More

    ಬ್ರಾಲೆಸ್​ ಫೋಟೋಶೂಟ್​: ಚಿತ್ರರಂಗ ಬಿಡುವಂತೆ ನಟಿ ಪಾಯಲ್​ ರಜಪೂತ್​ಗೆ ತಾಯಿಯ ತಾಕೀತು!

    ಹೈದರಾಬಾದ್​: ಟಾಲಿವುಡ್​ನ ಹಾಟ್​ ಬ್ಯೂಟಿ ಎಂದೇ ಖ್ಯಾತಿಯಾಗಿರುವ ನಟಿ ಪಾಯಲ್​ ರಜಪೂತ್ ನೆಟ್ಟಿಗರ ವಿರುದ್ಧ ಗರಂ ಆಗಿದ್ದಾರೆ. ಟ್ರೋಲಿಗರು ಮಾಡಿದ ಕೆಲಸದಿಂದಾಗಿ ನನ್ನ ಅಮ್ಮ ನನ್ನನ್ನು ಸಿನಿಮಾ ರಂಗ ಬಿಡುವಂತೆ ಕೇಳುತ್ತಿದ್ದಾರೆ. ನಿಮ್ಮ ಕೀಳು ಮನಸ್ಥಿತಿಯನ್ನು ಪ್ರದರ್ಶಿಸಬೇಡಿ ಎಂದು ಟ್ರೋಲಿಗರಿಗೆ ನಟ ಪಾಯಲ್​ ಹೇಳಿದ್ದಾರೆ.

    ಅಷ್ಟಕ್ಕೂ ನಟಿ ಪಾಯಲ್​ ಟ್ರೋಲಿಗರ ವಿರುದ್ಧ ಯಾಕಿಷ್ಟು ಕೋಪಗೊಂಡಿದ್ದಾರೆ ಅಂದರೆ,​ ಅದಕ್ಕೆ ಕಾರಣ ಪಾಯಲ್​ ಅವರ ಇತ್ತೀಚಿನ ಹಾಟ್​ ಫೋಟೋಶೂಟ್​ ಬಗ್ಗೆ ಕೇಳಿಬಂದಿರುವ ಕಾಮೆಂಟ್​ಗಳು.

    ಹೌದು, ಕಳೆದ ವಾರ ಪಾಯಲ್​ ರಜಪೂತ್​ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಆ ವಿಡಿಯೋದಲ್ಲಿ ನಟಿ ಪಾಯಲ್​ ಬ್ರಾಲೆಸ್​ ಆಗಿ ಕಾಣಿಸಿಕೊಂಡು ಫೋಟೋಶೂಟ್​ಗೆ ಪೋಸ್​ ನೀಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್​ ಆಗಿತ್ತು ಮತ್ತು ನಟಿಯ ವಿರುದ್ಧ ಸಾಕಷ್ಟು ಕೆಟ್ಟ ಕಾಮೆಂಟ್​ಗಳು ಹರಿದುಬಂದಿದ್ದವು.

    ಇದೀಗ ಟ್ರೋಲ್​ಗಳ ಬಗ್ಗೆ ಕಿಡಿಕಾರಿರುವ ಪಾಯಲ್​, ಟ್ರೋಲಿಗರು ಕಳಪೆ ಮನಸ್ಥಿತಿಯವರು ಎಂದು ಜರಿದಿದ್ದಾರೆ. ನನ್ನ ಮೇಲಾಗುತ್ತಿರುವ ಟ್ರೋಲ್​ಗಳ​ ಬಗ್ಗೆ ನನ್ನ ತಾಯಿಗೆ ಚಿಂತೆ ಕಾಡುತ್ತಿದೆ. ಸಿನಿಮಾ ರಂಗವನ್ನು ಬಿಡುವಂತೆ ಕೇಳುತ್ತಿದ್ದಾರೆ. ಆದರೆ, ಯಾರು ಏನೇ ಬಂದರು ನಾನು ಕುಗ್ಗುವುದಿಲ್ಲ. ನಾನು ದೃಢವಾಗಿ ನಿಂತು, ನನಗೆ ಯಾವುದು ಇಷ್ಟವೋ ಅದನ್ನೇ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಸಿನಿಮಾ ವಿಚಾರಕ್ಕೆ ಬರುವುದಾದರೆ, ಪಾಯಲ್​ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಆರ್​​ಎಕ್ಷ್​ 100 ಮತ್ತು ಆರ್​ಡಿಎಕ್ಸ್​ ಲವ್​ ಚಿತ್ರಗಳಲ್ಲಿನ ಬೋಲ್ಡ್​ ನಟನೆಯ ಮೂಲಕ ಪಾಯಲ್​ ಸಖತ್​ ಸುದ್ದಿ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಕಾಲಿಡುತ್ತಿರುವ ಪಾಯಲ್​, ಡಾಲಿ ಧನಂಜಯ ನಟನೆಯ ‘ಹೆಡ್ ಬುಷ್‌’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. (ಏಜೆನ್ಸೀಸ್​)

    ಇಂಡಿಯನ್-2 ತಂಡಕ್ಕೆ ತಮನ್ನಾ; ಕಮಲ್ ಹಾಸನ್ ಚಿತ್ರದಲ್ಲೊಂದು ದೊಡ್ಡ ಬದಲಾವಣೆ

    ವಿಕ್ರಾಂತ್​ ರೋಣನ ಜಬರ್ದಸ್ತ್ ಎಂಟ್ರಿಗೆ ದಿನಾಂಕ ಫಿಕ್ಸ್​: ಫೆ.24ಕ್ಕೆ ವಿಶ್ವದಾದ್ಯಂತ ಬಿಡುಗಡೆ

    ವಿಕ್ಕಿ-ಕತ್ರಿನಾ ಮದುವೆಯ ನೇರಪ್ರಸಾರಕ್ಕೆ OTTಯಿಂದ 100 ಕೋಟಿ ರೂ. ಆಫರ್: ತಾರಾಜೋಡಿಯ ನಿಲುವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts