More

    ನಕಲಿ ಐಡಿ, ಪ್ರೀತಿ, ಕೊಲೆ, ಆತ್ಮಹತ್ಯೆ! ಮಗು ಸೇರಿ ಮೂವರ ಪ್ರಾಣ ಕಸಿದ ಫೇಸ್​ಬುಕ್​ ಟೈಮ್​ ಪಾಸ್ ಲವ್​​

    ಕೊಲ್ಲಂ: ಕೇವಲ ಟೈಮ್​ ಪಾಸ್​​ ಮಾಡಲು ಫೇಸ್​ಬುಕ್​ನಲ್ಲಿ ತೆರೆದ ನಕಲಿ ಐಡಿಯಿಂದಾಗಿ ನವಜಾತ ಶಿಶು ಸೇರಿದಂತೆ ಮೂವರ ಪ್ರಾಣ ಕಳೆದುಕೊಂಡಿರುವ ಆತಂಕಕಾರಿ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಫೇಸ್​ಬುಕ್​ ಎಷ್ಟು ಉಪಕಾರಿಯೋ? ಅಷ್ಟೇ ಅಪಾಯಕಾರಿ ಎಂಬುದನ್ನು ಈ ಘಟನೆ ನಿರೂಪಿಸಿದೆ. ಅಲ್ಲದೆ, ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ಫೇಸ್​ಬುಕ್​ ಫಲಿತಾಂಶ ನಿರ್ಧಾರವಾಗಿರುತ್ತದೆ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆ.

    ಕಳೆದ ಜನವರಿ 5ರಂದು ಕೊಲ್ಲಂನಲ್ಲಿ ತ್ಯಾಜ್ಯಗಳ ರಾಶಿಯಲ್ಲಿ ನವಜಾತ ಶಿಶುವೊಂದು ಅನಾಥವಾಗಿ ಪತ್ತೆಯಾಗಿತ್ತು. ಆಸ್ಪತ್ರೆಗೆ ದಾಖಲಿಸಿದರೂ ದುರಾದೃಷ್ಟವಶಾತ್​ ಮಗು ಬದುಕುಳಿಯಲಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಜೂನ್​ 22ರಂದು ಮಗುವಿನ ತಾಯಿ ರೇಷ್ಮಾಳನ್ನು ಬಂಧಿಸಿದರು.

    ಮೃತ ಮಗುವಿನ ಜೈವಿಕ ತಾಯಿ ರೇಷ್ಮಾ ಎಂಬುದು ಡಿಎನ್​ಎದಿಂದ ಖಚಿತವಾಗಿಯಿತು. ಅಲ್ಲದೆ, ಆಕೆಯು ಕೂಡ ತಪ್ಪನ್ನು ಒಪ್ಪಿಕೊಂಡಳು. ಫೇಸ್​ಬುಕ್​ ಫ್ರೆಂಡ್​ ಜತೆ ಓಡಿ ಹೋಗಲು ಮಗುವನ್ನು ಕೊಲೆ ಮಾಡಿದ್ದಾಗಿ ಪೊಲೀಸ್​ ವಿಚಾರಣೆಯಲ್ಲಿ ಹೇಳಿಕೊಂಡಳು. ಇದರ ಬೆನ್ನಲ್ಲೇ ಪೊಲೀಸರು ಆ ಫೇಸ್​ಬುಕ್​​ ಫ್ರೆಂಡ್​ ಯಾರೆಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದರು.

    ರೇಷ್ಮಾ ತನ್ನ ಪತಿಯ ಅತ್ತಿಗೆ ಆರ್ಯಾ ಹೆಸರಿನಲ್ಲಿ ನೋಂದಣಿಯಾಗಿದ್ದ ಸಿಮ್​ ಕಾರ್ಡ್​ ಬಳಸುತ್ತಿದ್ದಳು ಎಂಬುದು ಪೊಲೀಸರಿಗೆ ಖಚಿತವಾಯಿತು. ಬಳಿಕ ವಿಚಾರಣೆಗೆಂದು ಆರ್ಯಾಗೆ ಸಮನ್ಸ್​ ನೀಡಲಾಯಿತು. ಆದರೆ, ಆರ್ಯಾ ತನ್ನ ಸಂಬಂಧಿ ಗ್ರೀಷ್ಮಾ ಜತೆ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಳು. ಇದರಿಂದ ರೆಷ್ಮಾ ಪ್ರಕರಣ ಪೊಲೀಸರಿಗೆ ಮತ್ತಷ್ಟು ಕಗ್ಗಂಟಾಯಿತು.

    ಇಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಅನೇಕ ಸವಾಲುಗಳನ್ನು ತಂದೊಡ್ಡಿತು. ಇಬ್ಬರ ಸಾವಿನ ಬಳಿಕ ಪೊಲೀಸರು ಆರ್ಯಾ ಮತ್ತು ರೇಷ್ಮಾಳ ಪತಿಯಂದಿರ ವಿಚಾರಣೆ ನಡೆಸಿ, ಹೇಳಿಕೆಯನ್ನು ದಾಖಲಿಸಿದರು. ಬಳಿಕ ಈ ಪ್ರಕರಣದಲ್ಲಿ ನಡೆದ ಗ್ರೀಷ್ಮಾ ಸ್ನೇಹಿತನ ವಿಚಾರಣೆಯು ಇಡೀ ಪ್ರಕರಣಕ್ಕೆ ಮಹತ್ವದ ಸುಳಿವು ನೀಡಿತು.

    ಆಗಿದ್ದೇನು?
    ಆರ್ಯಾ ಮತ್ತು ಗ್ರೀಷ್ಮಾ, ಆನಂಧು ಎಂಬ ಹುಡುಗನ ಹೆಸರಲ್ಲಿ ಟೈಮ್​ ಪಾಸ್​ಗಾಗಿ ಫೇಸ್​ಬುಕ್​ನಲ್ಲಿ ನಕಲಿ ಐಡಿಯನ್ನು ತೆರೆದಿದ್ದರು. ಬಳಿಕ ರೆಷ್ಮಾ ಜತೆ ಪ್ರೀತಿಯ ಹೆಸರಲ್ಲಿ ಚಾಟಿಂಗ್​ ಮಾಡುತ್ತಿದ್ದರು. ಆಕೆಯು ಕೂಡ ತನ್ನೊಂದಿಗೆ ಚಾಟಿಂಗ್​ ಮಾಡುತ್ತಿರುವುದು ಹುಡುಗನೇ ಎಂದು ನಂಬಿದ್ದಳು. ಇತ್ತ ರೆಷ್ಮಾ ಗರ್ಭಿಣಿ ಮತ್ತು ಮಗುವನ್ನು ಬಿಟ್ಟು ಬರುವ ನಿರ್ಧಾರ ಮಾಡಿದ್ದಾಳೆ ಎಂಬುದು ಆರ್ಯಾ ಮತ್ತು ಗ್ರೀಷ್ಮಾಗೂ ತಿಳಿದಿರಲಿಲ್ಲ.

    ಈ ಪ್ರಕರಣದಲ್ಲಿ ಆರ್ಯಾಗೆ ಸಮನ್ಸ್​ ಬಂದಿದ್ದರಿಂದ ಇಬ್ಬರು ಬಂಧನವಾಗುತ್ತೇವೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದುರಾದೃಷ್ಟವಶಾತ್​ ಫೇಸ್​ಬುಕ್​ ಟೈಮ್​ ಪಾಸ್ ನವಜಾತ ಶಿಶು ಸೇರಿ ಮೂವರ ಸಾವಿಗೆ ಕಾರಣವಾಗಿದೆ. ಇಂತಹ ಘಟನೆಯಿಂದ ಎಲ್ಲರು ಎಚ್ಚೆತ್ತುಕೊಳ್ಳಬೇಕಿದೆ. ಸಾಮಾಜಿಕ ಜಾಲತಾಣವೇ ಜೀವನವಲ್ಲ, ಏನಾದರೂ ಮಾಡುವ ಮುಂಚೆ ಅದರಿಂದಾಗುವ ಪರಿಣಾಮದ ಬಗ್ಗೆ ಮೊದಲು ಯೋಚಿಸಬೇಕು. ಇಲ್ಲವಾದಲ್ಲಿ ಅನಾಹುತ ಸಂಭವಿಸುವುದು ನಿಶ್ಚಿತ ಎಂಬುದಕ್ಕೆ ಈ ಒಂದು ಘಟನೆಯೇ ಸಾಕ್ಷಿ. (ಏಜೆನ್ಸೀಸ್​)

    ಗೂಗಲ್‌ನಲ್ಲಿ ಪುರುಷರು ಅತೀ ಹೆಚ್ಚಾಗಿ ಹುಡುಕುವುದು ಇವಂತೆ- ಸಮೀಕ್ಷೆ ಏನು ಹೇಳಿದೆ ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts