More

    1992 ಡಿಸೆಂಬರ್​ 6ರ ಘಟನೆಯ ಬಗ್ಗೆ ಹೇಳಿ ಪುನೀತ್ ನೆನೆದು ಭಾವುಕರಾದ ರಮೇಶ್​ ಜಾರಕಿಹೊಳಿ​

    ಬೆಳಗಾವಿ: ಇತ್ತೀಚೆಗಷ್ಟೇ ಅಕಾಲಿಕವಾಗಿ ನಿಧನರಾದ ನಟ ಪುನೀತ್​ ರಾಜ್​ಕುಮಾರ್​ ಅವರನ್ನು ನೆನೆದು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಭಾವುಕರಾದರು.

    ಶಿವರಾಜಕುಮಾರ್ ಹಾಗೂ ಪುನೀತ್​ ರಾಜ್​ಕುಮಾರ್ ಅಭಿಮಾ‌ನಿಗಳ ಸಂಘದಿಂದ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದ ಅಪ್ಪುಗೆ ನುಡಿ ಗೀತನಮನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಮೇಶ್ ಜಾರಕಿಹೊಳಿ ಮಾತನಾಡಿದರು.

    ಪುನೀತ್ ರಾಜ್​ಕುಮಾರ್ ಇಷ್ಟು ಸಣ್ಣ ವಯಸ್ಸಿನಲ್ಲಿ ನಮ್ಮನ್ನ ಅಗಲಿದ್ದಾರೆಂದ್ರೆ ನಂಬುವುದಕ್ಕೆ ಸಾಧ್ಯವಿಲ್ಲ. ಇಷ್ಟು ಸಣ್ಣ ವಯಸ್ಸಿನಲ್ಲಿ ದೊಡ್ಡ ಕಲಾವಿದನನ್ನು ಕಳೆದುಕೊಂಡಿದ್ದೇವೆ. ಇದರಿಂದ ನಮ್ಮ ಚಿತ್ರರಂಗ ಬಡವವಾಗಿದೆ. ಸೂರ್ಯ-ಚಂದ್ರ ಇರೋವರೆಗೂ ಅವರ ನೆನಪು ಸದಾಕಾಲ ಇರುತ್ತದೆ. ಅವರ ಮನೆತನದಲ್ಲೇ ಪುನೀತ್ ಬಹಳ ಒಳ್ಳೆಯ ಹುಡುಗ. ಅವರು ಹಿರಿಯರಿಗೆ ತುಂಬಾ ಗೌರವ ಕೊಡುತ್ತಿದ್ದರು ಎಂದು ಹೇಳಿದರು.

    1992ರ ಡಿಸೆಂಬರ್ 6ರಂದು ಗೋಕಾಕ್‌‌ನ ನಮ್ಮ ನಿವಾಸಕ್ಕೆ ರಾಜಕುಮಾರ್ ಇಡೀ ಕುಟುಂಬ ಸಮೇತ ಬಂದಿದ್ದರು. ಆಗ ಪುನೀತ್​ಗೆ 16 ರಿಂದ 17 ವಯಸ್ಸಿರಬೇಕು. ನಮ್ಮ ತಂದೆ ತಾಯಿ ಕಾಲಿಗೆ ಹಣೆ ಹಚ್ಚಿ ನಮಸ್ಕಾರ ಮಾಡಿದ್ದರು. ಪುನೀತ್ ಬಗ್ಗೆ ಮಾತನಾಡಬೇಕಂದ್ರೆ ತುಂಬಾ ದುಃಖ ಆಗ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಶಾಸಕ ರಮೇಶ್ ಜಾರಕಿಹೊಳಿ ಕೋರಿದರು.

    ನುಡಿ ಗೀತನಮನ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಕಿತ್ತೂರು ಕಲ್ಮಠದ ಸ್ವಾಮೀಜಿ, ಲಖನ್ ಜಾರಕಿಹೊಳಿ ಸೇರಿ ಹಲವರು ಉಪಸ್ಥಿತರಿದ್ದರು. (ದಿಗ್ವಿಜಯ ನ್ಯೂಸ್​)

    ಅದ್ಧೂರಿ ಜೀವನಶೈಲಿಯ ನಡುವೆಯು ಸರಳವಾಗಿ ಬದುಕಿದ ಪುನೀತ್​ ಕುರಿತು ನಿಮಗೆ ಗೊತ್ತಿರದ ಸಂಗತಿ ಇಲ್ಲಿದೆ…

    ಅಪ್ಪುಗೆ ಅವಮಾನ.. ರಚಿತಾ ರಾಮ್​ ಕ್ಷಮೆಯಾಚಿಸಿದ್ರೂ ಅಭಿಮಾನಿಗಳಿಂದ ಹಿಗ್ಗಾಮುಗ್ಗಾ ತರಾಟೆ

    ಜಗಮೆಚ್ಚಿದ ‘ಪುನೀತ್​’ಗೆ ಇದೆಂಥಾ ಅವಮಾನ? ಅಪ್ಪು ಫೋಟೋ ಮುಂದೆ ಹುಚ್ಚಾಟ ಮೆರೆದ ಚಿತ್ರತಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts