More

    ಯೂಕ್ರೇನ್​-ರಷ್ಯಾ ಯುದ್ಧ: ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿ ಪ್ರಧಾನಿ ಮೋದಿ ಹೇಳಿದ್ದಿಷ್ಟು…

    ನವದೆಹಲಿ: ರಷ್ಯಾ ಅಧ್ಯಕ್ಷರ ಜತೆ ಮಾತನಾಡಿ ಯುದ್ಧ ನಿಲ್ಲಿಸಿ, ಇದು ನಿಮ್ಮಿಂದ ಮಾತ್ರ ಸಾಧ್ಯ ಎಂದು ಭಾರತದಲ್ಲಿರುವ ಯೂಕ್ರೇನ್​ ರಾಯಭಾರಿ ಇಗೋರ್​ ಪೊಲಿಕಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡ ಬೆನ್ನಲ್ಲೇ ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿದ ಪ್ರಧಾನಿ ಮೋದಿ ಹಿಂಸೆಯನ್ನು ಬಿಟ್ಟು ಶಾಂತಿ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ.

    ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಅವರೊಂದಿಗೆ ಗುರುವಾರ ರಾತ್ರಿ ಕರೆ ಮಾಡಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಹಿಂಸೆಯನ್ನು ಕೈಬಿಟ್ಟು ರಾಜತಾಂತ್ರಿಕ ಮಾತುಕತೆ ಮತ್ತು ಸಂಧಾನದ ಮೂಲದ ಶಾಂತಿಯನ್ನು ಸ್ಥಾಪಿಸುವಂತೆ ಸಲಹೆ ನೀಡಿದರು.

    ಯೂಕ್ರೇನ್​ ಮೇಲೆ ಸಂಪೂರ್ಣ ಆಕ್ರಮಣಕ್ಕೆ ಪುತಿನ್​ ಆದೇಶ ನೀಡಿದ ಬೆನ್ನಲ್ಲೇ ಪ್ರಧಾನಿ ಮೋದಿ ಕರೆ ಮಾಡಿ ಮಾತನಾಡಿದರು. ಯೂಕ್ರೇನ್​ ಮೇಲೆ ರಷ್ಯಾ ತೀವ್ರ ದಾಳಿ ನಡೆಸಿದ್ದು, 2ನೇ ವಿಶ್ವಯುದ್ಧದ ನಂತರ ಒಂದು ದೇಶ ಇನ್ನೊಂದು ದೇಶದ ಮೇಲೆ ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ.

    ಫೋನ್​ ಸಂಭಾಷಣೆಯ ವೇಳೆ ಪುತಿನ್​ ಅವರು ಯೂಕ್ರೇನ್​ಗೆ ಸಂಬಂಧಿಸಿದ ಇತ್ತೀಚೆಗೆ ನಡೆದ ಬೆಳವಣಿಗೆಗಳನ್ನು ಪ್ರಧಾನಿ ಮೋದಿಗೆ ವಿವರಿಸಿ, ಯುದ್ಧದ ಅನಿವಾರ್ಯತೆಯನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ರಷ್ಯಾ ಮತ್ತು ನ್ಯಾಟೋ ಪಡೆಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಮತ್ತು ವಿಶ್ವಾಸದ ಮಾತುಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂಬ ತಮ್ಮ ದೀರ್ಘಕಾಲದ ನಂಬಿಕೆಯನ್ನು ಪ್ರಧಾನಿ ಮೋದಿ ಈ ವೇಳೆ ಪುನರುಚ್ಚರಿಸಿದ್ದಾರೆ.

    ಯೂಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಬಗ್ಗೆ ಅದರಲ್ಲೂ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದು, ರಷ್ಯಾ ಅಧ್ಯಕ್ಷರ ಜತೆ ಚರ್ಚಿಸಿದ್ದಾರೆ. ಅವರ ರಕ್ಷಣೆಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ಅದಕ್ಕೆ ರಷ್ಯಾ ಅಧ್ಯಕ್ಷರು ಕೂಡ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ತಂತಮ್ಮ ಅಧಿಕಾರಿಗಳು ಮತ್ತು ರಾಜತಾಂತ್ರಿಕ ತಂಡಗಳ ಜತೆ ಸಂಪರ್ಕವನ್ನು ಮುಂದುವರಿಸುವುದನ್ನು ಮೋದಿ ಮತ್ತು ಪುತಿನ್ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಪಿಎಂಒ ಹೇಳಿದೆ. (ಏಜೆನ್ಸೀಸ್​)

    ಪ್ಲೀಸ್​ ಯುದ್ಧ ನಿಲ್ಲಿಸಿ, ಇದು ನಿಮ್ಮಿಂದ ಸಾಧ್ಯ: ಮಹಾಭಾರತ ಉಲ್ಲೇಖಿಸಿ ಪ್ರಧಾನಿ ಮೋದಿಗೆ ಯೂಕ್ರೇನ್​ ಮನವಿ

    ಆರ್ಥಿಕತೆ ಮಹಾ ಕಂಪನ; ಜಗತ್ತಿನ ಮಾರುಕಟ್ಟೆ ಪತನ

    ಯೂಕ್ರೇನ್‌-ರಷ್ಯಾ ಯುದ್ಧ: ನಾನು ಸುರಕ್ಷಿತವಾಗಿದ್ದೇನೆ ಎಂದು ತಂದೆಗೆ ಕರೆ ಮಾಡಿ ಧೈರ್ಯ ಹೇಳಿದ ನವ್ಯಶ್ರೀ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts