More

    ಇಂದಲ್ಲ ನಾಳೆ ಇಂಧನ ದರ ಇಳಿಯಲಿದೆ ಎಂಬ ಜನರ ಆಸೆಗೆ ತಣ್ಣೀರೆರಚಿದ ಪೆಟ್ರೋಲಿಯಂ ಸಚಿವರ ಹೇಳಿಕೆ

    ಕೋಲ್ಕತ: ಇಂದಲ್ಲ ನಾಳೆ ಇಂಧನ ದರ ಇಳಿಯಲಿದೆ ಎಂದು ಆಸೆಗಣ್ಣಿನಿಂದ ಕಾಯುತ್ತಿರುವ ದೇಶದ ಜನತೆಗೆ ಕೇಂದ್ರದ ಪೆಟ್ರೋಲಿಯಂ ಸಚಿವ ಹರ್ದೀಪ್​ ಸಿಂಗ್​ ಪುರಿ ಅವರು ಬಿಗ್​ ಶಾಕ್​ ನೀಡಿದ್ದಾರೆ. ಇಂಧನ ದರವನ್ನು ಜಿಎಸ್​ಟಿ ಅಡಿಯಲ್ಲಿ ತರಲು ರಾಜ್ಯ ಸರ್ಕಾರಗಳು ಬಯಸದೇ ಇರುವುದರಿಂದ ಇಂಧನ ದರ ಕಡಿಮೆ ಆಗುತ್ತಿಲ್ಲ ಎಂದಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಹರ್ದೀಪ್​ ಸಿಂಗ್​ ಪುರಿ, ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸಿರುವುದರಿಂದ ಬಂಗಾಳದಲ್ಲಿ ಪೆಟ್ರೋಲ್​​ ಬೆಲೆ 100ರ ಗಡಿ ದಾಟಿದೆ ಎಂದು ಸಮರ್ಥಿಸಿಕೊಂಡರು.

    ಪೆಟ್ರೋಲ್​ ಬೆಲೆಯನ್ನು ಇಳಿಸಲು ನೀವು ಬಯಸುತ್ತೀರಾ ಎಂಬ ಪ್ರಶ್ನೆಗೆ ನನ್ನ ಉತ್ತರ ಹೌದು ಎನ್ನುತ್ತೇನೆ. ಹಾಗಾದರೆ ಪೆಟ್ರೋಲ್​ ಬೆಲೆ ಯಾಕೆ ಕಡಿಮೆ ಆಗುತ್ತಿಲ್ಲ ಅಂತಾ ಪ್ರಶ್ನಿಸಿದರೆ, ರಾಜ್ಯ ಸರ್ಕಾರಗಳು ಇಂಧನ ದರವನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ಬಯಸದೇ ಇರುವುದೇ ಕಾರಣ ಎಂಬುದು ನನ್ನ ಉತ್ತರವಾಗಿದೆ ಎಂದು ಹೇಳಿದರು.

    ಪ್ರತಿ ಲೀಟರ್​ ಪೆಟ್ರೋಲ್​ಗೆ ಕೇಂದ್ರ ಸರ್ಕಾರ 32 ರೂಪಾಯಿ ತೆರಿಗೆ ವಿಧಿಸಿದೆ. ಪ್ರತಿ ಬ್ಯಾರೆಲ್​ ಕಚ್ಛಾತೈಲ ಬೆಲೆ 19 ಡಾಲರ್​ ಇದ್ದಾಗಲೂ ನಾವು 32 ರೂ. ತೆರಿಗೆ ವಿಧಿಸಿದ್ದೇವೆ. ಅಲ್ಲದೆ, ಪ್ರತಿ ಬ್ಯಾರೆಲ್​ಗೆ 75 ಡಾಲರ್ ಆದಾಗಲೂ ನಾವು 32 ರೂ. ತೆರಿಗೆಯನ್ನೇ ವಿಧಿಸುತ್ತಿದ್ದೇವೆ. ಇದರೊಂದಿಗೆ ದೇಶದ ಜನತೆಗೆ ಉಚಿತ ರೇಷನ್​, ಉಚಿತ ಮನೆ ಮತ್ತು ಉಚಿತ ಬೆಳಕು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದು ತಮ್ಮ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.

    ಪಶ್ಚಿಮ ಬಂಗಾಳ ಸರ್ಕಾರದ ಕಡೆ ಬೊಟ್ಟು ಮಾಡಿದ ಪೆಟ್ರೋಲಿಯಂ ಸಚಿವರು ಜುಲೈನಿಂದ ಇಲ್ಲಿಯವರೆಗೆ ಟಿಎಂಸಿ ಸರ್ಕಾರ ಪ್ರತಿ ಲೀಟರ್​ ಪೆಟ್ರೋಲ್​ಗೆ 3.51 ರೂಪಾಯಿ ತೆರಿಗೆ ಏರಿಕೆ ಮಾಡಿದೆ. ಈ ಕಾರಣದಿಂದಲೇ ಇಂಧನ ದರ ನೂರರ ಗಡಿ ದಾಟಿದೆ ಎಂದರು. ಹೇಳಿಕೆ ನೀಡುವುದು ಸುಲಭ. ತೆರಿಗೆ ಏರಿಕೆ ಮಾಡದಿದ್ದರೆ, ಪೆಟ್ರೋಲ್​ ದರ 100ರ ಒಳಗೆ ಇರುತ್ತಿತ್ತು ಎಂದು ಟಿಎಂಸಿ ಸರ್ಕಾರವನ್ನು ಟೀಕಿಸಿದರು.

    ಹರ್ದೀಪ್​ ಸಿಂಗ್​ ಪುರಿ ಅವರು ಉಪಚುನಾವಣೆಯ ಪ್ರಚಾರಕ್ಕಾಗಿ ಬುಧವಾರ ಕೋಲ್ಕತ್ತಕ್ಕೆ ಆಗಮಿಸಿದ್ದಾರೆ. ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಮತ್ತು ಸಿಪಿಐ (ಎಂ) ನ ಶ್ರೀಜಿಬ್ ಬಿಸ್ವಾಸ್ ಕಣಕ್ಕಿಳಿದಿದ್ದು, ಬಿಜೆಪಿ ಪರ ಪೆಟ್ರೋಲಿಯಂ ಸಚಿವರು ಪ್ರಚಾರ ಮಾಡಿದರು. (ಏಜೆನ್ಸೀಸ್​)

    ಫೇಸ್​ಬುಕ್​ ಪ್ರೇಯಸಿಗೆ ಓಡಾಡಲು ಇನ್ನೋವಾ ಕಾರು, ಕೈತುಂಬಾ ಹಣ ಕೊಟ್ಟವನಿಗೆ ಕಾದಿತ್ತು ಬಿಗ್​ ಶಾಕ್​..!

    ಪತ್ನಿ ಸಮಂತಾ ಜತೆ ಮನಸ್ತಾಪ: ಕೊನೆಗೂ ಮೌನ ಮುರಿದ ನಟ ನಾಗಚೈತನ್ಯರಿಂದ ನೋವಿನ ಮಾತುಗಳು!

    ಮನಸ್ಸಿದ್ದರೆ ವಯಸ್ಸಿನ ಹಂಗೇಕೆ? ಬಾಳ ಇಳಿ ಸಂಜೆಯಲ್ಲಿ ಜತೆಯಾದರು- ಮಗನೇ ಮಾಡಿಸಿದ ಅಪ್ಪನ ಮದುವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts