More

    VIDEO| ದ್ವೀಪ ರಾಷ್ಟ್ರ ಶ್ರೀಲಂಕಾದ ಕರಾಳ ಸ್ಥಿತಿಯನ್ನು ವಿವರಿಸಿದ ಕ್ರಿಕೆಟಿಗ ಚಮಿಕ ಕರುಣರತ್ನೆ

    ಕೊಲಂಬೊ: ಪುಟ್ಟ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಹಿಂದೆಂದೂ ಕಾಣದಂತಹ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಅಗತ್ಯ ವಸ್ತುಗಳ ಬೆಲೆ ಕೊಳ್ಳಲಾರದಷ್ಟು ಗಗನಕ್ಕೇರಿದೆ. ಇಂಧನ ಪಡೆಯಲು ವಾರಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಹ ಸಂಕಷ್ಟದ ಸ್ಥಿತಿ ಲಂಕಾದಲ್ಲಿ ನಿರ್ಮಾಣವಾಗಿದ್ದು, ಇದರಿಂದ ರೊಚ್ಚಿಗೆದ್ದಿರುವ ಲಂಕಾ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

    ದಿನದಿಂದ ದಿನಕ್ಕೆ ಇಂಧನ ಕೊರತೆ ಬಿಗಾಡಿಯುಸುತ್ತಿದ್ದು, ಸಾಮಾನ್ಯ ಜನರಂತೆ ಕ್ರಿಕೆಟ್​ ಆಟಗಾರರು ಕೂಡ ಪರಿಣಾಮವನ್ನು ಎದುರಿಸುತ್ತಿದ್ದಾರೆ. ಪ್ರಸ್ತುತ ಲಂಕಾ ಸ್ಥಿತಿಯನ್ನು ಕ್ರಿಕೆಟರ್​ ಚಮಿಕ ಕರುಣರತ್ನೆ ವಿಡಿಯೋ ಮೂಲಕ ವಿವರಿಸಿದ್ದಾರೆ.

    ನನ್ನ ವಾಹನಕ್ಕೆ ಇಂಧನ ತುಂಬಿಸಿಕೊಳ್ಳಲು ಸುಮಾರು ಎರಡು ದಿನಗಳ ಕಾಲ ದೊಡ್ಡ ಕ್ಯೂನಲ್ಲಿ ನಿಂತಿದ್ದೆ. ಅದೃಷ್ಟವಶಾತ್​ ಕೊನೆಗೂ ಪೆಟ್ರೋಲ್​ ಹಾಕಿಸಿಕೊಂಡೆ. ತೀವ್ರ ಇಂಧನ ಕೊರತೆಯಿಂದಾಗಿ ಸರಿಯಾಗಿ ಕ್ರಿಕೆಟ್​ ತರಬೇತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕರುಣರತ್ನೆ ಬೇಸರ ವ್ಯಕ್ತಪಡಿಸಿದ್ದಾರೆ.

    ಇನ್ನೇಣು ಏಷ್ಯಾ ಕಪ್ ಬರಲಿದೆ ಮತ್ತು ಈ ವರ್ಷ ಎಲ್‌ಪಿಎಲ್​ಕೂಡ ನಿಗದಿಯಾಗಿದೆ. ನಾನು ಕೊಲಂಬೊ ಮತ್ತು ವಿವಿಧ ಸ್ಥಳಗಳಿಗೆ ಅಭ್ಯಾಸಕ್ಕಾಗಿ ಹೋಗಬೇಕಾಗಿರುವುದರಿಂದ ಮತ್ತು ಕ್ಲಬ್ ಸೀಸನ್‌ಗೆ ಹಾಜರಾಗಬೇಕಾಗಿದೆ. ಆದರೆ, ದೇಶದಲ್ಲಿ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ಇಂಧನ ಕೊರತೆಯಿಂದಾಗಿ ನಾನು ಅಭ್ಯಾಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಎರಡು ದಿನದಿಂದ ನಾನು ಎಲ್ಲಿಗೂ ಹೋಗಲಿಲ್ಲ. ಏಕೆಂದರೆ ಪೆಟ್ರೋಲ್‌ಗಾಗಿಯೇ ನಾನು ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಾಯಿತು. ಅದೃಷ್ಟವಶಾತ್ ಕೊನೆಗೂ ಪೆಟ್ರೋಲ್​ ಸಿಕ್ಕಿತು. ಆದರೆ, ಅಷ್ಟು ಪೆಟ್ರೋಲ್​ಗೆ ಹತ್ತು ಸಾವಿರ ರೂಪಾಯಿ ಕೊಡಬೇಕಾಯಿತು. ಹೆಚ್ಚೆಂದರೆ ಆ ಪೆಟ್ರೋಲ್​ನಲ್ಲಿ ಎರಡರಿಂದ ಮೂರು ದಿನಗಳು ಮಾತ್ರ ಓಡಾಡಬಹುದು ಎಂದು ಕರುಣರತ್ನೆ ಹೇಳಿದರು.

    ಚಮಿಕ ಕರುಣರತ್ನೆ 2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇನ್ನು ಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ವಿರೋಧಿಸಿ, ಲೆಜೆಂಡರಿ ಕ್ರಿಕೆಟಿಗ ಸನತ್ ಜಯಸೂರ್ಯ ಸಹ ಕಳೆದ ದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಕುಮಾರ ಸಂಗಕ್ಕಾರ ಮತ್ತು ಮಹೇಲ ಜಯವರ್ಧನೆ ಕೂಡ ಪ್ರತಿಭಟನಾಕಾರರಿಗೆ ಬೆಂಬಲವಾಗಿ ನಿಂತರು. (ಏಜೆನ್ಸೀಸ್​)

    ಚಂದ್ರ-ಮಂಗಳ ಗ್ರಹಕ್ಕೆ ಬುಲೆಟ್​ ಟ್ರೈನ್? ಅಂತರ್​ಗ್ರಹ ಸಾರಿಗೆ ವ್ಯವಸ್ಥೆಗೆ ಜಪಾನ್​ ಪ್ಲಾನ್​ ಹೀಗಿದೆ ನೋಡಿ…​

    ಪುಷ್ಪ ಚಿತ್ರದ ವಾಕಿಂಗ್​ ಸ್ಟೈಲ್​ ಹಿಂದಿನ ರಹಸ್ಯವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟ ಅಲ್ಲು ಅರ್ಜುನ್​!

    VIDEO| ತುಂಡುಡುಗೆ ತೊಟ್ಟು ಮುಜುಗರಕ್ಕೀಡಾದ ರಶ್ಮಿಕಾಗೆ ಏನಮ್ಮಾ ನಿನ್ನ ಫಜೀತಿ ಎಂದ ನೆಟ್ಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts