More

    ಈ ಊರಲ್ಲಿ ರಾತ್ರಿ 7 ರಿಂದ 8.30ರವರೆಗೆ ಮೊಬೈಲ್​, ಟಿವಿ ಬ್ಯಾನ್​! ಗ್ರಾಮಸ್ಥರ ಈ ನಿರ್ಧಾರಕ್ಕೆ ಎಲ್ಲಡೆ ಮೆಚ್ಚುಗೆ

    ಮುಂಬೈ​: ಇಂದಿನ ಆಧುನಿಕ ಯುಗದಲ್ಲಿ ಬಹುತೇಕರ ದಿನ ಆರಂಭವಾಗೋದೇ ಮೊಬೈಲ್​ ಮತ್ತು ಟಿವಿಯಿಂದ. ಅದರಲ್ಲೂ ಮೊಬೈಲ್​ ಇಲ್ಲದೇ ಹೋದರೆ, ಬಹುತೇಕರ ಜೀವನ ನಡೆಯೋದೇ ಇಲ್ಲ. ಅಷ್ಟರ ಮಟ್ಟಿಗೆ ಮೊಬೈಲ್​ ಆವರಿಸಿದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಅಜ್ಜ-ಅಜ್ಜಿಯವರೆಗೂ ಮೊಬೈಲ್​ ಎಂಬ ಸಾಧನ ಪಕ್ಕದಲ್ಲಿ ಇರಲೇಬೇಕು. ಆದರೆ, ಅದೇ ಮೊಬೈಲ್​ ಮತ್ತು ಟಿವಿ ಸಂಬಂಧಗಳ ನಡುವೆ ಅಂತರ ಸೃಷ್ಟಿ ಮಾಡಿರುವುದು ಕೂಡ ಅಷ್ಟೇ ಸತ್ಯ. ಆರೋಗ್ಯಕ್ಕೂ ಕೂಡ ಇವು ತೊಡಕಾಗಿವೆ. ಇದೀಗ ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರದ ಗ್ರಾಮವೊಂದು ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ.

    ಪ್ರತಿದಿನ ರಾತ್ರಿ 7 ಗಂಟೆಯಿಂದ 8.30ರವರೆಗೆ ಮೊಬೈಲ್​ ಫೋನ್​ ಹಾಗೂ ಟಿವಿ ಬಳಕೆ ಮಾಡದಂತೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಡೆಗಾಂವ್​ ಮಂಡಲದ ಮೊಹಿತ್ಯಾಂಚೆಯ ವಾಡಗಾಂವ್​ ಗ್ರಾಮವು ಆದೇಶ ಹೊರಡಿಸಿದೆ. ಗ್ರಾಮದ ಹಿರಿಯ ಕುಳಿತು, ಚರ್ಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಗ್ರಾಮದ ನಿರ್ಧಾರಕ್ಕೆ ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.

    ಈ ಗ್ರಾಮದಲ್ಲಿ 3105 ಮಂದಿ ವಾಸಿಸುತ್ತಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಮಕ್ಕಳ ಆನ್​ಲೈನ್​ ಕ್ಲಾಸ್​ಗೆ ಅನುಕೂಲ ಆಗಲೆಂದು ಪಾಲಕರು ಸ್ಮಾರ್ಟ್​ಫೋನ್​ ಖರೀದಿಸಿದ್ದರು. ಅಂದಿನಿಂದ ಮಕ್ಕಳು ಮೊಬೈಲ್​​ಗೆ ದಾಸರಾಗಿದ್ದಾರೆ. ಗಂಟೆಗಟ್ಟಲೇ ಮೊಬೈಲ್​ನಲ್ಲೇ ಮುಳುಗಿರುತ್ತಾರೆ. ಶಾಲೆಯಿಂದ ಬರುವ ಮಕ್ಕಳು ರಾತ್ರಿ ಸಮಯದಲ್ಲಿ ಪುಸ್ತಕ ತೆಗೆದುಕೊಂಡು ಓದುವ ಬದಲು ಮೊಬೈಲ್​ ಹಿಡಿದು ಸಮಯ ವ್ಯರ್ಥ ಮಾಡುತ್ತಿದ್ದಾರೆ. ​

    ಇನ್ನೊಂದೆಡೆ ಗ್ರಾಮದ ಹೆಂಗಸರು ಟಿವಿ ಧಾರಾವಾಹಿಗಳನ್ನು ನೋಡುತ್ತಾ ಕುಳಿತುಕೊಳ್ಳುತ್ತಾರೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವುದಲ್ಲದೆ, ಮಕ್ಕಳ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯಸ್ಥ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಗ್ರಾಮದಲ್ಲಿ ಸಂಜೆ 7ರಿಂದ 8.30ರವರೆಗೆ ಯಾರೂ ಟಿವಿ ನೋಡಬಾರದು, ಫೋನ್ ಬಳಸಬಾರದು ಎಂದು ಆದೇಶ ಹೊರಡಿಸಿದ್ದಾರೆ. ಗ್ರಾಮದಲ್ಲಿ ರಾತ್ರಿ ಸೈರನ್ ಮೊಳಗಿದಾಗ ಒಂದೂವರೆ ಗಂಟೆ ಕಾಲ ಟಿವಿ, ಸೆಲ್ ಫೋನ್ ಮ್ಯೂಟ್ ಆಗಲಿವೆ. ಆ ಸಮಯದಲ್ಲಿ ಮಕ್ಕಳು ಪುಸ್ತಕ ಓದುತ್ತಿದ್ದರೆ, ಮಹಿಳೆಯರು ಅಡುಗೆಯತ್ತ ಗಮನ ಹರಿಸಬೇಕು. ಈ ನಿಯಮದ ಮೇಲೆ ಪಂಚಾಯಿತಿ ಸದಸ್ಯರು, ಸರಕಾರಿ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ನಿಗಾ ವಹಿಸಿದ್ದಾರೆ. (ಏಜೆನ್ಸೀಸ್​)

    ರೈಲು ಡಿಕ್ಕಿಯಾಗಿ 335 ಕುರಿಗಳ ಮಾರಣ ಹೋಮ: 34 ಲಕ್ಷ ರೂ. ನಷ್ಟ, ಬದುಕಿನ ಆಧಾರವನ್ನೇ ಕಳೆದುಕೊಂಡ ರೈತರು

    ರಾಜ್ಯ ಸರ್ಕಾರ ಮತ್ತು ಬಿಜೆಪಿಗೆ ಧನ್ಯವಾದ ಸಲ್ಲಿಸಿದ ಪ್ರವೀಣ್​ ನೆಟ್ಟಾರು ಪತ್ನಿ

    ದಿವ್ಯಾ ಶ್ರೀಧರ್ ಮೇಲೆ ಗಂಡನಿಂದ ಹಲ್ಲೆ ಪ್ರಕರಣ: ನಟಿಯ ಬೆನ್ನಿಗೆ ನಿಂತ ಕರ್ನಾಟಕ ಮಹಿಳಾ ಆಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts