More

    ಪರೀಕ್ಷೆ ಇಲ್ಲದೇ 10ನೇ ತರಗತಿ ಪಾಸ್​: ಪಿಯು ವಿದ್ಯಾರ್ಥಿನಿಯ ಸಾವಿಗೆ ಕಾರಣವಾಯ್ತು ಆನ್​ಲೈನ್​ ಕ್ಲಾಸ್!​

    ಆದಿಲ್​ಬಾದ್​: ಪ್ರಥಮ ಪಿಯುಸಿ ಮಧ್ಯಂತರ ಪರೀಕ್ಷೆಯಲ್ಲಿ ಫೇಲ್​ ಆದೆ ಎಂದು ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ತೆಲಂಗಾಣದ ಆದಿಲ್​ಬಾದ್​ ಪಟ್ಟಣದಲ್ಲಿ ನಡೆದಿದೆ.

    ಮೃತ ವಿದ್ಯಾರ್ಥಿನಿಯನ್ನು ನಂದಿನಿ (17) ಎಂದು ಗುರುತಿಸಲಾಗಿದೆ. ಈಕೆ ಬಂಗಾರುಗುಡ ಮಾದರಿ ಶಾಲೆಯನ್ನು 10ನೇ ತರಗತಿ ಪಾಸ್​ ಮಾಡಿದ್ದಳು. ಮಹಾಮಾರಿ ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆ ಇಲ್ಲದೆ ವಿದ್ಯಾರ್ಥಿನಿ 10ನೇ ತರಗತಿ ಪಾಸ್​ ಆಗಿದ್ದಳು. ಬಳಿಕ ಆದಿಲ್​ಬಾದ್​ ಪಟ್ಟಣದ ಕಾಲೇಜು ಒಂದರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಕಳೆದ ಶುಕ್ರವಾರ ಪ್ರಥಮ ಪಿಯುಸಿಯ ಮಧ್ಯಂತರ ಪರೀಕ್ಷೆಯ ಫಲಿತಾಂಶವನ್ನು ಕಾಲೇಜು ಬಿಡುಗಡೆ ಮಾಡಿತ್ತು. ಅದರಲ್ಲಿ ನಂದನಿ ಅನುತ್ತೀರ್ಣಳಾಗಿದ್ದಳು.

    ಫಲಿತಾಂಶದಿಂದ ಮನನೊಂದ ನಂದಿನಿ ಅದೇ ದಿನ ಸಂಜೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಅಸ್ವಸ್ತಳಾಗಿದ್ದ ಆಕೆಯನ್ನು ರಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆಂದು ಹೈದರಾಬಾದ್​ನ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬುಧವಾರ ಬೆಳಗ್ಗೆ 6 ಗಂಟೆಗೆ ನಂದಿನಿ ಕೊನೆಯುಸಿರೆಳೆದಿದ್ದಾಳೆ. ಬೆಳೆದ ಮಗಳು ಇದೀಗ ದಿಢೀರ್​ ಮರೆಯಾಗಿದ್ದನ್ನು ನೋಡಿ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

    ಅರ್ಥವಾಗದ ಆನ್​ಲೈನ್​ ಕ್ಲಾಸ್​
    ಕರೊನಾ ಸಾಂಕ್ರಮಿಕ ಹಿನ್ನೆಲೆಯಲ್ಲಿ ಹಲವೆಡೆ ಇನ್ನು ಕೆಲವು ಕ್ರಮಗಳು ಜಾರಿಯಲ್ಲಿರುವುದರಿಂದ ಶಾಲಾ-ಕಾಲೇಜುಗಳು ಆನ್​ಲೈನ್​ ಕ್ಲಾಸ್​ ಮೊರೆಹೋಗಿವೆ. ಇನ್ನು ಕಳೆದ ವರ್ಷ 10ನೇ ತರಗತಿಯೂ ಕೂಡ ಆನ್​ಲೈನ್​ ಕ್ಲಾಸ್​ ಮೂಲಕವೇ ನಡೆದಿದೆ. ವಿದ್ಯಾರ್ಥಿಗಳಿಗೆ ಇದು ಹೊಸದಾದ್ದರಿಂದ ಹೊಂದಿಕೊಳ್ಳುವುದು ಸ್ವಲ್ಪ ಕಷ್ಟವಾಗಿದೆ. ಅಲ್ಲದೆ, ಆನ್​ಲೈನ್​ ಕ್ಲಾಸ್​ ಅರ್ಥವಾಗುತ್ತಿಲ್ಲ ಎಂದು ನಂದಿನಿ ಹೇಳುತ್ತಿದ್ದಳಂತೆ. ಪರೀಕ್ಷೆಯನ್ನೇ ಮಾಡದೇ 10ನೇ ತರಗತಿ ಪಾಸ್​ ಮಾಡಿದ್ದು ಕೂಡ ಆಕೆಯ ಮೇಲೆ ಪರಿಣಾಮ ಬೀರಿದೆ. ತನ್ನ ಸಂಕಟವನ್ನು ಮನೆಯಲ್ಲೂ ಹಾಗೂ ಹೊರಗೂ ಹೇಳಲಾಗದೇ ಈ ದಾರಿ ಹಿಡಿದಿದ್ದಾಳೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಕೆಎಫ್​ಸಿ ಚಿಕನ್​ ಖರೀದಿಸಿದ ಗ್ರಾಹಕರೊಬ್ಬರು ಬಾಯಿ ಚಪ್ಪರಿಸಿ ತಿನ್ನುವಾಗ ಕಾದಿತ್ತು ಬಿಗ್​ ಶಾಕ್​!

    ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿ, ಅಶ್ವಿನ್, ಪಂತ್‌ಗೆ ದಾಖಲೆ ನಿರೀಕ್ಷೆ

    ಚೀನಾದಲ್ಲಿ ಲಾಕ್​ಡೌನ್​; ಬ್ರಿಟನ್​ನಲ್ಲಿ ಮುಂದುವರಿದ ಆತಂಕ, ಗರಿಷ್ಠ ದೈನಿಕ ಪ್ರಕರಣ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts