More

    ಕೃಷಿ ಕಾನೂನು ರದ್ದು ನಿರ್ಧಾರ ಚುನಾವಣೆ ಗಿಮಿಕ್ ಅಲ್ಲ: ಸಿಎಂ ಬೊಮ್ಮಾಯಿ‌ ಸಮಜಾಯಿಷಿ

    ಬೆಂಗಳೂರು: ಹೋರಾಟಕ್ಕೆ ಮಣಿದಿಲ್ಲ, ಚುನಾವಣೆ ಗಿಮಿಕ್ ಅಲ್ಲ. ಸ್ಪಂದನಾಶೀಲ ಸರ್ಕಾರದ ನಿರ್ಧಾರವಿದು. ರೈತರ ಜತೆಗೆ ಮತ್ತಷ್ಟು ಚರ್ಚಿಸಿ, ಅವರಿಗೆ ಮನವರಿಕೆ ಮಾಡಿಕೊಟ್ಟು ವಿಶ್ವಾಸಗಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೃಢ ಹೆಜ್ಜೆಯಿಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಮಜಾಯಿಷಿ ನೀಡಿದರು.

    ಕೇಂದ್ರ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಲು ನಿರ್ಧರಿಸಿದ್ದರ ಬಗ್ಗೆ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಸಂಸತ್​ನ ಚಳಿಗಾಲದ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ವಾಪಸ್ ಪಡೆಯಲಾಗುವುದು ಎಂದು ಮೋದಿ ಹೇಳುವ ಜತೆಗೆ ಏತಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂಬುದನ್ನು ದೇಶದ ಜನರಿಗೆ ವಿವರಿಸಿದ್ದಾರೆ.

    ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಡಬ್ಲ್ಯೂಟಿಒ ಜತೆಗೆ ಒಪ್ಪಂದ ಮಾಡಿಕೊಂಡು ಜಾರಿಗೊಳಿಸಿದ ನೀತಿಗಳ ಅಂಗವಾಗಿ ಈ ಕಾಯ್ದೆಗಳನ್ನು ರೂಪಿಸಲಾಗಿತ್ತು. ಅದೇಕೋ ಏನೋ ಕೆಲವು ರಾಜ್ಯಗಳ ರೈತರಿಗೆ ಹಿಡಿಸಿಲ್ಲ. ತಿದ್ದುಪಡಿ ಕಾಯ್ದೆಗಳು ಯುಪಿಎ ಸರ್ಕಾರ ಜಾರಿಗೆ ತಂದ ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣ ನೀತಿಗಳ ಭಾಗವಾಗಿದ್ದವು ಎಂಬ ಬೊಮ್ಮಾಯಿ‌ ಹೇಳಿದರು.

    ಉಪ ಚುನಾವಣೆಯಲ್ಲಿ ಸೋಲಿನಿಂದ ಎಚ್ಚೆತ್ತು, ಮುಂಬರುವ ಪಂಜಾಬ್, ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆಯಲ್ಲಿ ಸೋಲಿನ ಭಯದಿಂದ ಈ ನಿರ್ಧಾರ ಕೈಗೊಂಡಿದೆ ಎಂಬುದು ಸರಿಯಲ್ಲ. ಚುನಾವಣೆಗೂ ಕಾಯ್ದೆಗಳನ್ನು ವಾಪಸ್ ಪಡೆದಿದ್ದಕ್ಕೂ ಸಂಬಂಧವಿಲ್ಲ. ಉಪ ಚುನಾವಣೆಗಳಲ್ಲಿ ಗೆಲುವನ್ನು ಪಕ್ಷ ಸಾಧಿಸಿದೆ ಎಂದರು.

    ಶೀಘ್ರ ಪರಿಹಾರ
    ಸತತ ಮಳೆಯಿಂದಾಗಿ ಬೆಳೆ ನಷ್ಟದ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಈ ವರದಿ ಕೈಸೇರಿದ ತಕ್ಷಣ ಎನ್ ಡಿಆರ್ ಎಫ್ ನಿಯಮಾವಳಿ ಪ್ರಕಾರ ಶೀಘ್ರ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ವಿತರಿಸಲಾಗುವುದು ಎಂದು ಬೊಮ್ಮಾಯಿ‌ ತಿಳಿಸಿದರು.

    ಕೇಂದ್ರ ಸರ್ಕಾರದಿಂದ ಮೂರು ಕೃಷಿ ಕಾನೂನು ವಾಪಸ್​: ಪ್ರಧಾನಿ ಮೋದಿಯಿಂದ ಮಹತ್ವದ ಘೋಷಣೆ

    ಕೃಷಿ ಕಾಯ್ದೆಗಳನ್ನು ಹಿಂಪಡೆದ ಕೇಂದ್ರದ ನಿರ್ಧಾರಕ್ಕೆ ಪಕ್ಷಾತೀತ ಮೆಚ್ಚುಗೆ: ನ. 19 ದೇಶದ ರೈತರ ಗೆಲುವೆಂದ ಕಾಂಗ್ರೆಸ್​

    ಕೃಷಿ ಮಸೂದೆ ರದ್ದಾದರೂ ಹೋರಾಟ ನಿಲ್ಲಿಸಲ್ಲ: ಪ್ರಧಾನಿ ಮನವಿಗೆ ಸದ್ಯ ಸ್ಪಂದಿಸಲ್ಲ- ರಾಕೇಶ್‌ ಟಿಯಾಕತ್‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts