More

    ಹೆಣ್ಣು ಮಗು ಹುಟ್ಟಿದ ಖುಷಿ… ಹೆಲಿಕಾಪ್ಟರ್​ ಮೂಲಕ ಮೊಮ್ಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ರೈತ!

    ಪುಣೆ: ಮೊಮ್ಮಗಳು ಹುಟ್ಟಿದ ಖುಷಿಗೆ ರೈತನೋರ್ವ ಹೆಲಿಕಾಪ್ಟರ್​ ಬಾಡಿಗೆ ಪಡೆದು ಮೊಮ್ಮಗಳಿಗೆ ಅದ್ಧೂರಿ ಸ್ವಾಗತ ಕೋರಿದ ಘಟನೆ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

    ಪುಣೆ ಹೊರ ವಲಯದ ಬಲೆವಾಡಿ ಏರಿಯಾದ ನಿವಾಸಿ ಅಜಿತ್​ ಪಾಂಡುರಂಗ ಬಲವಾಡ್ಕರ್ ತಮ್ಮ ಮೊಮ್ಮಗಳಿಗೆ ಅದ್ಧೂರಿ ಸ್ವಾಗತವನ್ನು ನೀಡುವ ಮೂಲಕ ಹೆಣ್ಣು ಮಕ್ಕಳೆಂದರೆ ಮೂಗು ಮುರಿಯುವ ಜನರಿಗೆ ಬದಲಾವಣೆಯ ಸಂದೇಶವನ್ನು ರವಾನಿಸಿದ್ದಾರೆ. ತನ್ನ ಕುಟುಂಬದ ಹೊಸ ಅತಿಥಿ ಕೃಷಿಕಾಗೆ ಈ ರೀತಿಯ ಅದ್ಧೂರಿ ಸ್ವಾಗತ ಕೋರಲು ಮೊದಲೇ ಬಯಸಿದ್ದೆ ಎಂದು ಬಲವಾಡ್ಕರ್​ ಹೇಳಿದ್ದಾರೆ. ​

    ಹೆರಿಗೆಯಾದ ಬಳಿಕ ಸಮೀಪದ ಶೆವಾಲ್ ವಾಡಿಯಲ್ಲಿರುವ ತಾಯಿಯ ಮನೆಯಲ್ಲಿದ್ದ ಮಗು ಮತ್ತು ತಾಯಿಯನ್ನು ಮನೆಗೆ ಕರೆತರುವ ಸಮಯ ಬಂದಾಗ, ಬಲವಾಡ್ಕರ್​ ಅವರು ಹೆಲಿಕಾಪ್ಟರ್​ ಬುಕ್​ ಮಾಡಿ ಅದ್ಧೂರಿಯಾಗಿ ಮನೆಗೆ ಕರೆತಂದಿದ್ದಾರೆ. (ಏಜೆನ್ಸೀಸ್​)

    ಕರಾಚಿಯಲ್ಲಿ ಸೂಸೈಡ್​ ಬಾಂಬ್​ ದಾಳಿ ನಡೆಸಿದ ಮಹಿಳೆ ಎಂಎಸ್ಸಿ ಪದವೀಧರೆ, ಗಂಡ ಡಾಕ್ಟರ್​

    ಆಂಗ್​ ಸಾನ್​ ಸೂಕಿಗೆ 5 ವರ್ಷ ಜೈಲುಶಿಕ್ಷೆ ವಿಧಿಸಿದ ಮ್ಯಾನ್ಮಾರ್​ ನ್ಯಾಯಾಲಯ

    ದಾಖಲಾತಿ ಪರಿಶೀಲನೆಗೆ ಹೋಗಿದ್ದ ಪಿಎಸ್​ಐ ಅಭ್ಯರ್ಥಿ ಸಿಐಡಿ ಅಧಿಕಾರಿಗಳ ಬಳಿಕ ಲಾಕ್ ಆಗಿದ್ದೆ ವಿಚಿತ್ರ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts