More

    ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾ ಕುರಿತು ಶಾಕಿಂಗ್​ ಕಾಮೆಂಟ್: ವೈರಲ್​ ಆಗ್ತಿದೆ ಪ್ರಕಾಶ್​ ರಾಜ್ ಟ್ವೀಟ್​​

    ನವದೆಹಲಿ: ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ “ದಿ ಕಾಶ್ಮಿರ ಫೈಲ್ಸ್​” ಸಿನಿಮಾ ಭರ್ಜರಿ ಪ್ರದರ್ಶನದೊಂದಿಗೆ ವ್ಯಾಪಕ ಚರ್ಚೆಗೂ ಕಾರಣವಾಗಿದೆ. 1990 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಕುರಿತ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ. ಮಾರ್ಚ್​ 11ರಂದು ಬಿಡುಗಡೆಯಾದ ಈ ಸಿನಿಮಾವನ್ನು ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸಿನಿಮಾವನ್ನು ಟೀಕೆ ಮಾಡಿದ್ದಾರೆ. ಈ ಸಾಲಿಗೆ ನಟ ಹಾಗೂ ರಾಜಕಾರಣಿ ಪ್ರಕಾಶ್​ ರಾಜ್​ ಕೂಡ ಸೇರಿಕೊಂಡಿದ್ದಾರೆ.

    ಪ್ರಕಾಶ್​ ರಾಜ್​ ಅವರು ಮಾಡಿರುವ ಟ್ವೀಟ್​ ಇದೀಗ ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಪ್ರಕಾಶ್​ ರಾಜ್​ ಮಾಡಿರುವ ಟ್ವೀಟ್​ ಏನು ಅಂದರೆ, ಕಾಶ್ಮೀರ ಫೈಲ್ಸ್ ಚಿತ್ರವು ಹಳೆಯ ಗಾಯಗಳನ್ನು ವಾಸಿಮಾಡುತ್ತದೆಯೇ? ಅಥವಾ ಇದು ಹೆಚ್ಚು ಪ್ರಚೋದನಕಾರಿಯಾಗಿ ಮಾಡುತ್ತದೆಯೇ? ಅಥವಾ ದ್ವೇಷದ ಬೀಜಗಳನ್ನು ಬಿತ್ತುವುದೇ? ಜಸ್ಟ್​ ಆಸ್ಕಿಂಗ್​ ಎಂದು ಟ್ವೀಟ್​ ಮಾಡಿದ್ದಾರೆ. ಟ್ವೀಟ್​ ಜತೆಗೆ ಕಾಶ್ಮೀರ ಫೈಲ್ಸ್​ ಚಿತ್ರ ವೀಕ್ಷಣೆ ಬಳಿಕ ಚಿತ್ರಮಂದಿರಲ್ಲಿ ವ್ಯಕ್ತಿಯೊರ್ವ ವೀಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ದೃಶ್ಯವಿದೆ. ಇದೀಗ ಪ್ರಕಾಶ್​ ರಾಜ್​ ಟ್ವೀಟ್​ ಹಾಟ್​ ಟಾಪಿಕ್​ ಆಗಿದೆ.

    ಸಾಕಷ್ಟು ಪರ-ವಿರೋಧದ ನಡುವೆಯೂ ಕಾಶ್ಮೀರ್​ ಫೈಲ್ಸ್​ ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕರ್ನಾಟಕ ಮಾತ್ರವಲ್ಲದೆ ಗುಜರಾತ್, ಹರಿಯಾಣ, ಮಧ್ಯಪ್ರದೇಶದ ರಾಜ್ಯಗಳಲ್ಲೂ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಪ್ರಧಾನಿ ಮೋದಿ ಅವರೂ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ, ದೇಶದೆಲ್ಲಡೆ ಹೌಸ್​ಫುಲ್ ಪ್ರದರ್ಶನ ಕಾಣುತ್ತಿರುವ ”ದಿ ಕಾಶ್ಮೀರ್​ ಫೈಲ್ಸ್​” ಸಿನಿಮಾವನ್ನು ಕರ್ನಾಟಕದ ಸಚಿವರು, ಶಾಸಕರು ಕೂಡ ವೀಕ್ಷಣೆ ಮಾಡಿದ್ದಾರೆ. (ಏಜೆನ್ಸೀಸ್​)

    ಸಮಂತಾಗೆ ಏನಾಯ್ತು? ಯಾಕಿಂಗೆ ಆಡ್ತಿದ್ದಾರೆ? ಹೀಗೆ ಮುಂದುವರಿದ್ರೆ ಗೌರವಕ್ಕೆ ಧಕ್ಕೆ ಖಂಡಿತ ಅಂತಿದ್ದಾರೆ ಇವರು…

    ಬಾಳು ಕೊಡ್ತೀನಿ, ನೀನೇ ನನ್ನ ಜೀವ ಎಂದು ಅರ್ಧದಲ್ಲೇ ಕೈ ಕೊಟ್ಟ ಕಿರಾತಕ: ಗಂಡನಿಗಾಗಿ ಧರಣಿ ಕುಳಿತ ಶಿಕ್ಷಕಿ

    ತಕ್ಷಣ ಡಾನ್ಸ್​ ಕ್ಲಾಸ್​ಗೆ ಬಾ, ನನ್ನನ್ನು ಪ್ರೀತಿಸು, ಇಲ್ಲಾಂದ್ರೆ ಸಾಯಿಸುವೆ… ಅಪ್ರಾಪ್ತೆಗೆ ಅನ್ಯಕೋಮಿನ ಯುವಕನಿಂದ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts