More

    VIDEO| ಪಾರ್ಕಿನಲ್ಲಿ ಕಾಲೇಜು ವಿದ್ಯಾರ್ಥಿಗಳ ಅಸಭ್ಯ ವರ್ತನೆಗೆ ಸ್ಥಳೀಯರ ಆಕ್ರೋಶ

    ರಾಮನಗರ: ಮಕ್ಕಳನ್ನು ನಂಬಿ ಪಾಲಕರು ಕಾಲೇಜಿಗೆ ಕಳುಹಿಸಿದರೆ, ಕಾಲೇಜಿಗೆ ಚಕ್ಕರ್​ ಹೊಡೆಯುವ ಹುಡುಗ-ಹುಡುಗಿಯರು ಪೊದೆ ಮರೆಯಲ್ಲಿ ಅಸಭ್ಯ ವರ್ತನೆ ತೊಡಗುತ್ತಿರುವ ದೃಶ್ಯ ರಾಮನಗರದ ಪಾರ್ಕ್​ವೊಂದರಲ್ಲಿ ಕಂಡುಬಂದಿದ್ದು, ಇಡೀ ಪಾರ್ಕ್​ ಅನೈತಿಕ ತಾಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ರಾಮನಗರದ ಗಾಂಧಿ ಪಾರ್ಕ್​ ಜಿಲ್ಲಾ ಕೇಂದ್ರಕ್ಕೆ ಇರುವ ಏಕೈಕ ಉದ್ಯಾನವನವಾಗಿದೆ. ತಾಲೂಕು ಕಚೇರಿ ಹಾಗೈ ನ್ಯಾಯಾಲಯಕ್ಕೆ ಬರುವ ಜನರು ವಿಶ್ರಾಂತಿ ಪಡೆಯಲು ಇರುವ ಏಕೈಕ ತಾಣ. ಆದರೆ, ನಗರ ಸಭೆ ನಿರ್ಲಕ್ಷ್ಯದಿಂದ ಉದ್ಯಾನವನ ಅನಾಥವಾಗಿದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ.

    ಮಹಾತ್ಮ ಗಾಂಧಿ ಉದ್ಯಾನವನವು ರಾಮನಗರದ ಕೋರ್ಟ್​ ಹಾಗೂ ತಾಲೂಕು ಕಚೇರಿ ಮಧ್ಯ ಭಾಗದಲ್ಲಿದೆ. ಆದರೆ, ನಗರಸಭೆ ಅಧಿಕಾರಿಗಳು ಪಾರ್ಕ್​ ಇಲ್ಲವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದು, ಸೂಕ್ತ ನಿರ್ವಹಣೆಯಿಲ್ಲದೇ ಅವ್ಯವಸ್ಥೆಯ ಆಗರವಾಗಿದ್ದು, ಮಧ್ಯಾಹ್ನವಾದರೆ, ಪಡ್ಡೆಗಳ ಅನೈತಿಕ ತಾಣವಾಗಿ ಬದಲಾಗುತ್ತದೆ. ಸಂಜೆಯಾದರೆ, ಕುಡುಕರು ಕುಡಿದು ತೂರಾಡಿ, ಹೊರಳಾಡುವ ದೃಶ್ಯ ಕೂಡ ಸಾಮಾನ್ಯವಾಗಿದೆ.

    ಪಾರ್ಕಿಗೆ ಬರುವ ಕಾಲೇಜು ವಿದ್ಯಾರ್ಥಿಗಳು ಅಸಭ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ, ಈ ಬಗ್ಗೆ ಯಾರು ಸಹ ಗಮನ ಹರಿಸುತ್ತಿಲ್ಲ. ಪಾಲಕರು ಕೂಡ ತಮ್ಮ ಮಕ್ಕಳ ಮೇಲೆ ನಿಗಾವಹಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಉದ್ಯಾನವನವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕಿದೆ ಎಂದು ನಗರಸಭೆಯನ್ನು ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕಾಲೇಜ್​ಗೆ ಚಕ್ಕರ್ ಹಾಕಿ ಪಾರ್ಕಿನ ಪೊದೆ ಮರೆಯಲ್ಲಿ ವಿದ್ಯಾರ್ಥಿಗಳ ಅಸಭ್ಯ ವರ್ತನೆ: ಸಾರ್ವಜನಿಕರ ಆಕ್ರೋಶ

    ಸರ್ಕಾರಕ್ಕೆ ಮತ್ತೊಂದು ಸವಾಲು: 58 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ; ಡಿಸೆಂಬರ್ 27 ರಂದು ಮತದಾನ..

    ಒಮಿಕ್ರಾನ್ ಸೋಂಕು ತಡೆಯಲು ನಿಯಮ ಕಟ್ಟುನಿಟ್ಟು; ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಗೆ ನೆಗಟಿವ್ ವರದಿ ಕಡ್ಡಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts