More

    ಪೊಲೀಸರು ಲಂಚ ತಗೊಂಡ್ರೆ ಆ ಕೆಲ್ಸನಾ ಮಾಡೇ ಮಾಡ್ತಾರೆ ಆದ್ರೆ… ಸತ್ಯ ಒಪ್ಕೊಂಡ ಪೊಲೀಸ್​ ಅಧಿಕಾರಿ

    ಲಖನೌ: ಪೊಲೀಸರನ್ನು ಕಂಡರೆ ಮೂಗು ಮುರಿಯುವ ಕಾಲದಲ್ಲಿ ಉತ್ತರ ಪ್ರದೇಶದ ಪೊಲೀಸ್​ ಅಧಿಕಾರಿಯೊಬ್ಬರು ಆಡಿರುವ ಮಾತು ಪೊಲೀಸರ ಮೇಲಿನ ಗೌರವವನ್ನು ಮತ್ತಷ್ಟು ಮಣ್ಣುಪಾಲು ಮಾಡಿದೆ. ಪೊಲೀಸ್​ ಇಲಾಖೆಯ ಅಧಿಕಾರಿಗಳು ಲಂಚ ತೆಗೆದುಕೊಳ್ಳುತ್ತಾರೆಂದು ಪೊಲೀಸ್​ ಅಧಿಕಾರಿಯೊಬ್ಬರು ಮಾತನಾಡಿರುವ ವಿಡಿಯೋ ವೈರಲ್​ ಆಗಿದ್ದು, ವಿವಾದದ ಅಲೆ ಎಬ್ಬಿಸಿದೆ.

    ಉನ್ನಾವೋ ಜಿಲ್ಲೆಯ ಬಿಘಪುರ್​ನಲ್ಲಿರುವ ಲಕ್ಷ್ಮೀ ನಾರಾಯಣ ಪಬ್ಲಿಕ್​ ಇಂಟರ್​ ಕಾಲೇಜಿನಲ್ಲಿ ಈ ಪ್ರಸಂಗ ಜರುಗಿದೆ. “ಪೊಲೀಸ್​ ಕೀ ಪಾಠಶಾಲ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪೊಲೀಸ್​ ಅಧಿಕಾರಿಯೊಬ್ಬರು ಮಾತನಾಡುವಾಗ ತಮ್ಮ ಇಲಾಖೆಯ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ. ಅಧಿಕಾರಿ ಹೇಳಿದ ಮಾತನ್ನು ಕೇಳಿ ಅಲ್ಲಿದ್ದ ಸಿಬ್ಬಂದಿ ಮತ್ತು ಶಾಲಾ ಮಕ್ಕಳು ನಗೆಗಡಲಲ್ಲಿ ತೇಲಿದರು.

    ಹಾಗಾದರೆ ಪೊಲೀಸ್​ ಅಧಿಕಾರಿ ಹೇಳಿದ್ದೇನು ಅಂತಾ ನೋಡುವುದಾದರೆ, “ಪೊಲೀಸರು ಹಣ (ಲಂಚ) ಪಡೆದುಕೊಂಡರೆ, ಆ ಕೆಲಸವನ್ನು ವಿಫಲವಾಗದಂತೆ ಪೂರ್ಣಗೊಳಿಸುತ್ತಾರೆ” ಎಂದು ವಿದ್ಯಾರ್ಥಿಗಳ ಮುಂದೆ ಹೇಳಿದ್ದಾರೆ. ಭಾರತೀಯ ಪೊಲೀಸ್​ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂಬುದಕ್ಕೆ ಈ ವಿಡಿಯೋ ಜ್ವಲಂತ ಸಾಕ್ಷಿಯಾಗಿದೆ. ಪೊಲೀಸರು ಲಂಚ ತೆಗೆದುಕೊಳ್ಳುವುದು ಸಾಮಾನ್ಯ ಎಂದು ಈ ವಿಡಿಯೋ ಸಾರಿದೆ.

    ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪ್ರಕಾರ ಪೊಲೀಸರು ಪಾಸ್​ಪಾರ್ಟ್​ ವರದಿ, ಇನ್ಶುರೆನ್ಸ್​ ಪಾವತಿ ಸೇರಿದಂತೆ ಅನೇಕ ಸಣ್ಣಪುಟ್ಟ ಕೆಲಸಗಳಿಗೂ ಲಂಚ ತೆಗೆದುಕೊಳ್ಳುತ್ತಾರಂತೆ. ಆದರೆ, ಪೊಲೀಸ್​ ಅಧಿಕಾರಿಯ ಪ್ರಕಾರ ಪೊಲೀಸ್​ ಇಲಾಖೆ ಇಂದಿಗೂ ಅತ್ಯಂತ ಪ್ರಾಮಾಣಿಕ ಇಲಾಖೆಯಂತೆ. ಸಿಬ್ಬಂದಿ ಹಣ ತೆಗೆದುಕೊಂಡರೆ, ಅದಕ್ಕೆ ಪೂರಕವಾದ ಕೆಲಸವನ್ನು ಮಾಡದೇ ಬಿಡುವುದಿಲ್ಲವಂತೆ. ಆದರೆ, ಬೇರೆ ಇಲಾಖೆಗಳಲ್ಲಿ ಹಣ ನೀಡಿದ ಬಳಿಕವೂ ನೀವು ಅಲೆದಾಡ ಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸರ್ಕಾರಿ ಇಲಾಖೆಗಳ ಕರ್ಮಕಾಂಡವನ್ನು ತಾವೇ ಬಯಲಿಗೆ ಎಳೆದುಕೊಂಡಿದ್ದಾರೆ. ಅಲ್ಲದೆ, ಶಿಕ್ಷಕರು ಕರೊನಾ ಸಾಂಕ್ರಮಿಕ ಸಮಯದಲ್ಲಿ ಮನೆಯಲ್ಲೇ ಉಳಿದಿದ್ದರು. ಆದರೆ, ನಾವು ಸಾಮಾನ್ಯ ದಿನಕ್ಕಿಂತ ಸಾಂಕ್ರಮಿಕ ಸಮಯದಲ್ಲಿ ಹೆಚ್ಚು ಕೆಲಸ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

    ಸದ್ಯ ಪೊಲೀಸ್​ ಅಧಿಕಾರಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ತೀವ್ರ ಆಕ್ರೋಶಗಳು ಕೇಳಿಬಂದಿವೆ. ಪೊಲೀಸ್​ ಇಲಾಖೆಯಲ್ಲೇ ಅತ್ಯಂತ ಭ್ರಷ್ಟಾಚಾರ ನಡೆಯುತ್ತಿರುವುದು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಇದರ ನಡುವೆ ಬಿಘಪುರ್​ ಜಿಲ್ಲಾ ಮ್ಯಾಜಿಸ್ಟ್ರೇಟ್ ಟ್ವೀಟ್​ ಮಾಡಿದ್ದು,​ ವಿಡಿಯೋ ಸಂಬಂಧ ತನಿಖೆ ನಡೆಸಿ, ವರದಿ ಸಲ್ಲಿಸಲು ಸೂಚನೆ ನೀಡಿರುವುದಾಗಿ ತಿಳಿಸಿದೆ. ಅಲ್ಲದೆ, ಸಂಬಂಧಪಟ್ಟ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಇಲಾಖೆ ಹೇಳಿದೆ. (ಏಜೆನ್ಸೀಸ್​)

    ಚಂದ್ರು-ಉಪ್ಪಿ ಕಬ್ಜದಲ್ಲಿ ಭಾರ್ಗವ್ ಬಕ್ಷಿಯಾದ ಸುದೀಪ್

    ಪ್ರೖೆಮ್​ಗೆ ದೀಪಿಕಾ ಪಡುಕೋಣೆಯ ಗೆಹ್ರಾಯಿಯಾಂ; ಯಾಂತ್ರಿಕ ಬದುಕಿನ ಸಂಬಂಧಗಳ ಆಳ..

    ಅರ್ಜುನ್ ಗೌಡ ಚಿತ್ರದಲ್ಲಿ ರಾಮುಗೆ ಶ್ರದ್ಧಾಂಜಲಿ; ಡಿ.31ಕ್ಕೆ ರಾಜ್ಯಾದ್ಯಂತ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts