More

    ರೈಲು ಡಿಕ್ಕಿಯಾಗಿ 335 ಕುರಿಗಳ ಮಾರಣ ಹೋಮ: 34 ಲಕ್ಷ ರೂ. ನಷ್ಟ, ಬದುಕಿನ ಆಧಾರವನ್ನೇ ಕಳೆದುಕೊಂಡ ರೈತರು

    ಮೆಹಬೂಬನಗರ: ತೆಲಂಗಾಣದ ಮೆಹಬೂಬನಗರ ಜಿಲ್ಲೆಯಲ್ಲಿ ಭಯಾನಕ ರೈಲು ಅಪಘಾತವೊಂದು ಸಂಭವಿಸಿದೆ. ರೈಲು ಡಿಕ್ಕಿಯಾಗಿ 335 ಕುರಿಗಳು ದುರಂತ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಕೌಕುಂಟ ಗ್ರಾಮದಲ್ಲಿ ನಡೆದಿದೆ.

    ನಾಯಿಗಳು ಅಟ್ಟಿಸಿಕೊಂಡು ಬಂದಿದ್ದನ್ನು ನೋಡಿ ಹೆದರಿದ ಕುರಿಗಳು ಭಯದಿಂದಲೇ ಓಡುತ್ತಾ ಕೌಕುಂಟ ಗ್ರಾಮದ ಹೊರ ವಲಯದಲ್ಲಿರುವ ರೈಲು ಹಳಿಯತ್ತ ನುಗ್ಗಿವೆ. ಇದೇ ಸಂದರ್ಭದಲ್ಲಿ ಅತಿ ವೇಗದಲ್ಲಿ ಬಂದು ರೈಲು ಕುರಿಗಳಿಗೆ ಡಿಕ್ಕಿ ಹೊದೆದಿದ್ದು, 335 ಕುರಿಗಳು ಸ್ಥಳದಲ್ಲೆ ಮೃತಪಟ್ಟಿವೆ.

    ಕುರಿಗಳನ್ನು ಕಳೆದುಕೊಂಡ ಸಂತ್ರಸ್ತ ಮಾಲೀಕರು ನಷ್ಟದ ಬಗ್ಗೆ ಮಾತನಾಡಿದ್ದು, 335 ಕುರಿಗಳ ಸಾವಿನಿಂದ ಒಟ್ಟು 33.5 ಲಕ್ಷ ರೂಪಾಯಿ ನಷ್ಟವಾಗಿರುವುದಾಗಿ ತಿಳಿಸಿದ್ದಾರೆ. ಕುರಿಗಳ ಮೇಲೆ ತಮ್ಮ ಅವಲಂಬಿತವಾಗಿದ್ದ ಮಾಲೀಕರು ಇದೀಗ ಜೀವನದ ಆಧಾರ ಕಳೆದುಕೊಂಡು ಭಾರಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸರ್ಕಾರವೇ ಏನಾದರೂ ಸಹಾಯ ಮಾಡಬೇಕೆಂದು ಕಣ್ಣೀರಾಕುತ್ತಾ ಮನವಿ ಮಾಡಿಕೊಂಡಿದ್ದಾರೆ.

    ಇದೇ ರೀತಿಯ ಘಟನೆ 2017ರ ಅಕ್ಟೋಬರ್ 24ರಂದು ತೆಲಂಗಾಣದಲ್ಲೇ ನಡೆದಿತ್ತು. ಸಿಕಂದರಾಬಾದ್​ನಿಂದ ಕೊಲ್ಕತಾ ಹೋಗುತ್ತಿದ್ದ ಫಲಕ್ನುಮಾ ಎಕ್ಸ್​ಪ್ರೆಸ್​ ರೈಲಿನ ಅಡಿಗೆ ಸಿಲುಕಿ 400 ಕುರಿಗಳು ಮೃತಪಟ್ಟಿದ್ದವು. ಈ ಘಟನೆ ಯಾದಾದ್ರಿ ಭುವನಗಿರಿ ಜಿಲ್ಲೆಯ ರಾಮಣ್ಣಪೇಟೆ ಗ್ರಾಮದಲ್ಲಿ ನಡೆದಿತ್ತು. (ಏಜೆನ್ಸೀಸ್​)

    ದಿವ್ಯಾ ಶ್ರೀಧರ್ ಮೇಲೆ ಗಂಡನಿಂದ ಹಲ್ಲೆ ಪ್ರಕರಣ: ನಟಿಯ ಬೆನ್ನಿಗೆ ನಿಂತ ಕರ್ನಾಟಕ ಮಹಿಳಾ ಆಯೋಗ

    ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಬಗ್ಗೆ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ ಹೊಸ ವದಂತಿ! ​

    ಪಾಕ್​ ಮಾರ್ಗವಾಗಿ ಭಾರತಕ್ಕೆ ಬರ್ತಿದ್ದ 1200 ಕೋಟಿ ರೂ. ಮೌಲ್ಯದ ಹೆರಾಯಿನ್​ ಸೀಜ್! 6 ಇರಾನ್​​ ಪ್ರಜೆಗಳ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts