More

    ಭಾರತಕ್ಕೆ ಭೇಟಿ ನೀಡಿದ್ದ ಪಾಕ್​ ಅಂಕಣಕಾರನ ಮುಖವಾಡ ಬಯಲು: ದೇಶದ ಭದ್ರೆತೆಗೆ ಹೊಸ ಸವಾಲು

    ನವದೆಹಲಿ: ಪಾಕಿಸ್ತಾನದ ಪ್ರಖ್ಯಾತ ಅಂಕಣಕಾರ ನುಸ್ರತ್​ ಮಿರ್ಜಾ ಅವರು ಇತ್ತೀಚೆಗೆ ಪಾಕ್​ ಯೂಟ್ಯೂಬರ್​ ಶಕಿಲ್​ ಚೌಧರಿ ಸಂದರ್ಶನದಲ್ಲಿ ಮಾತನಾಡಿದ್ದು, ಶಾಕಿಂಗ್​ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ನುಸ್ರತ್​ ಹೇಳಿಕೆ ಭಾರತದ ಭದ್ರತೆಗೆ ಹೊಸ ಸವಾಲಾಗಿದೆ.

    2005 ಮತ್ತು 2011ರ ನಡುವೆ ಸಾಕಷ್ಟು ಬಾರಿ ಭಾರತಕ್ಕೆ ಭೇಟಿ ನೀಡಿ, ಅಲ್ಲಿ ಸಂಗ್ರಹಿಸಿದ ಸಾಕಷ್ಟು ಮಾಹಿತಿಗಳನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್​ ಸರ್ವಿಸ್​ ಇಂಟಿಲಿಜೆನ್ಸ್​ (ಐಎಸ್​ಐ)ಗೆ ನೀಡಿರುವುದಾಗಿ ನುಸ್ರುತ್​, ಸಂದರ್ಶನದಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

    ಹಮೀದ್​ ಅನ್ಸಾರಿ ಅವರ ಭಾರತದ ಉಪ ರಾಷ್ಟ್ರಪತಿಯಾಗಿದ್ದ ಸಮಯದಲ್ಲಿ ಅವರ ಮನವಿ ಮೇರೆಗೆ ಭಯೋತ್ಪಾದನೆ ವಿಷಯದ ಮೇಲೆ ನಡೆದ ಕಾನ್ಫರೆನ್ಸ್​ನಲ್ಲಿ ಭಾಗವಹಿಸಲು ನಾನು ಭಾರತಕ್ಕೆ ಪ್ರಯಾಣ ಬೆಳೆಸಿದ್ದೆ. ಅಲ್ಲದೆ, 2011ರಲ್ಲಿಯೂ ಸಾಕಷ್ಟು ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ. ಈ ವೇಳೆ ಭಾರತದ ಮಿಲಿ ಗೆಜೆಟ್​ ಪತ್ರಿಕೆಯ ಪ್ರಕಾಶಕ ಜಫರುಲ್ಲಾ ಇಸ್ಲಾಂ ಅವರನ್ನು ಭೇಟಿ ಮಾಡಿದ್ದೇನೆ. ಭಾರತದ ಭೇಟಿಯ ವೇಳೆ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ. ಅಷ್ಟು ವಿಚಾರಗಳನ್ನು ಐಎಸ್​ಐ ಜತೆ ಹಂಚಿಕೊಂಡಿದ್ದೇನೆ ಎಂದು ನುಸ್ರುತ್​ ಸಂದರ್ಶನದಲ್ಲಿ ಹೇಳಿದ್ದಾರೆ.

    ಪಾಕಿಸ್ತಾನದವರು ಪರಿಣಿತರಲ್ಲ ಎಂಬುದನ್ನು ಒಪ್ಪಿಕೊಂಡ ನುಸ್ರುತ್​, ಪಾಕ್​ನವರಿಗೆ ಪರಿಸ್ಥಿತಿಯ ಬಗ್ಗೆ ಅರಿವಿದೆ. ಏಕೆಂದರೆ, ಅವರು ಮೊಘಲರು ಮತ್ತು ರಾಷ್ಟ್ರದ ಮೇಲೆ ಪ್ರಾಬಲ್ಯವನ್ನು ಸಾಧಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಪಾಕಿಸ್ತಾನ ಶಾಂತಿಯನ್ನು ಬಯಸುತ್ತದೆ. ಆದರೆ, ಅದನ್ನು ಸ್ಥಾಪಿಸಲು ಭಾರತ ಆಸಕ್ತಿ ವಹಿಸುತ್ತಿಲ್ಲ. ಆಯಕಟ್ಟಿನ ಸ್ಥಳದ ಹೊರತಾಗಿಯೂ, ಪಾಕಿಸ್ತಾನವನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ ಎಂದು ಸಂದರ್ಶನದಲ್ಲಿ ಒತ್ತಿ ಹೇಳಿದರು.

    ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು 2019ರ ಆಗಸ್ಟ್ 5 ರಂದು ಭಾರತ ಸರ್ಕಾರ ರದ್ದುಗೊಳಿಸಿದ್ದು, ಅಂದಿನಿಂದ ಪಾಕಿಸ್ತಾನ, ಭಾರತದ ಮೇಲೆ ವಿನಾಕಾರಣ ಕ್ಯಾತೆ ತೆಗೆಯುತ್ತಾ ಬರುತ್ತಿದೆ. ರಾಜತಾಂತ್ರಿಕ ಸಂಬಂಧಗಳನ್ನು ತಗ್ಗಿಸುವ ಮೂಲಕ ಮತ್ತು ಭಾರತೀಯ ರಾಯಭಾರಿಯನ್ನು ಹೊರಹಾಕುವುದರೊಂದಿಗೆ ಪಾಕಿಸ್ತಾನವು ಭಾರತದ ಕ್ರಮಕ್ಕೆ ಬಲವಾಗಿ ಪ್ರತಿಕ್ರಿಯಿಸಿದೆ. ಆದರೆ, ದ್ವೇಷ, ಭಯೋತ್ಪಾದನೆ ಮತ್ತು ಹಿಂಸಾಚಾರವು ಮುಕ್ತವಾಗಿರುವ ಪಾಕಿಸ್ತಾನದೊಂದಿಗೆ ಶಾಂತಿಯುತ, ಸೌಹಾರ್ದಯುತ ಸಂಬಂಧವನ್ನು ಬಯಸುವುದಾಗಿ ಭಾರತ ಪ್ರತಿಪಾದಿಸುತ್ತಾ ಬಂದಿದೆ. (ಏಜೆನ್ಸೀಸ್​)

    ಸೇತುವೆಗೆ ಡಿಕ್ಕಿ ಹೊಡೆದು ಕಾರು ಹೊಳೆಗೆ ಬಿದ್ದ ಪ್ರಕರಣ: 400 ಮೀ. ದೂರದಲ್ಲಿ ಯುವಕನೊಬ್ಬನ ಮೃತದೇಹ ಪತ್ತೆ

    ದೇಶದ ಅತಿ ಕಿರಿಯ ಮೇಯರ್ ವರಿಸಲಿದ್ದಾರೆ ರಾಜ್ಯದ ಅತಿ ಕಿರಿಯ MLA! ಸೆ.4ಕ್ಕೆ ಅಪರೂಪದ ಮದ್ವೆಗೆ ಕೇರಳ ಸಾಕ್ಷಿ

    ಬಾಲಕನನ್ನು ಬದುಕಿಸಲು ಮೊಸಳೆ ಸೆರೆಹಿಡಿದು ಹೊಟ್ಟೆ ಸೀಳಲು ಯತ್ನಿಸಿದ ಗ್ರಾಮಸ್ಥರು! ಮುಂದೇನಾಯ್ತು ನೀವೇ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts