಿಕಿನಿ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರ ಮೈ ಬಿಸಿ ಏರಿಸಿದ್ದಾರೆ. ವಿಡಿಯೋದಲ್ಲಿ ಹಲವು ಅವತಾರಗಳಲ್ಲಿ ಆಶಿಕಾ, ಕಾಣಿಸಿಕೊಂಡಿದ್ದಾರೆ. ಸ್ನೇಹಿತರ ಜತೆ ಸಖತ್​ ಎಂಜಾಯ್​ ಮಾಡುತ್ತಿರುವ ದೃಶ್ಯಗಳು ಇವೆ.

    ವಿಡಿಯೋ ಮಾತ್ರವಲ್ಲದೆ, ಫೋಟೋಗಳನ್ನು ಸಹ ಆಶಿಕಾ ಪೋಸ್ಟ್​ ಮಾಡಿದ್ದಾರೆ. ಬಿಕಿನಿ ತೊಟ್ಟು ಬೋಟ್​ ಮೇಲೆ ಕುಳಿತು ಕ್ಯಾಮೆರಾಗೆ ಪೋಸ್​​ ನೀಡಿದ್ದಾರೆ. ಫೋಟೋ ಮತ್ತು ವಿಡಿಯೋಗಳಿಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್​ಗಳು ಬಂದಿವೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಪವನ್​ ಒಡೆಯರ್​ ನಿರ್ದೇಶನದ ಹಾಗೂ ನಟ ಇಶಾನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ರೇಮೋ ಸಿನಿಮಾದಲ್ಲಿ ಆಶಿಕಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಚಿತ್ರೀಕರಣ ಮುಗಿದಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ, ಹೆಸರಿಡಿದ ಸಿನಿಮಾಗಳಿಗೆ ಈಗಾಗಲೇ ಆಶಿಕಾ ಸಹಿ ಹಾಕಿದ್ದಾರೆ.​

    ನೀರು ತುಂಬಿದ ಬಕೆಟ್​ ಒಳಗೆ ಪತ್ನಿಯ ತಲೆ ಮುಳುಗಿಸಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ!

    ಥಾಯ್ಲೆಂಡ್​ ಬೀಚ್​ನಲ್ಲಿ ಆಶಿಕಾ ಸಹೋದರಿಯ ಹಾಟ್​ ಅವತಾರ: ಬೋಲ್ಡ್​ ಫೋಟೋಗಳು ವೈರಲ್!​

    ಕಾಮಿಡಿಗಿಂತ ಹೀರೋಗಳ ಜತೆ ರೊಮ್ಯಾನ್ಸ್​ ಮಾಡುವುದೇ ಸುಲಭ! ಬೋಲ್ಡ್​ ಹೇಳಿಕೆ ನೀಡಿದ ರಾಶಿ ಖನ್ನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts