More

    ಗಾಂಧಿ ಜಯಂತಿ‌ ಹಿನ್ನಲೆ ಇಂದಿನ ಜೋಡೋ ಯಾತ್ರೆಯ ಬೆಳಗಿನ ಪಾದಯಾತ್ರೆಗೆ ರಾಹುಲ್​ ಗಾಂಧಿ ಬ್ರೇಕ್​

    ಮೈಸೂರು: ಇಂದು ಗಾಂಧಿ‌ ಜಯಂತಿ‌ ಹಿನ್ನಲೆಯಲ್ಲಿ ಭಾರತ್​ ಜೋಡೋ ಯಾತ್ರೆಯ ಬೆಳಗಿನ ಪಾದಯಾತ್ರೆಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬ್ರೇಕ್​ ಹಾಕಿದ್ದಾರೆ.

    ಇಂದು ಬೆಳಗ್ಗೆ 7.30ಕ್ಕೆ ಗಾಂಧಿ ಭೇಟಿ ನೀಡಿದ್ದ ಗ್ರಾಮ ಬದನವಾಳುವಿಗೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದ ಆವರಣದಲ್ಲಿ ಗಾಂಧಿ ಜಯಂತಿ‌ ಆಚರಣೆ ಮಾಡಲಿದ್ದಾರೆ. ಅದಕ್ಕಾಗಿ ಸಕಲ‌ ಸಿದ್ದತೆಯು ನಡೆದಿದೆ. ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ ಭಜನೆ ಕಾರ್ಯಕ್ರಮದಲ್ಲಿ ರಾಹುಲ್​ ಪಾಲ್ಗೊಳ್ಳಲಿದ್ದಾರೆ. ಇದಾದ ನಂತರ 200 ಗಿಡಗಳನ್ನು ನಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡುವ ರಾಹುಲ್, ಅಲ್ಲಿ ಕೆಲಸ ಮಾಡುವ ಮಹಿಳೆಯರ ಜೊತೆ ಸಂವಾದ ನಡೆಸಲಿದ್ದಾರೆ. ನಂತರ‌ ಬದನವಾಳು ಗ್ರಾಮಕ್ಕೆ ಭೇಟಿ ನೀಡಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಗ್ರಾಮದ ಒಂದು ರಸ್ತೆಯನ್ನು ರಾಹುಲ್ ಮತ್ತು ತಂಡ ಶುಚಿಗೊಳಿಸಲಿದೆ. ಮಧ್ಯಾಹ್ನ‌ 3ರವರೆಗೂ ಬದನವಾಳು ಗ್ರಾಮದಲ್ಲಿ ರಾಹುಲ್ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ಮ 3.30ಕ್ಕೆ ಇತಿಹಾಸ ಪ್ರಸಿದ್ಧ ನಂಜನಗೂಡಿನ‌ ನಂಜುಡೇಶ್ವರ ಸನ್ನಧಿಗೆ ರಾಹುಲ್ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಎಂದಿನಂತೆ ತಾಂಡವಪುರದಿಂದ ಪಾದಯಾತ್ರೆ ಆರಂಭ ಮಾಡಲಿದ್ದಾರೆ.

    1927ರಲ್ಲಿ ಗಾಂಧೀಜಿ ಬದನವಾಳು ಗ್ರಾಮಕ್ಕೆ ಭೇಟಿ‌ ನೀಡಿದ್ದರು. ಖಾದಿ ಉತ್ಪನ್ನಗಳಿಗೆ ಉತ್ತೇಜನೆ ಕೊಡುವ ದೃಷ್ಟಿಯಿಂದ ಮಹತ್ಮಾ‌ ಗಾಂಧೀಜಿ ಭೇಟಿ ನೀಡಿದ್ದರು. ಸದ್ಯ ರಾಹುಲ್ ಗಾಂಧಿ ಅದೇ ಗ್ರಾಮಕ್ಕೆ ಭೇಟಿ ನೀಡಿ ಗಾಂಧಿ ಜಯಂತಿ ಆಚರಣೆ ಮಾಡಲಿದ್ದಾರೆ.

    ರಾಜ್ಯದಲ್ಲಿ ಮೂರನೇ ದಿನದ ಪಾದಯಾತ್ರೆ ಮಧ್ಯಾಹ್ನ 4 ಗಂಟೆಗೆ ಆರಂಭವಾಗಲಿದೆ. ಕಡಕೊಳ ಕೈಗಾರಿಕಾ ಜಂಕ್ಷನ್‌ ಬಳಿಯಿಂದ ರಾಹುಲ್ ನಡಿಗೆ ಆರಂಭವಾಗಲಿದೆ. ಕಡಕೊಳ ಜಂಕ್ಷನ್‌ನಿಂದ ಮೈಸೂರಿನ ಎಕ್ಸಿಬಿಷನ್‌ ಗ್ರೌಂಡ್‌ವರೆಗೆ ಪಾದಯಾತ್ರೆ ನಡೆಯಲಿದೆ. ರಾತ್ರಿ ಎಕ್ಸಿಬಿಷನ್‌ ಗ್ರೌಂಡ್ ಪಕ್ಕದ ಮೈದಾನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇಂದು ಸಂಜೆ ಸುಮಾರು 13 ಕಿಲೋಮೀಟರ್ ಪಾದಯಾತ್ರೆ ನಡೆಸಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪಂದ್ಯ ಸೋತಿದ್ದಕ್ಕೆ ಹತಾಶೆಯಿಂದ ಮೈದಾನಕ್ಕೆ ನುಗ್ಗಿದ ಫ್ಯಾನ್ಸ್​: ಕಾಲ್ತುಳಿತದಿಂದ 127 ಮಂದಿ ದುರ್ಮರಣ

    ಮೇಲ್ಮನೆ ಕೈ ನಾಯಕತ್ವ ತ್ಯಾಗ; ಒಬ್ಬ ವ್ಯಕ್ತಿ ಒಂದು ಹುದ್ದೆ ನಿಯಮಕ್ಕೆ ಮಲ್ಲಿಕಾರ್ಜುನ ಖರ್ಗೆ ಬದ್ಧ

    ಸೆಪ್ಟೆಂಬರ್​ನಲ್ಲಿ 1.47 ಲಕ್ಷ ಕೋಟಿ ರೂ. ಜಿಎಸ್​ಟಿ; ಕಳೆದ ವರ್ಷಕ್ಕಿಂತ ಶೇ. 26 ಜಿಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts