More

    ಭಾರಿ ಮಳೆಗೆ ಕೇಬಲ್​ ಬ್ರಿಡ್ಜ್​ ಕುಸಿತ: ದೂಧ್​ಸಾಗರ್ ಫಾಲ್ಸ್​ನಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ

    ಪಣಜಿ: ಭಾರಿ ಮಳೆಯಿಂದಾಗಿ ಕೇಬಲ್​ ಬ್ರಿಡ್ಜ್​ ಕುಸಿದು ನೀರಿನಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ದಕ್ಷಿಣ ಗೋವಾದಲ್ಲಿರುವ ದೂಧ್​ಸಾಗರ್ ಫಾಲ್ಸ್​ನಲ್ಲಿ ನಡೆದಿದೆ.

    ಈ ಘಟನೆ ಶುಕ್ರವಾರ ಸಂಜೆ ನಡೆದಿದೆ. ಗೋವಾ ಮತ್ತು ಕರ್ನಾಟಕ ಗಡಿಗಳಲ್ಲಿ ಸುರಿದ ಭಾರಿ ಮಳೆಯಿಂದ ಜಲಪಾತದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಈ ಅವಘಡ ಸಂಭವಿಸಿದೆ. ಗೋವಾದ ಹಲವು ಭಾಗಗಲ್ಲಿ ನಿನ್ನೆ ಭಾರಿ ಮಳೆಯಾಗಿದೆ.

    ನೀರಿನಲ್ಲಿ ಸಿಲುಕಿ ಸಹಾಯಕ್ಕಾಗಿ ಎದರು ನೋಡುತ್ತಿದ್ದ 40 ಕ್ಕೂ ಹೆಚ್ಚು ಪ್ರವಾಸಿಗರಿಗೆ ದೃಷ್ಟಿ ಜೀವ ರಕ್ಷಕರು ಆಪತ್ಭಾಂದವರಾಗಿ ಬಂದರು. ಎಲ್ಲರನ್ನು ರಕ್ಷಣೆ ಮಾಡಿ ಸುರಕ್ಷಿತ ತಾಣಕ್ಕೆ ಸ್ಥಳಾಂತರ ಮಾಡಿದರು.

    ಈ ಬಗ್ಗೆ ದೃಷ್ಟಿ ಜೀವರಕ್ಷಕ ಪಿಆರ್​ಒ ಅಧಿಕೃತ ಹೇಳಿಕೆ ನೀಡಿದ್ದು, ನಿನ್ನೆ ಸಂಜೆ ಗೋವಾ ಮತ್ತು ಕರ್ನಾಟಕ ಗಡಿ ಭಾಗಗಳಲ್ಲಿ ಸುರಿದ ಭಾರಿ ಮಳೆಗೆ ದೂಧ್​ಸಾಗರ್​ ಜಲಪಾತದಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಹೆಚ್ಚಾಯಿತು. ನೀರಿನ ಈ ದಿಢೀರ್​ ಏರಿಕೆಯಿಂದ ದಾಟಲು ಬಳಸುವ ಕೇಬಲ್​ ಬ್ರಿಡ್ಜ್​​ ಕುಸಿದು, 40ಕ್ಕೂ ಹೆಚ್ಚು ಪ್ರವಾಸಿಗರು ನೀರಿನಲ್ಲಿ ಸಿಲುಕಿದ್ದರು. ಈ ವೇಳೆ ದೃಷ್ಟಿ ಜೀವ ರಕ್ಷಕರು ನೆರವಿಗೆ ಧಾವಿಸಿ ಬಂದು ಎಲ್ಲರನ್ನು ರಕ್ಷಿಸಿ, ಸುರಕ್ಷಿತ ತಾಣಕ್ಕೆ ಕರೆತಂದರು ಎಂದು ಹೇಳಿದ್ದಾರೆ.

    ಭಾರಿ ಮಳೆ ಮತ್ತು ಹೆಚ್ಚುತ್ತಿರುವ ನೀರಿನ ಮಟ್ಟದಿಂದಾಗಿ ಮುಂದಿನ ಕೆಲವು ದಿನಗಳವರೆಗೆ ದೂಧ್​ಸಾಗರ್ ಜಲಪಾತಕ್ಕೆ ಯಾರೂ ಇಳಿಯದಂತೆ ದೃಷ್ಟಿ ಮರೈನ್ ಜನರಿಗೆ ಎಚ್ಚರಿಕೆ ನೀಡಿದೆ. (ಏಜೆನ್ಸೀಸ್​)

    ಯುವ ಪೀಳಿಗೆಯ ಮನಸ್ಸನ್ನು ಮಲಿನಗೊಳಿಸುತ್ತಿದ್ದೀರಿ: ಏಕ್ತಾ ಕಪೂರ್​ಗೆ ಸುಪ್ರೀಂ ಕೋರ್ಟ್​ ತರಾಟೆ

    ರಷ್ಯಾ ಸೇನೆಯೊಂದಿಗೆ ನ್ಯಾಟೋ ಪಡೆಗಳ ನೇರ ಘರ್ಷಣೆ ಜಾಗತಿಕ ದುರಂತಕ್ಕೆ ಕಾರಣವಾಗಲಿದೆ: ಪುಟಿನ್ ಎಚ್ಚರಿಕೆ​

    ಮದುವೆ ಆಮಿಷವೊಡ್ಡಿ ಯುವತಿ ಮತಾಂತರ; ಮತಾಂತರ ನಿಷೇಧ ಕಾಯ್ದೆ ಅನ್ವಯ ಮುಸ್ಲಿಂ ಯುವಕನ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts