More

    KPSC ಪ್ರಶ್ನೆ ಪತ್ರಿಕೆ ಮೇಲೆ ಗುರುತು ಮಾಡಿ ಡಿಬಾರ್: ನನ್ನದೇನು ತಪ್ಪಿಲ್ಲ ಎಂದ ಅಭ್ಯರ್ಥಿ

    ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಮೇಲೆ ಗುರುತು ಮಾಡಿದ ಪರಿಣಾಮ ಅಭ್ಯರ್ಥಿ ಒರ್ವನನ್ನು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಡಿಬಾರ್ ಮಾಡಿದೆ. ಜತೆಗೆ ಆತನ ಅಭ್ಯರ್ಥತ್ವವನ್ನು ರದ್ದು ಮಾಡಿದೆ.

    2020ನೇ ಸಾಲಿನ ಇಲಾಖಾ ಪರೀಕ್ಷೆಗಳಿಗೆ 2021ರ ಏಪ್ರಿಲ್ 5 ರಂದು ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದಿತ್ತು. ಬೆಳಗಾವಿಯ ಡಿಎಂಎಸ್ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ಪರೀಕ್ಷೆಗೆ ಹಾಜರಾಗಿದ್ದ ರಮೇಶ್ ಪಿ.ಅರಕೇರಿ ಎಂಬ ಅಭ್ಯರ್ಥಿ ಪ್ರಶ್ನೆ ಪತ್ರಿಕೆಯಲ್ಲಿ ಉತ್ತರಗಳನ್ನು ಗುರುತಿಸಿದ್ದರು. ಇದನ್ನು ಪ್ರಶ್ನಿಸಿದ್ದ ಪರೀಕ್ಷಾ ಮೇಲ್ವಿಚಾರಕರ ಜೊತೆ ಅಸಭ್ಯವಾಗಿ ವರ್ತಿಸಿದ್ದದ್ದರು.

    ಈ ಸಂಬಂಧ ಶಾಲೆಯ ಪ್ರಾಂಶುಪಾಲರು ಕೆಪಿಎಸ್‌ಸಿಗೆ ದೂರು ಸಲ್ಲಿಸಿದ್ದರು. ಜತೆಗೆ, ಪ್ರಶ್ನೆ ಪತ್ರಿಕೆಯ ಮೇಲೆ ಬರೆದಿರುವುದಕ್ಕೆ ದಾಖಲೆಗಳೊಂದಿಗೆ ವಿಡಿಯೋ ಮತ್ತು ಆಡಿಯೋ ತುಣುಕುಗಳ ಸಿಡಿ ಮಾಡಿ ಸಲ್ಲಿಸಿದ್ದರು. ಈ ಅಂಶಗಳನ್ನು ಪರಿಶೀಲಿಸಿದ ಆಯೋಗ ಅರೋಪಿಯ 2020ನೇ ಸಾಲಿನ ಡಿಬಾರ್ ಮಾಡಿ ಆದೇಶಿಸಿದೆ.

    ನನ್ನದೇನು ತಪ್ಪಿಲ್ಲ: ಪ್ರಕರಣ ಸಂಬಂಧ ಆ ಅಭ್ಯರ್ಥಿಗೆ ಆಯೋಗವು ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಅಭ್ಯರ್ಥಿ, ಪರೀಕ್ಷೆ ಮುಗಿಯಲು 10 ನಿಮಿಷಗಳಿರುವ ಸಂದರ್ಭದಲ್ಲಿ ಪರೀಕ್ಷಾ ಮೇಲ್ವಿಚಾರಕರು ನನ್ನನ್ನು ವಿನಾಕಾರಣ ಪ್ರಶ್ನೆ ಮಾಡಿದರು. ಅಲ್ಲದೆ, ಪ್ರಶ್ನೆ ಪತ್ರಿಕೆ ಪಡೆದುಕೊಂಡರು. 58 ವರ್ಷದವನಾದ ನನ್ನನ್ನು ಅಗೌರವದಿಂದ ಮಾತನಾಡಿದರು. ಆದರೆ, ನಾನು ಎಲ್ಲಿಯೂ ಅಸಭ್ಯವಾಗಿ ವರ್ತಿಸಿಲ್ಲ ಎಂದು ಸಮಜಾಯಿಷಿ ನೀಡಿದ್ದರು. ಈ ಪ್ರತಿಕ್ರಿಯೆಯನ್ನು ತಳ್ಳಿಹಾಕಿರುವ ಆಯೋಗ ಅಭ್ಯರ್ಥಿ ಮಾಡಿರುವುದು ತಪ್ಪು ಎಂದು ಪರಿಗಣಿಸಿ ಡಿಬಾರ್ ಮಾಡಿದೆ.

    ಮಹಿಳಾ ಪೊಲೀಸ್​ ಅಧಿಕಾರಿ ಶೌಚಗೃಹ ತೆರಳುವುದನ್ನೇ ಕಾಯ್ತಿದ್ದ ಕಾನ್ಸ್​ಟೇಬಲ್​ನಿಂದ ನೀಚ ಕೆಲಸ

    ಕಾಂಗ್ರೆಸ್‌ನಲ್ಲಿ ಅಲ್ಲೋಲ- ಕಲ್ಲೋಲ: ಸಿಂಗ್‌ ಹಾದಿ ತುಳಿದ ಸಿಧು! ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

    ಡ್ರೈ ಫ್ರೂಟ್ಸ್ ಎಂಬ ಪೋಷಕಾಂಶಗಳ ಕಣಜ: ನಿತ್ಯ ಆಹಾರದಲ್ಲಿ ಡ್ರೈ ಫ್ರೂಟ್ಸ್ ಇದ್ರೆ ನೀವಾಗುವಿರಿ ಫಿಟ್​ ಆ್ಯಂಡ್​ ಫೈನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts