More

    ಡಿವೋರ್ಸ್​ ಪರಿಹಾರ ನೀಡಲು ದುಬೈ ಪ್ರಧಾನಿಗೆ ಕೋರ್ಟ್​ ಆದೇಶ: ಪರಿಹಾರ ಮೊತ್ತ ಕೇಳಿದ್ರೆ ಬೆರಗಾಗೋದು ಖಂಡಿತ!

    ಲಂಡನ್​: ಮಾಜಿ ಪತ್ನಿಗೆ ವಿಚ್ಛೇದನ ಪರಿಹಾರ ಹಾಗೂ ಮಕ್ಕಳ ಭದ್ರತೆಗಾಗಿ 550 ಮಿಲಿಯನ್ ಪೌಂಡ್ (5509 ಕೋಟಿ ರೂ.) ನೀಡುವಂತೆ ಲಂಡನ್​ ಹೈಕೋರ್ಟ್,​ ದುಬೈ ಪ್ರಧಾನಿ ಶೇಖ್​ ಮೊಹಮ್ಮದ್​ ಬಿನ್​ ರಶೀದ್​ ಅಲ್​ ಮುಕ್ತೋಮ್​ಗೆ ಆದೇಶ ನೀಡಿದೆ. ಇದು ವಿಶ್ವದಲ್ಲೇ ಅತಿದೊಡ್ಡ ವಿಚ್ಛೇದನ ಪರಿಹಾರ ಎಂದು ಹೇಳಲಾಗಿದೆ.

    ಸದ್ಯ ಮುಂಗಡವಾಗಿ 2,516 ಕೋಟಿ ರೂ. ಪಾವತಿಸುವಂತೆ ನ್ಯಾಯಾಲಯ ಹೇಳಿದ್ದು, ಉಳಿದ ಹಣವನ್ನು ಇನ್ನು ಮೂರು ತಿಂಗಳಲ್ಲಿ ಕೊಡಲು ಆದೇಶಿಸಿದೆ. ಮತ್ತೊಂದು ಆದೇಶ ಬರುವವರೆಗೂ ತನ್ನಿಬ್ಬರು ಮಕ್ಕಳ ಉಳಿದ ಜೀವನದ ಭದ್ರತಾ ವೆಚ್ಚಗಳನ್ನು ಭರಿಸಬೇಕೆಂದು ಸಹ ಕೋರ್ಟ್​ ಹೇಳಿದೆ.

    ಅಲ್​ ಮುಕ್ತೋಮ್​ ಅವರ ಮಾಜಿ ಪತ್ನಿಯ ಹೆಸರು ರಾಜಕುಮಾರಿ ಹಯಾ ಬಿಂಟ್ ಅಲ್-ಹುಸೇನ್. ಇವರು ಅಲ್​ ಮುಕ್ತೋಮ್​ಗೆ ಆರನೇ ಪತ್ನಿ. ರಾಜಕುಮಾರಿ ಹಯಾ ಬಿಂಟ್, ಜೋರ್ಡಾನ್​ನ ಮಾಜಿ ಆಡಳಿತಗಾರ ಕಿಂಗ್​ ಹುಸೇನ್​ ಅವರ ಮಗಳು ಹಾಗೂ ಪ್ರಸ್ತುತ ಆಡಳಿತಗಾರ ಕಿಂಗ್​ ಅಬ್ದುಲ್ಲಾ ಅವರ ಮಲಸಹೋದರಿ.

    2019ರಲ್ಲಿ ರಾಜಕುಮಾರಿ ಹಯಾ ಬಿಂಟ್ ತನ್ನಿಬ್ಬರು ಮಕ್ಕಳೊಂದಿಗೆ ಜರ್ಮನಿಗೆ ಪರಾರಿಯಾಗಿ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ಜರ್ಮನಿಯಲ್ಲಿ ಆಶ್ರಯವನ್ನು ಕೇಳಿದರು. ತದನಂತರ ಅಲ್-ಮಕ್ತೂಮ್ ತನ್ನಿಬ್ಬರು ಮಕ್ಕಳನ್ನು ಬಿಟ್ಟುಕೊಡಲು ಜರ್ಮನಿಯ ವಿನಂತಿಯನ್ನು ತಿರಸ್ಕರಿಸಿದರು. ಇದು ರಾಜತಾಂತ್ರಿಕ ಸಮಸ್ಯೆಗಳನ್ನು ಹುಟ್ಟುಹಾಕಿತು. ಇದಾದ ಬಳಿಕ ಹಯಾ ಬಿಂಟ್ ತನ್ನ ರಕ್ಷಣೆ ಮತ್ತು ಸ್ವಾತಂತ್ರ್ಯ ಕೋರಿ ಯುಕೆ ಕೋರ್ಟ್​ನಲ್ಲಿ ದಾವೆ ಹೂಡಿದ್ದರು.

    ತನ್ನ ಮಾಜಿ ಪತಿ ಅಲ್​ ಮುಕ್ತೋಮ್​ನಿಂದ ಬೆದರಿಕೆ ಇದೆ ಎಂದಿರುವ ಹಯಾ ಬಿಂಟ್, ಇಬ್ಬರು ಮಕ್ಕಳೊಂದಿಗೆ ಮರಳಿ ಗಲ್ಫ್​ ದೇಶಕ್ಕೆ ಬರುವಂತೆ ಬಲವಂತ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ, ಕಾನೂನು ಹೋರಾಟದ ಸಮಯದಲ್ಲಿ ಪೆಗಾಸಸ್​ ಬೇಹುಗಾರಿಕೆ ಸಾಫ್ಟ್​ವೇರ್ ಬಳಸಿ ಹಯಾ ಬಿಂಟ್​ ಮೊಬೈಲ್​ ಹ್ಯಾಕ್​ ಮಾಡಿರುವ ಆರೋಪವೂ ಇದೆ. ಆದರೆ, ಈ ಆರೋಪವನ್ನು ಅಲ್​ ಮುಕ್ತೋಮ್​ ತಿರಸ್ಕರಿಸಿದ್ದಾರೆ.

    ತನಗೂ ಹಾಗೂ ಮಕ್ಕಳಿಗೆ ಭದ್ರತೆ ಕೋರಿ ಲಂಡನ್​ ಕೋರ್ಟ್​ ಮೆಟ್ಟಿಲೇರಿದ್ದ ಹಯಾ ಬಿಂಟ್​ ಕೊನೆಗೂ ನ್ಯಾಯ ದೊರಕಿದ್ದು, ತನ್ನ ಮಾಜಿ ಪತ್ನಿ ಮತ್ತು ಇಬ್ಬರು ಮಕ್ಕಳಾದ ಅಲ್ ಜಲೀಲಾ ಬಿಂತ್ ಮೊಹಮ್ಮದ್ ಬಿನ್ ರಶೀದ್ (14) ಮತ್ತು ಶೇಖ್ ಜಾಯೆದ್ ಬಿನ್ ಮೊಹಮ್ಮದ್ ಬಿನ್ ರಶೀದ್ (9) ಅವರ ಭದ್ರತೆಗಾಗಿ ಪರಿಹಾರವನ್ನು ಪಾವತಿಸುವಂತೆ ಅಲ್-ಮಕ್ತೌಮ್‌ಗೆ ಯುಕೆ ನ್ಯಾಯಾಲಯವು ಆದೇಶಿಸಿದೆ. (ಏಜೆನ್ಸೀಸ್​)

    ದುಬಾರಿ ಆ್ಯಪಲ್ ವಾಚ್​ ಬುಕ್​ ಮಾಡಿದ್ದ ಖ್ಯಾತ ನಟನಿಗೆ ಶಾಕ್​ ಕೊಟ್ಟ ಆನ್​ಲೈನ್​ ಕಂಪನಿ: ಕೋರ್ಟ್​ನಲ್ಲಿ ಕೇಸ್​ ರಿವರ್ಸ್​ ​

    50 ಕೋಟಿ ರೂ. ದೋಚಿದ ಸೆಕೆಂಡ್​ ಹ್ಯಾಂಡ್​ ಐಟಂ ಎಂದ ಟ್ವಿಟ್ಟಿಗನಿಗೆ ಸಮಂತಾ​ ಕೊಟ್ಟ ಉತ್ತರ ಹೀಗಿತ್ತು…

    ಸುಳ್ಳು ಸುದ್ದಿ ಜಾಲ ಬಯಲು; 20 ಯೂಟ್ಯೂಬ್ ಚಾನೆಲ್, ಎರಡು ವೆಬ್​ಸೈಟ್ ನಿಷೇಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts