More

    ಅನೇಕ ಹೊಸ ಫೀಚರ್ಸ್​ ಘೋಷಿಸಿದ ವ್ಯಾಟ್ಸ್​ಆ್ಯಪ್​: ಫೈಲ್ಸ್​ ಶೇರಿಂಗ್​ ಗಾತ್ರ 2 ಜಿಬಿವರೆಗೂ ವಿಸ್ತರಣೆ

    ನವದೆಹಲಿ: ಮೆಟಾ ಒಡೆತನದ ಭಾರತದ ಅತ್ಯಂತ ಜನಪ್ರಿಯ ಮಸೇಜಿಂಗ್​ ವೇದಿಕೆ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ “ಕಮ್ಯೂನಿಟೀಸ್​” ಹೆಸರಿನ ಹೊಸ ಫೀಚರ್​ ಅನ್ನು ಪರಿಚಯಿಸಲಿದೆ. ಶೀಘ್ರದಲ್ಲಿ ಈ ಹೊಸ ಫೀಚರ್​ ಜಾಗತಿಕವಾಗಿ ಎಲ್ಲ ಸ್ಮಾರ್ಟ್​ಫೋನ್​ಗಳಲ್ಲೂ ಲಭ್ಯವಾಗಲಿದೆ.

    ಬಳಕೆದಾರರು ತಮ್ಮ ಗ್ರೂಪ್​ಗಳನ್ನು ಸಂಘಟಿಸಲು ನೆರವಾಗುವಂತಹ ಹೊಸ ಫೀಚರ್​ ಅನ್ನು ವಾಟ್ಸ್​ಆ್ಯಪ್​ ಪರೀಕ್ಷಿಸುತ್ತಿದೆ. ಇದಲ್ಲದೆ, ಮೆಸೇಜ್​ಗಳಿಗೆ ಬಹು ನಿರೀಕ್ಷಿತ ಪ್ರತಿಕ್ರಿಯೆ ಒಳಗೊಂಡಂತೆ ವಾಟ್ಸ್​ಆ್ಯಪ್​ ಗ್ರೂಪ್​ಗಳಿಗೆ ಇತರೆ ನಾಲ್ಕು ಹೊಸ ಅಪ್​ಡೇಟ್​ಗಳನ್ನು ವಾಟ್ಸ್​ಆ್ಯಪ್​ ನೀಡಲಿದೆ.

    ಉದ್ಯೋಗ ಸ್ಥಳ ಹಾಗೂ ಶಾಲೆಗಳಿಗಾಗಿ ಕಾರ್ಯನಿರ್ವಹಿಸವಂತಹ ಗ್ರೂಪ್​ಗಳಿಗೆ ನೆರವಾಗುವುದೇ ಹೊಸ ಫೀಚರ್​​ನ ಗುರಿಯಾಗಿದೆ. ವಿವಿಧ ಗ್ರೂಪ್​ಗಳನ್ನು ಒಂದೇ ಸೂರಿನಡಿ ತರಲು ಈ ಫೀಚರ್ ಬಳಕೆದಾರರಿಗೆ ನೆರವಾಗಲಿದೆ. ಇದಲ್ಲದೆ, 256 ಸದಸ್ಯ ಸಾಮರ್ಥ್ಯ ಹೊಂದಿರುವ ವಾಟ್ಸ್​ಆ್ಯಪ್​ ಗ್ರೂಪ್​ಗಳ ಸಾವಿರಾರು ಸದಸ್ಯರಿಗೆ ಎಚ್ಚರಿಕೆ ಸಂದೇಶವನ್ನು ಕಳುಹಿಸಲು ಗ್ರೂಪ್​ ಅಡ್ಮಿನ್​ಗಳಿಗೆ ಕಮ್ಯೂನಿಟಿ ಫೀಚರ್​ ಸಹಾಯವಾಗಲಿದೆ. ​

    ಸದ್ಯ ಈ ಫೀಚರ್​ ಬೆಟಾ ಹಂತದಲ್ಲಿದ್ದು, ಕೆಲವೇ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಈ ಫೀಚರ್​ ಅನ್ನು ಉಚಿತವಾಗಿ ನೀಡಲು ಕಂಪನಿ ಯೋಜಿಸಿದೆ. ಆದರೆ, ಭವಿಷ್ಯದಲ್ಲಿ ಈ ಫೀಚರ್​ ಪಡೆಯಲು ದರ ನಿಗದಿ ಮಾಡುವುದನ್ನು ತಳ್ಳಿ ಹಾಕುವಂತಿಲ್ಲ.

    ಈ ಹೊಸ ಫೀಚರ್​ ಕೂಡ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುತ್ತದೆ. ಯಾವುದೇ ಮಾಹಿತಿ ಸೋರಿಕೆಯಾಗುವುದಿಲ್ಲ. ಬಳಕೆದಾರರ ಗೌಪ್ಯತೆಯನ್ನು ಗೌರವಿಸುತ್ತದೆ ಎಂದು ವಾಟ್ಸ್​ಆ್ಯಪ್​ ಮುಖ್ಯಸ್ಥ ವಿಲ್​ ಕ್ಯಾತ್‌ಕಾರ್ಟ್ ತಿಳಿಸಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಈ ಫೀಚರ್​ ಬಳಕೆಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

    ಕಮ್ಯೂನಿಟಿ ಫೀಚರ್​ ಮಾತ್ರವಲ್ಲದೆ, ವ್ಯಾಟ್ಸ್​ಆ್ಯಪ್​ ಶೀಘ್ರದಲ್ಲೇ ಈ ಕೆಳಕಂಡ ನಾಲ್ಕು ಹೊಸ ಫೀಚರ್​ಗಳನ್ನೂ ಪರಿಚಯಿಸಲಿದೆ
    1. ಚಾಟ್ಸ್​ ಮೇಲಿನ ಸಂದೇಶಗಳಿಗೆ ವಿಭಿನ್ನ ಎಮೋಜಿಗಳು
    2. ಎಲ್ಲ ಬಳಕೆದಾರರ ಚಾಟ್ಸ್​ನಲ್ಲಿರುವ ಸಮಸ್ಯಾತ್ಮಕ ಸಂದೇಶಗಳನ್ನು ಗ್ರೂಪ್​ ಅಡ್ಮಿನ್​ ಡಿಲೀಟ್​ ಮಾಡುವ ಅವಕಾಶ
    3. ಫೈಲ್​ ಶೇರ್​ ಮಾಡುವ ಗಾತ್ರವನ್ನು 2ಜಿಬಿವರೆಗೂ ವಿಸ್ತರಣೆ
    4. 32 ಜನರಿಗೆ ಒನ್​ ಟ್ಯಾಪ್ ಧ್ವನಿ ಕರೆಗಳು

    48 ಮಹಿಳಾ ರೋಗಿಗಳ ಮೇಲೆ ಲೈಂಗಿಕ ದೌರ್ಜನ್ಯ: ಸ್ಕಾಟ್​ಲೆಂಡ್​ನಲ್ಲಿ ಸಿಕ್ಕಿಬಿದ್ದ ಭಾರತೀಯ ಮೂಲದ ವೈದ್ಯ

    ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು PSIಗೆ ಬೆವರಿಳಿಸಿ ಭಾರೀ ಸುದ್ದಿಯಾಗಿದ್ದ ತುಮಕೂರು SPಗೆ ಆತ್ಮಹತ್ಯೆ ಬೆದರಿಕೆ!

    ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್​ಗೆ 1 ರೂಪಾಯಿಯಂತೆ ಪೆಟ್ರೋಲ್​ ಮಾರಾಟ! ಗ್ರಾಹಕರು ಫುಲ್​ ಖುಷ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts