More

    ಪುಷ್ಪಾ ಚಿತ್ರದ ಐಟಂ ಡಾನ್ಸ್​ಗೆ ನಟಿ ಸಮಂತಾ ಪಡೆದಿರುವ ಸಂಭಾವನೆ ಮೊತ್ತ ಕೇಳಿದ್ರೆ ದಂಗಾಗ್ತೀರಾ?

    ಹೈದರಾಬಾದ್​: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಚಿತ್ರದ ಮೊದಲ ಭಾಗ ಡಿಸೆಂಬರ್ 17ಕ್ಕೆ ಬಿಡುಗಡೆಯಾಗಲಿದೆ. ಎರಡು ಹಾಡುಗಳನ್ನು ಹೊರತುಪಡಿಸಿ, ಮಿಕ್ಕಂತೆ ಚಿತ್ರದ ಚಿತ್ರೀಕರಣ ಮುಗಿದಿದೆ. ಅದರಲ್ಲೂ ಒಂದು ಐಟಂ ಡಾನ್ಸ್​ನ ಚಿತ್ರೀಕರಣ ಬಾಕಿ ಇದ್ದು, ಆ ಹಾಡಿನಲ್ಲಿ ಯಾರು ಹೆಜ್ಜೆ ಹಾಕುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ಬಂದಿರುವ ಸುದ್ದಿಯ ಪ್ರಕಾರ, ಆ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಸಮಂತಾ ಒಪ್ಪಿಕೊಂಡಿದ್ದಾರಂತೆ. ಈ ಹಾಡಿಗೆ ಹೆಜ್ಜೆ ಹಾಕುವುದಕ್ಕೆ ಅವರಿಗೆ ಆಫರ್ ಕೊಟ್ಟಿದ್ದು ನಿರ್ದೇಶಕ ಸುಕುಮಾರ್.

    ಇತ್ತೀಚೆಗಷ್ಟೇ ನಾಗಚೈತನ್ಯ ಜತೆ ಡಿವೋರ್ಸ್​ ಪಡೆದುಕೊಂಡಿರುವ ಸಮಂತಾ ಇದೀಗ ಸಂಪೂರ್ಣ ಸಿನಿಮಾದತ್ತ ಚಿತ್ತ ಹರಿಸಿದ್ದಾರೆ. ಪುಷ್ಪಾ ಚಿತ್ರದ ಐಟಂ ಸಾಂಗ್​ನಲ್ಲಿ ಸೊಂಟ ಬಳಕಿಸಲು ಸಮಂತಾ ಕೇಳಿರುವ ಸಂಭಾವನೆ ಕೇಳಿದ್ರೆ ನಿಜಕ್ಕೂ ಶಾಕ್​ ಆಗುತ್ತದೆ. ಒಂದೇ ಒಂದು ಹಾಡಿಗೆ ಬರೋಬ್ಬರಿ 1.5 ಕೋಟಿ ರೂಪಾಯಿಯನ್ನು ಸಮಂತಾ ಪಡೆದುಕೊಂಡಿದ್ದಾರಂತೆ.

    ಸಮಂತಾಗೆ ‘ರಂಗಸ್ಥಲಂ’ ಮೂಲಕ ದೊಡ್ಡ ಬ್ರೇಕ್ ಕೊಟ್ಟವರು ಅದೇ ಸುಕುಮಾರ್. ಅಂಥವರು ಅವಕಾಶ ಕೊಟ್ಟರೆ ಇಲ್ಲ ಎನ್ನುವುದಕ್ಕಾಗುತ್ತದೆಯೇ? ಮೇಲಾಗಿ ಸಮಂತಾ ಇತ್ತೀಚೆಗೆ ನಟಿಸಿದ್ದು ಹೆಚ್ಚಾಗಿ ಮಹಿಳಾ ಪ್ರಧಾನ ಚಿತ್ರಗಳಲ್ಲೇ. ಡಿವೋರ್ಸ್ ನಂತರ ಚಿತ್ರರಂಗಕ್ಕೆ ರೀಎಂಟ್ರಿ ಕೊಡುವುದಕ್ಕೆ ಸಮಂತಾಗೆ ಒಂದು ದೊಡ್ಡ ಬಜೆಟ್​ನ ಮತ್ತು ಸ್ಟಾರ್ ಚಿತ್ರದ ಅವಶ್ಯಕತೆ ಇದ್ದು, ‘ಪುಷ್ಪಾ’ಗಿಂತ ಇನ್ನೊಂದು ಚಿತ್ರ ಸಿಗುವುದಕ್ಕೆ ಸಾಧ್ಯವೇ? ಹಾಗಾಗಿ, ಅಂಥದ್ದೊಂದು ಅವಕಾಶ ಸಿಗುತ್ತಿದ್ದಂತೆಯೇ ತಕ್ಷಣ ಒಪ್ಪಿದ್ದಾರಂತೆ ಸಮಂತಾ.

    ಐಟಂ ಸಾಂಗ್​ ಚಿತ್ರದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಇಡೀ ಚಿತ್ರಕ್ಕೆ ಈ ಸಾಂಗ್​ ಒಂದು ತಿರುವು ನೀಡಲಿದೆ ಎಂದು ಹೇಳಲಾಗಿದೆ. ಅಲ್ಲದೆ, ಒಳ್ಳೆಯ ಸಂಭಾವನೆ ಸಿಕ್ಕಿರುವುದರಿಂದ ಸಮಂತಾ ಎರಡು ಮಾತಾಡದೇ ಸೊಂಟ ಬಳಕಿಸಲು ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್​)

    2 ಸಾವಿರ ಮುಟ್ಟಲ್ಲ 3 ಸಾವಿರನೇ ಬೇಕು ಅಂದಿದ್ದ ಲೇಡಿ ಪಿಡಿಒ ಮತ್ತೊಂದು ಕರಾಳ ಮುಖ ಬಯಲು

    ಸೀರೆ ಧರಿಸಿ ಬರಲು ವಧುವಿನ ಕೊಠಡಿಗೆ ಹೋದ ವಧು ಮರಳಿ ಬರಲೇ ಇಲ್ಲ: ವರನಿಗೆ ಕಾದಿತ್ತು ಶಾಕ್!​

    ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿಯವರಿಗೆ ಗೌರವ ಸೂಚಿಸಲು ಹೋಗಿ KSRTC ಎಡವಟ್ಟು

    ಅಲ್ಲು ಅರ್ಜುನ್ ಪುಷ್ಪಾದಲ್ಲಿ ಸಮಂತಾ ಐಟಂ ಡಾನ್ಸ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts