More

    ಮದ್ಯ ಇಟ್ಟುಕೊಂಡಿದ್ದ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮಲಪುತ್ರನನ್ನು ಬಂಧಿಸಿದ ಪೊಲೀಸರು: ಮುಂದೇನಾಯ್ತು?

    ಇಸ್ಲಮಾಬಾದ್​: ಮದ್ಯವನ್ನು ಇಟ್ಟುಕೊಂಡಿದ್ದ ಆರೋಪದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಮಲಪುತ್ರನನ್ನು ಬಂಧಿಸಿ, ಕೆಲವೇ ಕ್ಷಣದಲ್ಲಿ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಮಂಗಳವಾರ ಬಿಡುಗಡೆ ಮಾಡಲಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.

    ಅಂದಹಾಗೆ ಪಾಕಿಸ್ತಾನದಲ್ಲಿ ಮದ್ಯ ಸೇವನೆ ಮತ್ತು ಮಾರಾಟ ಅಕ್ರಮವಾಗಿದೆ. ಪ್ರಥಮ ವರ್ತಮಾನ ವರದಿ (ಎಫ್ಐಆರ್​) ಪ್ರಕಾರ​ ಪಾಕಿಸ್ತಾನ ಪ್ರಥಮ ಮಹಿಳೆ ಅಥವಾ ಪ್ರಸ್ತುತ ಇಮ್ರಾನ್​ ಖಾನ್ ಪತ್ನಿಯಾಗಿರುವ ಬುಶ್ರಾ ಬಿಬು ಅವರ ಪುತ್ರ ಮುಸಾ ಮನೇಕಾ ಮತ್ತು ಆತನ ಇಬ್ಬರು ಸ್ನೇಹಿತರನ್ನು ಸೋಮವಾರ ಗಡ್ಡಾಫಿ ಸ್ಟೇಡಿಯಂ ಬಳಿ ಪಾಕ್​ ಪೊಲೀಸರು ಬಂಧಿಸಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಮದ್ಯವು ಪತ್ತೆಯಾದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು.

    ಅಂದಹಾಗೆ ಬಂಧಿತ ಮುಸಾ ಮನೇಕಾ, ಬುಶ್ರಾ ಬಿಬು ಅವರ ಮೊದಲ ಗಂಡನಿಗೆ ಹುಟ್ಟಿದ ಮಗ. ಇಮ್ರಾನ್​ ಖಾನ್​ಗೆ ಮಲಪುತ್ರನಾಗಬೇಕು. ಮನೇಕಾ ಸೇರಿದಂತೆ ಕಾರಿನಲ್ಲಿ ಮೂವರು ಯುವಕರು ಇದ್ದರು. ಬಂಧನವಾದ ದಿನವೇ ಹಿರಿಯ ಅಧಿಕಾರಿಗಳ ಆದೇಶದಂತೆ ಅವರನ್ನು ಬಂಧಮುಕ್ತ ಮಾಡಲಾಗಿದೆ. ಆರೋಪಿಗಳ ಕುಟುಂಬಗಳಿಂದ ವೈಯಕ್ತಿಕ ಖಾತರಿಯಂತಹ ಕೆಲವು ಕಾನೂನು ಔಪಚಾರಿಕತೆಗಳನ್ನು ಸಹ ಇದೇ ಸಂದರ್ಭದಲ್ಲಿ ಪೂರೈಸಲಾಗಿದೆ ಎಂದು ತಿಳಿದುಬಂದಿದೆ.

    ಅಕ್ರಮ ಮದ್ಯ ಇಟ್ಟುಕೊಂಡಿದ್ದಲ್ಲದೆ, ಸಿಕ್ಕಿಬಿದ್ದಾಗ ಪೊಲೀಸರಿಗೆ ಮನೇಕಾ ಅವಾಜ್​ ಸಹ ಹಾಕಿದ್ದಾರೆ. ನಾನು ಪಾಕಿಸ್ತಾನದ ಪ್ರಥಮ ಮಹಿಳೆಯ ಪುತ್ರನಾಗಿದ್ದು, ನನ್ನನ್ನು ಬಂಧಿಸಿದರೆ, ಅದರ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸ್​ ಅಧಿಕಾರಿಗಳಿಗೆ ಮನೇಕಾ ಬೆದರಿಕೆ ಹಾಕಿದ್ದಾರೆ. ಆದರೂ, ಆತನನ್ನು ಪೊಲೀಸರು ಬಂಧಿಸಿದ ಕೂಡಲೇ ಹಿರಿಯ ಅಧಿಕಾರಿಗಳು ಕರೆ ಮಾಡಿ ಬಿಡುಗಡೆ ಮಾಡಿಸಿದ್ದಾರೆ.

    ಇನ್ನು ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಪತ್ನಿ ಬುಶ್ರಾ ಬಿಬು ನಡುವೆ ಅಸಮಾಧಾನದ ಹೊಗೆಯಾಡುತ್ತಿದೆ ಎಂದು ಕಳೆದ ವಾರದಿಂದ ವರದಿಗಳು ಬರಲು ಆರಂಭಿಸಿವೆ. ಇದರ ಬೆನ್ನಲ್ಲೇ ಬಿಬು ಅವರ ಆಪ್ತ ಸ್ನೇಹಿತೆ ಫರಾಹ್ ಖಾನ್, ಟ್ವಿಟರ್‌ನಲ್ಲಿ ಪ್ರಥಮ ಮಹಿಳೆ ತನ್ನ ಪತಿಯೊಂದಿಗೆ ಬಾನಿ ಗಾಲಾ ನಿವಾಸದಲ್ಲಿ ವಾಸಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)

    ಎನ್​ಬಿಕೆ 107 ಪೋಸ್ಟರ್ ಬಿಡುಗಡೆ; ‘ಮಫ್ತಿ’ ರಿಮೇಕ್ ಇರಬಹುದು ಎಂಬ ಗುಮಾನಿ

    ನಾವೂ ಜನರ ಬಳಿಗೆ ಹೋಗಲು ಸಿದ್ಧ: ಪ್ರತಿಪಕ್ಷ ಕಾಂಗ್ರೆಸ್​ಗೆ ಸಿಎಂ ಬೊಮ್ಮಾಯಿ ಗುದ್ದು

    ಐಟಿ ವರ್ಕ್ ಫ್ರಂ ಹೋಂ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts