More

    ದೇವಸ್ಥಾನದಲ್ಲಿ ಯದುವೀರ್​ ಒಡೆಯರ್ ಫೋಟೋ ಇಟ್ಟು ಪೂಜೆ ಮಾಡಿ ಕಾಳಿ ಸ್ವಾಮಿ ಕೊಟ್ಟ ಸಂದೇಶವಿದು

    ಹಾಸನ: ಒಂದು ಕಡೆ ಹಿಜಾಬ್ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದರೆ, ಇನ್ನೊಂದೆಡೆ ಹಿಂದುಗಳು ಒಂದಾಗುವುದಕ್ಕೆ ಕಾಳಿಕಾಮಠದ ಋಷಿಕುಮಾರ ಸ್ವಾಮೀಜಿ ಪೂಜೆ ನೆರವೇರಿಸಿದ್ದಾರೆ.

    ಹಾಸನದ ಮಾಲೇಕಲ್ಲು ತಿರುಪತಿ ದೇವಸ್ಥಾನದಲ್ಲಿ ಮೈಸೂರು ಮಹಾರಾಜ ಯದುವೀರ್ ಒಡೆಯರ್​ ಅವರ ಪೋಟೋ ಇಟ್ಟು ಪೂಜೆ ಮಾಡಿದ್ದು, ಕಾಳಿ ಸ್ವಾಮೀಜಿಗೆ ಸ್ಥಳಿಯರು ಸಾಥ್ ನೀಡಿದ್ದಾರೆ.

    ಇದೇ ಸಂದರ್ಭದಲ್ಲಿ ಮಾತನಾಡಿದ ಕಾಳಿ ಸ್ವಾಮೀಜಿ, ನಾಡು ಹಿಂದೆಂದೂ ‌ಕಾಣದ‌ ಶಕ್ತಿಯನ್ನು ಸನಾತನ ಧರ್ಮಕ್ಕೆ ಮಹಾರಾಜರು ನೀಡಿದ್ದಾರೆ. ಹಿಂದುಗಳು ಒಗ್ಗಾಟ್ಟಾಗಿ ಅನ್ನೋ ಸಂದೇಶವನ್ನು ಮಹಾರಾಜರು ನೀಡಿದ್ದಾರೆ. ಯದುವೀರ ಮಹಾರಾಜರ ಆಜ್ಞೆಯನ್ನ ರಾಜಾಜ್ಞೆ, ಸುಗ್ರೀವಾಜ್ಞೆ ಎಂದು ಬಾವಿಸಿ ಒಟ್ಟಾಗಬೇಕಿದೆ ಎಂದರು.

    ಹಳ್ಳಿ ಹಳ್ಳಿಗೆ ಹೋಗಿ ಸಂಘಟನೆ ಮಾಡುತ್ತೇವೆ. ಶ್ರೀರಂಗಪಟ್ಟಣದ ದೇವಾಸ್ಥಾನ ಕುರಿತು ನಿಮ್ಮ ಬಳಿ ದಾಖಲೆ ಇವೆ. ಅವುಗಳನ್ನು ನಮಗೆ ಕೊಡಿ ನಾವು ಕಾನೂನುಬದ್ಧವಾಗಿ ಹೋರಾಡುತ್ತೇವೆ ಎಂದು ಮೈಸೂರು ಅರಮನೆಯನ್ನು ಉದ್ದೇಶಿಸಿ ಮಾತನಾಡಿದ ಕಾಳಿ ಸ್ವಾಮೀಜಿ, ಮುಂದಿನ ಹನುಮ ಜಯಂತಿ ಸಮಯಕ್ಕೆ ಶ್ರೀರಂಗಪಟ್ಟದ ಮಸೀದಿ ದೇವಸ್ಥಾನವಾಗಿ ಕಂಗೊಳಿಸುತ್ತದೆ ಎಂದರು.

    ಹಿಜಾಬ್ ವಿಚಾರದಲ್ಲಿ ಶಾಂತಿಯುತವಾಗಿ ನಡೆದುಕೊಳ್ಳಿ. ಸಂವಿಧಾನ ಅಂದ್ರೆ ಕೋರ್ಟ್, ಕೋರ್ಟ್ ಅಂದ್ರೆ ಸಂವಿಧಾನ. ಹಿಜಾಬ್ ವಿಚಾರ ಸದ್ಯ ಕೋರ್ಟಿನಲ್ಲಿದೆ. ಕೋರ್ಟ್​ ಏನು ಹೇಳುತ್ತದೆ ಅದನ್ನು ಕೇಳಬೇಕಿದೆ. ಸಂವಿಂಧಾನಕ್ಕೆ ಬೆಲೆ ಕೊಡುವವರು ನಾವು. ಬಳೆ, ಕುಂಕುಮ ತೆಗಿಯಿರಿ ಅಂತಾ ಪದೇ ಪದೇ ಹೇಳ್ತಿದ್ದೀರಾ, ಅವು ನಮ್ಮ ಹಿಂದು ಧರ್ಮದ ಮಂಗಳ ದ್ರವ್ಯಗಳು. ಅಲಂಕಾರಿಕಾ ‌ವಸ್ತುಗಳಲ್ಲ. ಪದೇಪದೆ ನಮನ್ನು ಕೆಣಕ ಬೇಡಿ ಎಂದರು. (ದಿಗ್ವಿಜಯ ನ್ಯೂಸ್​)

    ಬರ್ತಡೇ ಖುಷಿಯಲ್ಲಿ ನಟಸಾರ್ವಭೌಮನ ಬೆಡಗಿ: ಅನುಪಮಾ ಮಿಸ್​ ಮಾಡಿಕೊಂಡ ಸೂಪರ್​ ಹಿಟ್ ಚಿತ್ರವಿದು!

    ಥೂ ಇದೆಂಥಾ ಅಸಹ್ಯ? ಅಣ್ಣ-ತಂಗಿ ನಡುವೆಯೇ ಅಕ್ರಮ ಸಂಬಂಧ, ಅಡ್ಡಿಬಂದ ತಾಯಿಯನ್ನೇ ಕೊಂದ ಕಾಮುಕರು!

    ಅಪಘಾತದಲ್ಲಿ ದೀಪ್​ ಸಿಧು ದುರ್ಮರಣ: ಕಣ್ಣೀರಿಟ್ಟ ಬೆನ್ನಲ್ಲೇ ಸಂಶಯ ಮೂಡಿಸಿದ ಗರ್ಲ್​ಫ್ರೆಂಡ್​ ರೀನಾ ನಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts