More

    ನಿಮ್ಮ ಪ್ರಕಾರ ಸ್ವಾತಂತ್ರ್ಯ ಎಂದರೇನು? ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿ ದೇಶದ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ…

    ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತಿರುವ ಸವಿನೆನಪಿನಲ್ಲಿ ಕಾಂಗ್ರೆಸ್ ಬೃಹತ್ ನಡಿಗೆ ಅಭಿಯಾನ ಶುರು ಮಾಡಿದೆ. ಅದರ ಭಾಗವಾಗಿ ಸಾಮಾಜಿಕ ಜಾಲತಾಣ ಕೂ ವೇದಿಕೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ರ‍್ಯಾಪಿಡ್ ಫೈರ್​ಗೆ ಉತ್ತರಿಸಿದ್ದಾರೆ.

    * ಕಾಂಗ್ರೆಸ್: ಭಾರತವನ್ನು ಮೂರು ಪದಗಳಲ್ಲಿ ವಿವರಿಸಿ?
    ಡಿಕೆಶಿ: ನನ್ನ ಪ್ರೀತಿಯ ರಾಷ್ಟ್ರ

    * ಕಾಂಗ್ರೆಸ್: ನಿಮ್ಮ ಪ್ರಕಾರ ಸ್ವಾತಂತ್ರ್ಯ ಎಂದರೇನು ಮೂರು ಪದಗಳಲ್ಲಿ ಹೇಳಿ?
    ಡಿಕೆಶಿ: ಸಂವಿಧಾನ, ಹಕ್ಕುಗಳು, ಅಹಿಂಸೆ

    * ಕಾಂಗ್ರೆಸ್: ಸ್ವಾತಂತ್ರ್ಯ ಭಾರತವನ್ನು ರೂಪಿಸಲು ಕಾರಣವಾಗಿರುವ ಪ್ರಮುಖ 5 ಘಟನೆಗಳು ಯಾವುವು?
    ಡಿಕೆಶಿ: – ಮಹಾತ್ಮ ಗಾಂಧಿಯವರ ಹತ್ಯೆ
    – ಜವಾಹರಲಾಲ್ ನೆಹರು ಅವರಿಂದ ಭಾಷಾವಾರು ರಾಜ್ಯಗಳ ರಚನೆ
    – ಇಂದಿರಾಗಾಂಧಿ ಅವರು ಹಸಿರು ಕ್ರಾಂತಿ
    – ಬ್ಯಾಂಕುಗಳ ರಾಷ್ಟ್ರೀಕರಣ
    – ರಾಜೀವ್ ಗಾಂಧಿಯವರ ಗಣಕಯಂತ್ರ ಕ್ರಾಂತಿ
    -ಸೋನಿಯಾ ಗಾಂಧಿ ಅವರ ನರೇಗಾ ನೀತಿ

    * ಕಾಂಗ್ರೆಸ್: ನಿಮ್ಮ ಪ್ರಕಾರ ರಾಷ್ಟ್ರಧ್ವಜದ ಮೂರು ಬಣ್ಣಗಳು ಏನನ್ನು ಧ್ವನಿಸುತ್ತವೆ?
    ಡಿಕೆಶಿ: ನಾವು ಒಗ್ಗಟ್ಟಿನಿಂದ ನಿಲ್ಲಬೇಕು

    * ಕಾಂಗ್ರೆಸ್: ಭಾರತದ 100ನೇ ವರ್ಷದ ಸ್ವಾತಂತ್ರ್ಯೊತ್ಸವದ ವೇಳೆ ಯಾವ ಮೂರು ವಿಷಯಗಳು ಆಗಿರಲೆಂದು ನೀವು ಆಶಿಸುತ್ತೀರಿ?
    ಡಿಕೆಶಿ: ನಿರುದ್ಯೋಗ ನಿವಾರಣೆ, ಕೋಮುಗಲಬೆ ನಿವಾರಣೆ, ಮಹಿಳೆಯರಿಗೆ ಸಮಾನತೆ ದೊರೆತಿರಬೇಕು.

    ನಿಮ್ಮ ಪ್ರಕಾರ ಸ್ವಾತಂತ್ರ್ಯ ಎಂದರೇನು? ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿ ದೇಶದ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ...

    ರಾಷ್ಟ್ರಧ್ವಜ ಸಂಹಿತೆ, ಸಂರಕ್ಷಣೆ, ನಿರ್ವಹಣೆ..

    ಹೆಜ್ಜೆಗುರುತು: ಸ್ವಾತಂತ್ರ್ಯದ ಅಮೃತ ಮಹೋತ್ಸವ

    ಸಕ್ಕರೆ ನಾಡಿನ ಜನರ ಅಕ್ಕರೆ ಯಾರ ಮೇಲೆ?: ಜೆಡಿಎಸ್ ಭದ್ರಕೋಟೆಗೆ ಕೈ, ಕಮಲ ಗಾಳ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts