More

    ದೇಶದಲ್ಲಿ 5ಜಿ ಯುಗ ಆರಂಭ: ಹೈಸ್ಟೀಡ್​ ಇಂಟರ್ನೆಟ್​ ಸೇವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

    ನವದೆಹಲಿ: ದೇಶದಲ್ಲಿ ಇಂದಿನಿಂದ 5ಜಿ ಯುಗ ಆರಂಭವಾಗಿದೆ. ಬಹುನಿರೀಕ್ಷಿತ ಹೈಸ್ಪೀಡ್​ 5ಜಿ ಇಂಟರ್ನೆಟ್​ ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಅ.1) ಚಾಲನೆ ನೀಡಿದರು. ಇದರೊಂದಿಗೆ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಶಕೆ ಶುರುವಾಗಿದೆ.

    ರಾಷ್ಟ್ರ ರಾಜಧಾನಿ ದೆಹಲಿಯ ಪ್ರಗತಿ ಮೈದಾನದಲ್ಲಿ ಅ.1 ರಿಂದ 4ರವರೆಗೆ ಆಯೋಜಿಸಲಾಗಿರುವ ಇಂಡಿಯಾ ಮೊಬೈಲ್​ ಕಾಂಗ್ರೆಸ್​ನ 6ನೇ ಆವೃತ್ತಿಯಲ್ಲಿ 5ಜಿ ಸೇವೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆ ಎಂದು ಹೇಳಿಕೊಳ್ಳುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC), ದೂರಸಂಪರ್ಕ ಇಲಾಖೆ (DoT) ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (COAI) ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

    ಸದ್ಯ ಈ 5ಜಿ ಸೇವೆಯು ದೇಶದ ಕೆಲ ಆಯ್ದ ನಗರಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸಲಿದ್ದು, ಮುಂಬರುವ ವರ್ಷಗಳಲ್ಲಿ ಇಡೀ ರಾಷ್ಟ್ರದಲ್ಲಿ ಇದರ ಸೇವೆ ವಿಸ್ತರಣೆಯಾಗಲಿದೆ. ಇದು 4ಜಿಗಿಂತ 10 ಪಟ್ಟು ವೇಗ ಇರಲಿದೆ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಹೊಂದಿರುವ ಇಂಟರ್ನೆಟ್​ ಸೇವೆ ಇದಾಗಿದೆ. ಈಗಾಗಲೇ 72 ದೇಶಗಳಲ್ಲಿ 5ಜಿ ಸೇವೆಯ ಸೌಲಭ್ಯವಿದೆ. ಸದ್ಯ ಭಾರತದಲ್ಲಿ 13 ನಗರಗಳಲ್ಲಿ ಮೊದಲ ಹಂತದಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ.

    ಅಲ್ಟ್ರಾ ಲೋ ಲೇಟೆನ್ಸಿ ಸಂಪರ್ಕಗಳನ್ನು ಪವರ್ ಮಾಡುವುದರ ಜೊತೆಗೆ, ಉತ್ತಮ ಮತ್ತು ಗುಣಮಟ್ಟದ ವಿಡಿಯೋ ಅಥವಾ ಚಲನಚಿತ್ರವನ್ನು ಮೊಬೈಲ್ ಸಾಧನದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು (ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಸಹ) ಅನುಮತಿಸುತ್ತದೆ. ಇ-ಆರೋಗ್ಯ, ಸಂಪರ್ಕಿತ ವಾಹನಗಳು, ಮೆಟಾವರ್ಸ್ ಅನುಭವಗಳು, ಜೀವ ಉಳಿಸುವ ಬಳಕೆಯ ಸಾಧನಗಳು ಮತ್ತು ಸುಧಾರಿತ ಮೊಬೈಲ್ ಕ್ಲೌಡ್ ಗೇಮಿಂಗ್ ಸೇರಿದಂತೆ ಇತರೆ ಸಾಧನಗಳಲ್ಲಿ 5ಜಿ ಸೇವೆಯು ಪರಿಹಾರಗಳನ್ನು ಸಕ್ರಿಯಗೊಳಿಸುತ್ತದೆ.

    ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ಖರ್ಗೆ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ!

    ‘ಹರ್ ಘರ್ ಭಗವಾ’ದಲ್ಲಿ ಭಾಗವಹಿಸಿ; ‘ಹಿಂದೂ ರಾಷ್ಟ್ರ ವೀರ’ ಪ್ರಮಾಣಪತ್ರ ಪಡೆಯಿರಿ… ಇಲ್ಲಿದೆ ವಿವರ

    2 ವಾರಗಳ ಹಿಂದಷ್ಟೇ ಬಿಡುಗಡೆಯಾದ ಸಿನಿಮಾದಲ್ಲಿ ನಟಿಸಿದ್ದ ಯುವ ನಟಿಯ ಶವ ಹೋಟೆಲ್ ರೂಮ್​ನಲ್ಲಿ ಪತ್ತೆ!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts