More

    ಹುಡ್ಗೀರಿಗೆ ಪೋನಿ ಹೇರ್​ಸ್ಟೈಲ್​​​ ಬ್ಯಾನ್​, ಬಿಳಿ ಬಣ್ಣದ ಒಳಉಡುಪಿಗೆ ಮಾತ್ರ ಅನುಮತಿ: ಇಲ್ಲಿದೆ ಶಾಕಿಂಗ್​ ಕಾರಣ

    ಟೊಕಿಯೋ: ಜಪಾನ್​ ಶಾಲೆಗಳಲ್ಲಿ ವಿಚಿತ್ರ ನಿರ್ಬಂಧ ಹೇರಿರುವ ಪ್ರಸಂಗ ಬೆಳಕಿಗೆ ಬಂದಿದೆ. ಹುಡುಗಿಯರಿಗೆ ಪೋನಿ ಹೇರ್​ಸ್ಟೈಲ್​ ನಿಷೇಧಿಸಿರುವುದಲ್ಲದೆ, ಬಿಳಿ ಬಣ್ಣದ ಒಳಉಡುಪು ಧರಿಸಲು ಮಾತ್ರ ಅನುಮತಿಯನ್ನು ನೀಡಲಾಗಿದೆ. ಮಹಿಳೆಯರ ಕತ್ತಿನ ಭಾಗವು ಹುಡುಗರನ್ನು ಲೈಂಗಿಕವಾಗಿ ಪ್ರಚೋದಿಸುತ್ತದೆ ಕಾರಣ ನೀಡಿ ಪೋನಿ ಹೇರ್​ಸ್ಟೈಲ್​ಗೆ ನಿರ್ಬಂಧ ಹೇರಲಾಗಿದೆ.

    ಜಪಾನ್​ನ ಬಹುದೊಡ್ಡ ಸಂಸ್ಕೃತಿ ಬುರಾಕು ಕೊಸೊಕು ಭಾಗವಾಗಿ ಶಾಲೆಗಳಲ್ಲಿ ಪೋನ್​ ಹೇರ್​ಸ್ಟೈಲ್​ ಬ್ಯಾನ್​ ಮಾಡಲಾಗಿದ್ದು, ಈ ಕಠಿಣ ನಿಯಮಗಳು ಶಾಲೆಗೆ ಹೋಗುವ ಯುವ ಜನಾಂಗವನ್ನು ಕಟ್ಟಿ ಹಾಕಿದಂತಿದೆ.

    ಈ ಬಗ್ಗೆ ಮಾಧ್ಯಮಿಕ ಶಾಲೆಯ ಮಾಜಿ ಶಿಕ್ಷಕಿ ಮೊಟೊಕಿ ಸುಗಿಯಮಾ ಮಾತನಾಡಿದ್ದಾರೆ. ನಾವು ಯಾವಾಗಲೂ ನಿಯಮಗಳನ್ನು ಟೀಕಿಸುತ್ತೇವೆ. ಆದರೆ, ಅಂತಹ ಟೀಕೆಗಳ ಕೊರತೆ ಇರುವುದರಿಂದ ನಿಯಮಗಳು ತುಂಬಾ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಆಯ್ಕೆ ಇಲ್ಲ. ಹೀಗಾಗಿ ನಿಯಮಗಳನ್ನು ಒಪ್ಪಿಕೊಳ್ಳಲೇಬೇಕಿದೆ. ಬಹುತೇಕ ಶಾಲೆಗಳಲ್ಲಿ ಪೋನಿ ಹೇರ್​ಸ್ಟೈಲ್​ ಬ್ಯಾನ್​ ಮಾಡಲಾಗಿದೆ ಎಂದು ತಿಳಿಸಿದರು. ಅಲ್ಲದೆ, ಹುಡುಗರು ಹುಡಿಯರನ್ನು ನೋಡುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದರು.

    2020ರಲ್ಲಿ ದೇಶದ ಫುಕುವೋಕಾ ಪ್ರದೇಶದಲ್ಲಿ ನಡೆದ ಸಮೀಕ್ಷೆಯೊಂದು ಹುಡುಗಿಯರ ಕುತ್ತಿಗೆ ಭಾಗವು ಪುರುಷ ವಿದ್ಯಾರ್ಥಿಗಳನ್ನು ಲೈಂಗಿಕವಾಗಿ ಪ್ರಚೋದಿಸುತ್ತದೆ ಎಂದು ಕಂಡುಕೊಂಡಿದೆ. ಹೀಗಾಗಿ ಆ ಏರಿಯಾದ 10 ಶಾಲೆಗಳಲ್ಲಿ ಒಂದು ಶಾಲೆ ಫೋನಿ ಹೇರ್​ಸ್ಟೈಲ್​ ಅನ್ನು ನಿರಾಕರಿಸಲಾಗಿದೆ. ಇಷ್ಟೇ ಅಲ್ಲದೆ, ಮಕ್ಕಳ ಸಾಕ್ಸ್​ ಬಣ್ಣ, ಸ್ಕರ್ಟ್​ ಉದ್ದ ಮತ್ತು ಕಣ್ಣಿನ ಹುಬ್ಬಿನ ಆಕಾರದ ಮೇಲೆಯೂ ಹಲವು ನಿಯಮಗಳನ್ನು ರೂಪಿಸಲಾಗಿದೆ.

    ಇನ್ನು ಕೆಲವು ಶಾಲೆಗಳು ಪೋನಿ ಹೇರ್​ಸ್ಟೈಲ್​ ಅನುಮತಿ ನೀಡಿದ್ದು, ಅವರಲ್ಲಿಯೇ ವಿರೋಧಾಭಾಸವಿದೆ. ಏನೇ ಆದರೂ ಇವೆಲ್ಲ ಒಂದು ರೀತಿಯ ವಿಚಿತ್ರ ನಿಯಮಗಳಲ್ಲದೇ ಮತ್ತೇನು ಅಂತಾ ಜನರು ಚರ್ಚಿಸುತ್ತಿದ್ದಾರೆ. ಈ ಬಗ್ಗೆ ನಿಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

    2009ರಲ್ಲಿ ಕಂಗನಾ ಹೇಳಿದ್ದ ಗುಟ್ಟನ್ನು ರಟ್ಟು ಮಾಡಿದ ಪ್ರಭಾಸ್​: ರಾಧೆಶ್ಯಾಮ್​ ಚಿತ್ರಕ್ಕೂ ಆ ಗುಟ್ಟಿಗೂ ಇದೆ ಲಿಂಕ್!​

    ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸೌತ್​ ಬ್ಯೂಟಿ ವರು! ವಿಡಿಯೋ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

    ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಸಿದ್ರೆ ಬಂಪರ್ ಆಫರ್​: 137 ವರ್ಷ ಇತಿಹಾಸ ಇರೋ ಪಕ್ಷಕ್ಕೆ ಇದೆಂಥಾ ದುರ್ಗತಿ ಎಂದ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts