More

    VIDEO| ಜೀವದ ಹಂಗು ತೊರೆದು ವ್ಯಕ್ತಿಯ ಪ್ರಾಣ ಉಳಿಸಿದ ರೈಲ್ವೆ ಸಿಬ್ಬಂದಿ: ಮೆಚ್ಚುಗೆಯ ಮಹಾಪೂರ

    ಆಗಾಗ ವ್ಯಕ್ತಿಗಳು ರೈಲಿಗೆ ಸಿಲುಕಿಯೋ, ರೈಲಿನ ಕಂಬಿಗಳ ಮೇಲೆ ಅಚಾನಕ್ಕಾಗಿ ಬಿದ್ದೋ, ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದೊ ಅವಘಡಗಳು ಸಂಭವಿಸುತ್ತಿರುತ್ತವೆ. ಇಂತಹ ವೇಳೆ ಅಲ್ಲಿಯೇ ಇದ್ದ ಪ್ರಯಾಣಿಕರು, ರೈಲ್ವೆ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು, ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಬದುಕಿಸಿದ್ದು ಇದೆ. ಇದೀಗ ಇಂತಹದ್ದೇ ಒಂದು ಘಟನೆ ನಡೆದಿದ್ದು, ರೈಲ್ವೆ ಸಿಬ್ಬಂದಿಯ ಜಾಣತನದಿಂದ ವ್ಯಕ್ತಿಯ ಜೀವ ಉಳಿದಿದೆ.

    ಹೌದು ರೈಲ್ವೆ ಫ್ಲಾಟ್ ಮೇಲೆ ತಿರುಗಾಡುತ್ತಿದ್ದ ಸತೀಶ್ ಕುಮಾರ್ ಎಂಬ ರೈಲ್ವೆ ಸಿಬ್ಬಂದಿ, ಪ್ರಯಾಣಿಕ ರೈಲ್ವೆ ಹಳಿ ಮೇಲೆ ಬಿದ್ದಿರುವುದನ್ನು ಕಂಡಿದ್ದಾನೆ. ತಕ್ಷಣವೇ ರೈಲು ಬರುತ್ತಿರುವುದನ್ನು ಗಮನಿಸಿ ಹಾರಿದ ಸತೀಶ್ ಕುಮಾರ್, ಆ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 2.5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅವರ ಧೈರ್ಯವನ್ನು ಶ್ಲಾಘಿಸಿದ್ದಾರೆ.

    ರೈಲು ನಿಲ್ದಾಣದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ 24 ಸೆಕೆಂಡುಗಳ ವಿಡಿಯೋದಲ್ಲಿ ರೈಲ್ವೆ ಸಿಬ್ಬಂದಿ ಎಚ್. ಸತೀಶ್ ಕುಮಾರ್, ಮುಂಬರುವ ಗೂಡ್ಸ್ ರೈಲಿಗೆ ಹಸಿರು ನಿಶಾನೆ ತೋರಲು ಪ್ಲಾಟ್‌ಫಾರ್ಮ್‌ನತ್ತ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು, ಇದ್ದಕ್ಕಿದ್ದಂತೆ ತಿರುಗಿದಾಗ, ಬಿದ್ದಿರುವ ವ್ಯಕ್ತಿಯನ್ನು ಓಡಿಹೋಗಿ ರಕ್ಷಿಸುವುದನ್ನು ಕಾಣಬಹುದಾಗಿದೆ. ಆದರೆ ಆ ವ್ಯಕ್ತಿ ಅಚಾನಕ್ಕಾಗಿ ಬಿದ್ದನೋ ಅಥವಾ ಆತ್ಮಹತ್ಯೆಗೆ ಯತ್ನಿಸಿದನೋ ತಿಳಿದು ಬಂದಿಲ್ಲ.

    ಈ ವಿಡಿಯೋವನ್ನು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೂ ಮಾಡಿದ್ದು, ಭಾರತೀಯ ರೈಲ್ವೆ ಸಿಬ್ಬಂದಿ ಎಚ್.ಸತೀಶ್ ಅವರು ತನ್ನ ಜೀವದ ಹಂಗು ತೊರೆದು, ಹಳಿಗಳ ಮೇಲೆ ಬಿದ್ದಿದ್ದ ವ್ಯಕ್ತಿಯ ಜೀವವನ್ನು ಉಳಿಸುವುದರ ಮೂಲಕ ಇಂದು ರಿಯಲ್ ಹೀರೋ ಆಗಿದ್ದಾರೆ. ಇಂತಹ ಧೈರ್ಯಶಾಲಿ ಹಾಗೂ ಪರಿಶ್ರಮಿ ಸಿಬ್ಬಂದಿಗಳಿಂದಲೇ ಇಂದಿಗೂ ನೂರಾರು ಜನರ ಜೀವ ಉಳಿಯುತ್ತಿದೆ. ನಿಮ್ಮ ಈ ನಿಸ್ವಾರ್ಥ ಸೇವೆಗೆ ನಮ್ಮದೊಂದು ಸಲಾಂ ಎಂದು ಹೇಳಿದ್ದಾರೆ.

    VIDEO| ಜೀವದ ಹಂಗು ತೊರೆದು ವ್ಯಕ್ತಿಯ ಪ್ರಾಣ ಉಳಿಸಿದ ರೈಲ್ವೆ ಸಿಬ್ಬಂದಿ: ಮೆಚ್ಚುಗೆಯ ಮಹಾಪೂರ

    ಸರ್ಕಾರಿ ಶಾಲೆಯಲ್ಲಿ ಮಕ್ಕಳ ಬ್ಯಾಂಕ್!

    ಕಮ್ಯೂನಿಷ್ಠರಾಗಿ ಪರಿಷ್ಕರಣೆ ಮಾಡಿಲ್ಲ: ಸರ್ಕಾರಕ್ಕೆ ಬರಗೂರು ಉತ್ತರ; ಸಾಹಿತಿಗಳನ್ನು ಮಾತುಕತೆಗೆ ಆಹ್ವಾನಿಸಲು ಆಗ್ರಹ

    ಪೂರಕ ಪರೀಕ್ಷೆಗೆ ನೋಂದಣಿ ಇಳಿಕೆ: ಕಳೆದ ವರ್ಷಕ್ಕಿಂತ ಶೇ.50 ಅರ್ಜಿ ಕಡಿಮೆ; 27ರಿಂದ ಎಕ್ಸಾಂ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts