More

    ಪಂದ್ಯ ಸೋತಿದ್ದಕ್ಕೆ ಹತಾಶೆಯಿಂದ ಮೈದಾನಕ್ಕೆ ನುಗ್ಗಿದ ಫ್ಯಾನ್ಸ್​: ಕಾಲ್ತುಳಿತದಿಂದ 127 ಮಂದಿ ದುರ್ಮರಣ

    ಜಕಾರ್ತ: ಫುಟ್​ಬಾಲ್​ ಪಂದ್ಯದ ಸೋಲಿನ ಹತಾಶೆಯಲ್ಲಿ ಅಭಿಮಾನಿಗಳು ಉಂಟು ಮಾಡಿದ ಗುಂಪು ಘರ್ಷಣೆಯಲ್ಲಿ ಸುಮಾರು 127 ಮಂದಿ ಮೃತಪಟ್ಟಿದ್ದು, 180ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ಪೂರ್ವ ಜಾವಾ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಇಂಡೋನೇಷ್ಯಾ ಪೊಲೀಸರು ತಿಳಿಸಿದ್ದಾರೆ.

    ಅರೆಮಾ ಫುಟ್​ಬಾಲ್​ ಕ್ಲಬ್​ ಮತ್ತು ಪರ್ಸೆಬಯಾ ಸುರಬಯಾ ತಂಡಗಳ ನಡುವೆ ಫುಟ್​ಬಾಲ್​ ಪಂದ್ಯ ನಡೆಯುತ್ತಿತ್ತು. ಈ ವೇಳೆ ತಂಡವೊಂದು ಪಂದ್ಯ ಸೋತಿದ್ದಕ್ಕೆ ಆ ತಂಡದ ಅಭಿಮಾನಿಗಳು ಹತಾಶೆಯಿಂದ ಮೈದಾನಕ್ಕೆ ನುಗ್ಗಿದರು. ಈ ವೇಳೆ ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಇದರಿಂದ ಉಂಟಾದ ಕಾಲ್ತುಳಿತದಲ್ಲಿ ಉಸಿರುಗಟ್ಟಿ 127 ಮಂದಿ ಮೃತಪಟ್ಟಿದ್ದಾರೆಂದು ಪೂರ್ವ ಜಾವಾ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂತಾ ಸುದ್ದಿಗಾರರಿಗೆ ತಿಳಿಸಿದರು.

    ಸ್ಥಳೀಯ ಸುದ್ದಿ ವಾಹಿನಿಗಳು ಪ್ರಕಟಿಸಿರುವ ವಿಡಿಯೋ ತುಣುಕಿನಲ್ಲಿ ಜನರು ಮಲಾಂಗ್‌ನಲ್ಲಿರುವ ಕ್ರೀಡಾಂಗಣದಲ್ಲಿನ ಪಿಚ್​ ಒಳಗೆ ನುಗ್ಗುತ್ತಿರುವುದನ್ನು ಕಾಣಬಹುದಾಗಿದೆ.

    ಅಂದಹಾಗೆ ಫುಟ್​ಬಾಲ್​ ಪಂದ್ಯದಲ್ಲಿ ಪರ್ಸೆಬಯಾ ಸುರಬಯಾ ತಂಡವು 3-2 ಅಂತರದಲ್ಲಿ ಗೆಲುವು ದಾಖಲಿಸಿತು. ಇದಾದ ಬಳಿಕ ದುರ್ಘಟನೆ ಸಂಭವಿಸಿದ್ದು, ಘಟನೆಯ ಬೆನ್ನಲ್ಲೇ ಇಂಡೋನೇಷ್ಯಾದ ಟಾಪ್ ಲೀಗ್​ ಆಗಿರುವ ಬಿಆರ್​ಐ ಲಿಗಾ-1 ಅನ್ನು ಒಂದು ವಾರಗಳ ಕಾಲ ನಿಷೇಧಿಸಿದ್ದು, ತನಿಖೆಯನ್ನು ಪ್ರಾರಂಭಿಸಿರುವುದಾಗಿ ಇಂಡೋನೇಷ್ಯಾದ ಫುಟ್ಬಾಲ್ ಅಸೋಸಿಯೇಷನ್ (PSSI) ತಿಳಿಸಿದೆ.

    ಇಂಡೋನೇಷ್ಯಾದಲ್ಲಿ ಈ ರೀತಿಯ ಘಟನೆಗಳು ಇದೇ ಮೊದಲೇನಲ್ಲ. ಈ ಹಿಂದೆಯು ಪಂದ್ಯಗಳ ನಡುವೆ ತೊಂದರೆಗಳು ಸಂಭವಿಸಿವೆ. ಫುಟ್​ಬಾಲ್​ ಕ್ಲಬ್‌ಗಳ ನಡುವಿನ ಪ್ರಬಲ ಪೈಪೋಟಿ ಕೆಲವೊಮ್ಮೆ ಬೆಂಬಲಿಗರ ನಡುವೆ ಹಿಂಸಾಚಾರಕ್ಕೆ ಕಾರಣವಾಗುತ್ತದೆ. (ಏಜೆನ್ಸೀಸ್​)

    ಮೇಲ್ಮನೆ ಕೈ ನಾಯಕತ್ವ ತ್ಯಾಗ; ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬದ್ಧ

    ಮಾನವೀಯತೆಯ ಸಂದೇಶಕ್ಕೆ ದ್ವಂದ್ವಾರ್ಥದ ಬೇಲಿ: ವಿಜಯವಾಣಿ ಸಿನಿಮಾ ವಿಮರ್ಶೆ

    ಸರಳತೆ, ಪ್ರಾಮಾಣಿಕತೆಯ ಪ್ರತಿರೂಪ ಲಾಲ್ ಬಹಾದೂರ್ ಶಾಸ್ತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts