More

    ಐಷಾರಾಮಿ ಹಡಗಿನಲ್ಲಿ ಹೈಟೆಕ್​ ಡ್ರಗ್ಸ್​ ಪಾರ್ಟಿ: ಬಾಲಿವುಡ್​ ಸೂಪರ್​​ಸ್ಟಾರ್​​ ಮಗ ಸೇರಿ ಹಲವರ ಬಂಧನ

    ಮುಂಬೈ: ವಾಣಿಜ್ಯ ನಗರಿ ಮುಂಬೈನ ಹಡಗೊಂದರ ಒಳಗೆ ನಡೆಯುತ್ತಿದ್ದ ರೇವ್​ ಪಾರ್ಟಿಯ ಮೇಲೆ ನಾರ್ಕೋಟಿಕ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ತಂಡ ದಾಳಿ ನಡೆಸಿ ಕೊಕೇನ್​, ಹಶೀಶ್​ ಮತ್ತು ಎಂಡಿಎಂಎ ಸೇರಿದಂತೆ ಅನೇಕ ಅಕ್ರಮ ಡ್ರಗ್ಸ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಡಿಲಿಯಾ ಕ್ರೂಸ್​ ಎಂಪ್ರೆಸ್​ ಹಡಗಿನ ಮೇಲೆ ನಡೆದ ದಾಳಿ ಇದಾಗಿದೆ.

    ದಾಳಿಯ ಬಗ್ಗೆ ಮಾತನಾಡಿರುವ ಎನ್​​ಸಿಬಿ ವಲಯ ನಿರ್ದೇಶಕ ಸಮೀರ್​ ವಾಂಖೇಡೆ, 7 ರಿಂದ 8 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಬಂಧಿತರಲ್ಲಿ ಬಾಲಿವುಡ್​ ಸೂಪರ್​ಸ್ಟಾರ್​ ಮಗನು ಒಬ್ಬನಾಗಿದ್ದಾನೆ. ಬಂಧಿತರನ್ನು ಭಾನುವಾರ ಮುಂಬೈಗೆ ವಾಪಸ್​ ಕರೆತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕೇವಲ ಎರಡು ವಾರಗಳ ಹಿಂದಷ್ಟೇ ಉದ್ಘಾಟನೆಯಾದ ಎಂಪ್ರೆಸ್​ ಹಡಗಿನಲ್ಲಿ ಶನಿವಾರ ಸಂಜೆ ಪ್ರಮುಖ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಎನ್​ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ನಡೆಯುತ್ತಿರುವುದರ ಬಗ್ಗೆ ಸುಳಿವು ದೊರೆತ ಹಿನ್ನೆಲೆಯಲ್ಲಿ ವಲಯ ನಿರ್ದೇಶಕ ಸಮೀರ್​​ ವಾಂಖೇಡೆ ನೇತೃತ್ವದಲ್ಲಿ ಪ್ರಯಾಣಿಕರ ಸೋಗಿನಲ್ಲಿ ಶನಿವಾರ ರಾತ್ರಿ ಹಡಗಿನ ಮೇಲೆ ದಾಳಿ ನಡೆಸಲಾಗಿದೆ.

    ಹಡಗು ಮುಂಬೈ ಕರಾವಳಿ ಪ್ರದೇಶವನ್ನು ಬಿಟ್ಟು ಸಮುದ್ರ ಮಧ್ಯೆ ತೆರಳಿದಾಗ ರೇವ್​ ಪಾರ್ಟಿ ಆರಂಭವಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಎನ್​ಸಿಬಿ ಅಧಿಕಾರಿಗಳು ಅಲ್ಲಿದ್ದ ಪ್ರಮುಖರನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಆರೋಪಿ ವಿರುದ್ಧ ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ (ಎನ್​ಡಿಪಿಎಸ್​) ಕಾಯ್ದೆ ಅಡಿಯಲ್ಲಿರುವ ಸೂಕ್ತ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಭಾನುವಾರ ಕೋರ್ಟ್​ ಮುಂದೆ ಹಾಜರು ಪಡಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಕೀಲ ಆನಂದಿನಿ ಫೆರ್ನಾಂಡಿಸ್ ಎಂಬುವರು ಎನ್​ಸಿಬಿ ಕಚೇರಿಗೆ ಭೇಟಿ ನೀಡಿದರು. ಇಬ್ಬರು ಯುವಕರನ್ನು ಕಚೇರಿಯಿಂದ ಬಿಡುಗಡೆ ಮಾಡಲಾಗಿದೆ.

    ಅಕ್ಟೋಬರ್ 2 ರಿಂದ ಅಕ್ಟೋಬರ್ 4ರವರೆಗೆ ಕಾರ್ಡೆಲಿಯಾ ಕ್ರೂಸ್‌ನ ಎಂಪ್ರೆಸ್​ ಹಡಗಿನಲ್ಲಿ ರೇವ್ ಪಾರ್ಟಿಯನ್ನು ಆಯೋಜಿಸಲಾಗಿದೆ. ನೂರು ಟಿಕೆಟ್‌ಗಳ ಮಾರಾಟದೊಂದಿಗೆ ‘ಸಂಗೀತದ ಪ್ರಯಾಣ’ ಇದಾಗಿತ್ತು. ಉಳಿದ ಪಾಸ್‌ಗಳನ್ನು ಸಂಘಟಕರು ನೇರವಾಗಿ ವಿತರಿಸಿದ್ದಾರೆ. ಮೂಲಗಳ ಪ್ರಕಾರ, ಈವೆಂಟ್ ಅನ್ನು ದೆಹಲಿ ಮೂಲದ ಕಂಪನಿ ನಮಸ್ಕ್ರೇ ಎಕ್ಸ್‌ಪೀರಿಯೆನ್ಸ್ ಜೊತೆಗೆ ಫ್ಯಾಶನ್ ಟಿವಿ ಇಂಡಿಯಾ ಆಯೋಜಿಸಿದೆ. ಈವೆಂಟ್ ಅನ್ನು ಹೆಚ್ಚು ಜನರು ಬುಕ್ ಮಾಡಿದ್ದರಿಂದ ಕೆಲವರು ಈ ಹಡಗಿನಲ್ಲಿ ಏರಲು ಸಾಧ್ಯವಾಗಲಿಲ್ಲ.

    ಎಂಪ್ರೆಸ್ ಹಡಗಿನಲ್ಲಿ ಬರ್ತ್ ಬುಕ್ ಮಾಡಿದ ಒಬ್ಬ ವ್ಯಕ್ತಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ನಾನು ಹಡಗು ಹತ್ತಲು ತೆರಳಿದ್ದೆ. ಆದರೆ, ಸಂಘಟಕರು ನನ್ನನ್ನು ಒಳಗೆ ಹತ್ತಿಸಿಕೊಳ್ಳಲು ನಿರಾಕರಿಸಿದರು. ಹಡಗು ಈಗಾಗಲೇ ಅತಿಯಾಗಿ ಬುಕ್ ಮಾಡಲಾಗಿದೆ ಎಂದು ಹೇಳಿದರು ಎಂದು ತಿಳಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ ಹೇಳುವ ಪ್ರಕಾರ ಪಾಸ್ ಅನ್ನು ಖರೀದಿಸಲು 82,000 ರೂಗಳನ್ನು ಪಾವತಿಸಿದೆ. ಆದರೂ ಹಡಗಿನಲ್ಲಿ ಹೋಗಲು ನನಗೆ ಅನುಮತಿಸಲಿಲ್ಲ ಎಂದಿದ್ದಾರೆ.

    ಕೇಳಿ ಬರುತ್ತಿದೆ ಶಾರೂಕ್​ ಪುತ್ರನ ಹೆಸರು?
    ನಿನ್ನೆ ನಡೆದ ರೇವ್​ ಪಾರ್ಟಿಗೂ ಬಾಲಿವುಡ್​ ಬಾದ್​ಷಾ ಶಾರೂಕ್​ ಪುತ್ರನಿಗೂ ನಂಟಿನ ಆರೋಪ ಕೇಳಿಬರುತ್ತಿದೆ. ಹೀಗಾಗಿ ಶಾರೂಖ್​ ಪುತ್ರ ಆರ್ಯನ್​ ಖಾನ್​ನನ್ನು ಎನ್​ಸಿಬಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಆರ್ಯನ್ ಖಾನ್ ವಿರುದ್ಧ ಯಾವುದೇ ಆರೋಪಗಳನ್ನು ದಾಖಲಿಸಿಲ್ಲ ಮತ್ತು ಆತನನ್ನು ಇದುವರೆಗೂ ಬಂಧಿಸಿಲ್ಲ ಎಂದು ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹೇಳಿದ್ದಾರೆ. (ಏಜೆನ್ಸೀಸ್​)

    ಗೋಕಾಕ್​ ಫಾಲ್ಸ್​ನಲ್ಲಿ ಯಮನಿಗೆ ಸೆಡ್ಡು ಹೊಡೆದ ಯುವಕ: 140 ಅಡಿ ಆಳದ ಕಂದಕಕ್ಕೆ ಬಿದ್ರು ಬಚಾವ್..!​

    ಕಾಲೇಜ್​ಗೆ ಚಕ್ಕರ್ ಹಾಕಿ ಪಾರ್ಕಿನ ಪೊದೆ ಮರೆಯಲ್ಲಿ ವಿದ್ಯಾರ್ಥಿಗಳ ಅಸಭ್ಯ ವರ್ತನೆ: ಸಾರ್ವಜನಿಕರ ಆಕ್ರೋಶ

    ಸಮಂತಾ-ನಾಗಚೈತನ್ಯ ಡಿವೋರ್ಸ್​ ಹಿಂದಿನ ಪ್ರಮುಖ ಕಾರಣ ಬಯಲು: ಇಬ್ಬರ ನಡುವೆ ನಡೆದಿತ್ತು ವಾಗ್ವಾದ..!

    ‘ನಾನು ಬಿಚ್ಚಲು ರೆಡಿ, ನೀವು ಶೂಟ್‌ ಮಾಡಿ’ ಎಂದು ಕುಂದ್ರಾಗೆ ಹೇಳಿದವಳೇ ಇವಳು: ನಟಿ ವಿರುದ್ಧ ಗಂಭೀರ ಆರೋಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts