More

    RSS ಆಸ್ಪತ್ರೆ ಹಿಂದುಗಳಿಗೆ ಮಾತ್ರನಾ? ಉದ್ಯಮಿ ರತನ್​ ಟಾಟಾ ಪ್ರಶ್ನೆಗೆ ನಿತಿನ್​ ಗಡ್ಕರಿ ಉತ್ತರ ಹೀಗಿತ್ತು…

    ಪುಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಮ ಮಾಡುವುದಿಲ್ಲ ಎಂದು ಹಿಂದೊಮ್ಮೆ ಉದ್ಯಮಿ ರತನ್​ ಟಾಟಾ ಅವರಿಗೆ ಹೇಳಿದ್ದ ಸಂಗತಿಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ ಗುರುವಾರ ಮೆಲುಕು ಹಾಕಿದರು.

    ಪುಣೆಯ ಸಿಂಹಗಡ ಏರಿಯಾದಲ್ಲಿರುವ ಚಾರಿಟಬಲ್​ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುವಾಗ, ಶಿವಸೇನಾ ಮತ್ತು ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಮಯದಲ್ಲಿ ಸಚಿವರಾಗಿದ್ದಾಗ ನಡೆದ ಘಟನೆಯನ್ನು ಗಡ್ಕರಿ ನೆನಪು ಮಾಡಿಕೊಂಡರು.

    ಆರ್​ಎಸ್​ಎಸ್ ಮುಖ್ಯಸ್ಥ ದಿವಂಗತ ಕೆ.ಬಿ. ಹೆಡಗೆವಾರ್ ಹೆಸರಿನಲ್ಲಿ ಔರಂಗಬಾದ್​ನಲ್ಲಿ ನಿರ್ಮಾಣವಾಗಿದ್ದ ಆಸ್ಪತ್ರೆ ಉದ್ಘಾಟನೆ ಆಯಿತು. ಆ ಸಂದರ್ಭದಲ್ಲಿ ನಾನು ರಾಜ್ಯ ಸಚಿವನಾಗಿದ್ದೆ. ಆಸ್ಪತ್ರೆಯನ್ನು ರತನ್​ ಟಾಟಾ ಅವರಿಂದ ಉದ್ಘಾಟನೆ ಮಾಡಿಸಬೇಕೆಂಬ ಬಯಕೆಯನ್ನು ಆರ್​ಎಸ್​ಎಸ್​ನ ಹಿರಿಯ ಕಾರ್ಯಕಾರಿ ಸದಸ್ಯರೊಬ್ಬರು ನನ್ನ ಬಳಿ ವ್ಯಕ್ತಪಡಿಸಿದರು ಮತ್ತು ಸಹಾಯ ಕೋರಿದರು.

    ಇದಾದ ಬಳಿಕ ಟಾಟಾ ಅವರನ್ನು ಸಂಪರ್ಕಿಸಿ, ದೇಶದ ಬಡವರಿಗೆ ಕ್ಯಾನ್ಸರ್ ಚಿಕಿತ್ಸೆ ಒದಗಿಸುವಲ್ಲಿ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಕೊಡುಗೆಯನ್ನು ಉಲ್ಲೇಖಿಸಿ ಆಸ್ಪತ್ರೆಯನ್ನು ಉದ್ಘಾಟಿಸುವಂತೆ ಮನವೊಲಿಸಲಾಯಿತು. ಉದ್ಘಟನಾ ದಿನ ಆಸ್ಪತ್ರೆಗೆ ಆಗಮಿಸಿದರು. ಈ ವೇಳೆ ಈ ಆಸ್ಪತ್ರೆ ಹಿಂದು ಸಮುದಾಯಕ್ಕೆ ಮಾತ್ರನಾ? ಎಂದು ಪ್ರಶ್ನಿಸಿದರು. ನೀವು ಆ ರೀತಿ ಯಾಕೆ ಅಂದುಕೊಂಡಿದ್ದೀರಾ ಎಂದು ನಾನು ಮರು ಪ್ರಶ್ನಿಸಿದೆ. ಅದಕ್ಕೆ ಅವರು ಆಸ್ಪತ್ರೆ ಆರ್​ಎಸ್​ಎಸ್​ಗೆ ಸಂಬಂಧಿಸಿದ್ದಲ್ಲವಾ ಅದಕ್ಕೆ ಎಂದು ಕೇಳಿದೆ ಉತ್ತರಿಸಿದರು.

    ಈ ಆಸ್ಪತ್ರೆ ಎಲ್ಲ ಸಮುದಾಯವರಿಗೂ ಸೇರಿದ್ದು ಮತ್ತು ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಮ ಆರ್​ಎಸ್​ಎಸ್​ನಲ್ಲಿ ನಡೆಯುವುದಿಲ್ಲ ಎಂಬುದನ್ನು ನಾನು ರತನ್​ ಟಾಟಾ ಅವರಿಗೆ ಮನವರಿಕೆ ಮಾಡಿಕೊಟ್ಟೆ ಎಂದು ಗಡ್ಕರಿ ಅವರು ತಿಳಿಸಿದರು. ಅಲ್ಲದೆ, ಅನೇಕ ಸಂಗತಿಗಳನ್ನು ಟಾಟಾ ಅವರಿಗೆ ವಿವರಿಸಿದ ಬಳಿಕ ಅವರು ಖುಷಿಯಾದರು ಎಂದು ಗಡ್ಕರಿ ಅವರು ಇದೇ ಸಂದರ್ಭದಲ್ಲಿ ಮೆಲುಕು ಹಾಕಿದರು. (ಏಜೆನ್ಸೀಸ್​)

    ಅನೇಕ ಹೊಸ ಫೀಚರ್ಸ್​ ಘೋಷಿಸಿದ ವ್ಯಾಟ್ಸ್​ಆ್ಯಪ್​: ಫೈಲ್ಸ್​ ಶೇರಿಂಗ್​ ಗಾತ್ರ 2 ಜಿಬಿವರೆಗೂ ವಿಸ್ತರಣೆ

    48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ: ಸ್ಕಾಟ್​ಲೆಂಡ್​ನಲ್ಲಿ ಸಿಕ್ಕಿಬಿದ್ದ ಭಾರತೀಯ ಮೂಲದ ವೈದ್ಯ

    ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್​ಗೆ 1 ರೂಪಾಯಿಯಂತೆ ಪೆಟ್ರೋಲ್​ ಮಾರಾಟ! ಗ್ರಾಹಕರು ಫುಲ್​ ಖುಷ್​

    48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ: ಸ್ಕಾಟ್​ಲೆಂಡ್​ನಲ್ಲಿ ಸಿಕ್ಕಿಬಿದ್ದ ಭಾರತೀಯ ಮೂಲದ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts