More

    VIDEO| ಗಾಂಧಿ ಮತ್ತು ಲಾಲ್​ ಬಹದೂರ್​ ಶಾಸ್ತ್ರಿ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

    ನವದೆಹಲಿ: ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್​ ಬಹಾದೂರ್​ ಶಾಸ್ತ್ರಿ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್​ ಮೂಲಕ ಗೌರವ ಸಲ್ಲಿಸಿದ್ದಾರೆ. ಅಲ್ಲದೆ, ರಾಜ್​ಘಾಟ್​ನಲ್ಲಿರುವ ಗಾಂಧಿ ಸ್ಮಾರಕ ಬಳಿ ತೆರಳಿ ಪುಷ್ಪ ನಮನ ಅರ್ಪಿಸಿದರು.

    ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಗಾಂಧಿ ಜಯಂತಿಯಂದು ಮಹಾತ್ಮ ಗಾಂಧಿಯವರಿಗೆ ನನ್ನ ನಮನ. ಈ ಗಾಂಧಿ ಜಯಂತಿ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಿದೆ. ನಾವು ಬಾಪು ಅವರ ಆದರ್ಶಗಳನ್ನು ಸದಾ ಪಾಲಿಸುತ್ತಿರಬೇಕು. ಗಾಂಧಿಯವರಿಗೆ ಗೌರವ ಸೂಚಕವಾಗಿ ಖಾದಿ ಮತ್ತು ಕರಕುಶಲ ಉತ್ಪನ್ನಗಳನ್ನು ಖರೀದಿಸುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ ಎಂದಿದ್ದಾರೆ.

    https://twitter.com/narendramodi/status/1576387584003280896?s=20&t=5H8Z7-R6Z7wAQyjK5Kxuog

    ಹಾಗೇ ಲಾಲ್ ಬಹಾದೂರ್​ ಶಾಸ್ತ್ರಿ ಅವರು ತಮ್ಮ ಸರಳತೆ ಮತ್ತು ನಿರ್ಣಾಯಕತೆಗಾಗಿ ಭಾರತದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ. ನಮ್ಮ ಇತಿಹಾಸದ ಅತ್ಯಂತ ನಿರ್ಣಾಯಕ ಸಮಯದಲ್ಲಿ ಅವರ ಕಠಿಣ ನಾಯಕತ್ವ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಅವರ ಜಯಂತಿಯಂದು ಅವರಿಗೆ ನಮನಗಳು ಎಂದು ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

    ಇದೇ ಸಂದರ್ಭದಲ್ಲಿ ದೆಹಲಿಯ ಪ್ರಧಾನಮಂತ್ರಿ ಸಂಗ್ರಹಾಲಯದಲ್ಲಿರುವ ಲಾಲ್ ಬಹಾದೂರ್​ ಶಾಸ್ತ್ರಿ ಅವರ ಗ್ಯಾಲರಿಯಲ್ಲಿನ ಕೆಲವು ಫೋಟೋಗಳನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, ಇದು ಪ್ರಧಾನಿಯಾಗಿದ್ದ ಶಾಸ್ತ್ರಿ ಅವರ ಜೀವನ ಪಯಣ ಮತ್ತು ಸಾಧನೆಗಳನ್ನು ತೋರಿಸುತ್ತದೆ. ನೀವು ಒಮ್ಮೆ ಮ್ಯೂಸಿಯಂಗೆ ಭೇಟಿ ನೀಡಿ ಎಂದು ಕರೆ ನೀಡಿದ್ದಾರೆ.

    ದೆಹಲಿಯ ರಾಜ್​ಘಾಟ್​ನಲ್ಲಿರುವ ಗಾಂಧಿ ಸ್ಮಾರಕ ಮತ್ತು ವಿಜಯ್​ ಘಾಟ್​ನಲ್ಲಿರುವ ಲಾಲ್​ ಬಹಾದೂರ್​​ ಶಾಸ್ತ್ರಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಅವರು ಗೌರವ ಸಲ್ಲಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್​ ಧನಕರ್​, ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಅನೇಕ ನಾಯಕರು ಸಹ ಸಹ ಭಾರತ ಕಂಡ ಶ್ರೇಷ್ಠ ವ್ಯಕ್ತಿಗಳಿಗೆ ತಮ್ಮ ಗೌರವ ಸಮರ್ಪಿಸಿದರು. (ಏಜೆನ್ಸೀಸ್​)

    ಗಾಂಧಿ ಜಯಂತಿ‌ ಹಿನ್ನಲೆ ಇಂದಿನ ಜೋಡೋ ಯಾತ್ರೆಯ ಬೆಳಗಿನ ಪಾದಯಾತ್ರೆಗೆ ರಾಹುಲ್​ ಗಾಂಧಿ ಬ್ರೇಕ್​

    ಪಂದ್ಯ ಸೋತಿದ್ದಕ್ಕೆ ಹತಾಶೆಯಿಂದ ಮೈದಾನಕ್ಕೆ ನುಗ್ಗಿದ ಫ್ಯಾನ್ಸ್​: ಕಾಲ್ತುಳಿತದಿಂದ 127 ಮಂದಿ ದುರ್ಮರಣ

    ದೇವಸ್ಥಾನದಿಂದ ಹಿಂದಿರುಗುವಾಗ ಕೆರೆಗೆ ಉರುಳಿದ ಟ್ರ್ಯಾಕ್ಟರ್​: 26 ಯಾತ್ರಿಕರ ದುರ್ಮರಣ, ಪ್ರಧಾನಿ ಮೋದಿ ಸಂತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts