More

    ವಿಮಾನದಲ್ಲಿ ಬೆಂಕಿ ನೋಡಿ ತಕ್ಷಣ ಎಚ್ಚರಿಸಿದ ಬಿಹಾರದ ಫುಲ್ವರಿ ಶರೀಫ್​ ಏರಿಯಾ ಜನರು: ತಪ್ಪಿದ ಭಾರೀ ದುರಂತ

    ಪಟನಾ: ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಪೈಸ್​ಜೆಟ್​ ವಿಮಾನವನ್ನು ಪಟನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನದಲ್ಲಿದ್ದ 185 ಜನರು ಕೂಡ ಸುರಕ್ಷಿತವಾಗಿದ್ದಾರೆ. ವಿಮಾನ ನಿಲ್ದಾಣದ ಮೂಲಗಳ ಪ್ರಕಾರ ಬೆಂಕಿ ಕಾಣಿಸಿಕೊಂಡಿದ್ದು, ಬೋಯಿಂಗ್​ 727 ವಿಮಾನದಲ್ಲಿ ಎಂದು ತಿಳಿದುಬಂದಿದೆ.

    ವಿಮಾನದ ಎಡ ಭಾಗದ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ವಿಮಾನವನ್ನು ಲ್ಯಾಂಡಿಂಗ್​ ಮಾಡಲಾಗಿದ್ದು, ಎರಡು ಬ್ಲೇಡ್​ಗಳು ಬಾಗಿವೆ. ಬಿಹಾರದ ಫುಲ್ವರಿ ಶರಿಫ್​ ಜನರು ವಿಮಾನದಲ್ಲಿ ಬೆಂಕಿ ಉರಿಯುವುದನ್ನು ನೋಡಿ ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎಂದು ಪಟನಾದ ಜಿಲ್ಲಾಧಿಕಾರಿ ತಿಳಿಸಿದರು.

    ಬೆಂಕಿಗೆ ತಾಂತ್ರಿಕ ದೋಷವೇ ಕಾರಣ ಎಂದು ಶಂಕಿಸಲಾಗಿದ್ದು, ಇಂಜಿನಿಯರಿಂಗ್ ತಂಡ ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

    ಪ್ರಯಾಣದ ಸಮಯದಲ್ಲಿ ವಿಮಾನದ ಒಳಗಿನ ದೀಪಗಳು ಮಿನುಗಲು ಪ್ರಾರಂಭಿಸಿದವು. ಫ್ಲೈಟ್ ಟೇಕ್ ಆಫ್ ಆದ ಸಮಯದಿಂದ ನಮಗೆ ಏನೋ ತಪ್ಪಾಗಿದೆ ಎಂದು ಭಾವಿಸಿದ್ದೆವು. ಇದು ಸಂಪೂರ್ಣವಾಗಿ ಸ್ಪೈಸ್​ಜೆಟ್​ ನಿರ್ಲಕ್ಷ್ಯವಾಗಿದೆ ಎಂದು ಪ್ರಯಾಣಿಕರು ಅಮಸಾಧಾನ ಹೊರಹಾಕಿದ್ದಾರೆ.

    ಸದ್ಯ ಸ್ಥಳೀಯ ಜನರ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದೆ. ಘಟನೆ ಸಂಬಂಧ ಸ್ಪೈಸ್‌ಜೆಟ್‌ನಿಂದ ಅಧಿಕೃತ ಹೇಳಿಕೆಯನ್ನು ನಿರೀಕ್ಷಿಸಲಾಗುತ್ತಿದೆ. (ಏಜೆನ್ಸೀಸ್​)

    ಯುವತಿಯರು ಮಾತ್ರವಲ್ಲ ಯುವಕರ ಮೇಲೂ ಲೈಂಗಿಕ ದೌರ್ಜನ್ಯಗಳಾಗಿವೆ: ಯುವನಟಿಯ ಸ್ಫೋಟಕ ಹೇಳಿಕೆ

    ‘ಅಗ್ನಿಪಥ್’​ಗೆ ನೇಮಕಾತಿ ಶುರು: ಏನೆಲ್ಲಾ ಸೌಲಭ್ಯಗಳಿವೆ? ಅರ್ಹತೆ ಏನು? ವೇತನವೆಷ್ಟು? ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ…

    ಸಚಿವೆ ವೀಣಾ ಜಾರ್ಜ್​ ಹೆಸರಲ್ಲಿ ಅಶ್ಲೀಲ ವಿಡಿಯೋ ಮಾಡಲು ಮುಂದಾದ ಕ್ರೈಂ ನಂದಕುಮಾರ್​ ಮುಖವಾಡ ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts