More

    ನಿಮ್ಮ ಈ ನಡೆಯಿಂದಲೇ ನಾಗಚೈತನ್ಯ ನಿಮ್ಮನ್ನು ಬಿಟ್ಟಿದ್ದು! ಸಮಂತಾರ ಹಾಟ್ ಅವತಾರ ಕಂಡು ಫ್ಯಾನ್ಸ್​ ಗರಂ

    ಹೈದರಾಬಾದ್​: ನಟಿ ಸಮಂತಾ ಡಿವೋರ್ಸ್​ ಪಡೆದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಅದರಲ್ಲೂ ನೆಗಿಟಿವ್​ ಸುದ್ದಿಗಳಿಗೆ ಹೆಚ್ಚು ಗುರಿಯಾಗುತ್ತಿದ್ದಾರೆ. ಇದೀಗ ಸಮಂತಾ ತಮ್ಮ ಚಿತ್ತವನ್ನು ಸಂಪೂರ್ಣ ಸಿನಿಮಾ ಕಡೆ ಹಾಯಿಸಿದ್ದು, ಅವರ ಪ್ರತಿಯೊಂದು ನಡವಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರು ತಮ್ಮ ಜಾಲತಾಣ ಖಾತೆಯಲ್ಲಿ ಪೋಸ್ಟ್​ ಮಾಡುವ ಪ್ರತಿ ಪೋಸ್ಟ್​ಗಳಿಗೆ ಸಿಕ್ಕಾಪಟ್ಟೆ ಕಾಮೆಂಟ್​ಗಳು ಬರುತ್ತಿದೆ. ಆದರೆ, ಸಮಂತಾ ಮತ್ತೊಮ್ಮೆ ನೆಗೆಟಿವ್​ ಕಾಮೆಂಟ್​ಗಳ ವಿರುದ್ಧ ಕೆಂಡಕಾರಿದ್ದಾರೆ.

    ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಮಾಮೂಲಿಯಂತೆ ಸಕ್ರಿಯರಾಗಿದ್ದಾರೆ. ಪ್ರತಿದಿನ ಏನಾದರೊಂದು ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ಎಲಿ ಇಂಡಿಯಾ ಫ್ಯಾಶನ್​ ಮ್ಯಾಗಜಿನ್​ಗೆ ನೀಡಿರುವ ಫೋಟೋವನ್ನು ಸಮಂತಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಬೇಷರತ್ತಾಗಿ ನಾನು ಏನನ್ನೂ ಸ್ವೀಕರಿಸುವುದಿಲ್ಲ ಎಂದು ತಮ್ಮ ವಿರುದ್ಧ ನೆಗೆಟಿವ್​ ಕಾಮೆಂಟ್ ಮಾಡುವವರಿಗೆ ಮತ್ತೊಮ್ಮೆ ತಿರುಗೇಟು ನೀಡಿದ್ದಾರೆ. ​

    ವಿಭಿನ್ನ ಅಭಿಪ್ರಾಯಗಳನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಆದರೆ, ನಾವು ಯಾವಾಗಲೂ ಒಬ್ಬರನೊಬ್ಬರನ್ನು ದ್ವೇಷಿಸದೇ ಪ್ರೀತಿಯಿಂದ ಕಾಣಬೇಕು. ನಿಮ್ಮ ಹತಾಶೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹೊರಹಾಕುವುದಾದರೆ, ಅದನ್ನು ಸ್ವೀಕರಿಸುವ ರೀತಿಯಲ್ಲಿ ಹೊರಹಾಕಿ, ಅದನ್ನು ಬಿಟ್ಟು ಕೆಟ್ಟದಾಗಿ ಕಾಮೆಂಟ್​ ಮಾಡಬೇಡಿ ಎಂದು ಸಮಂತಾ ನೀತಿ ಪಾಠ ಮಾಡಿದ್ದಾರೆ.

    ಸಮಂತಾರ ಸಂದೇಶದ ಹೊರತಾಗಿಯೂ ಅನೇಕರು ಟ್ರೋಲ್​ ಮಾಡುತ್ತಿದ್ದಾರೆ. ನಿಮ್ಮ ಈ ನಡೆಯಿಂದಲೇ ಸಮಂತಾ ನಿಮ್ಮನ್ನು ಬಿಟ್ಟಿದ್ದು ಎಂದು ಕಿಡಿಕಾರಿದ್ದಾರೆ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಟೀಕಿಸಿದ್ದಾರೆ. ಆದರೂ, ಇದಕ್ಕೆಲ್ಲ ತಲೆಕಡೆಸಿಕೊಳ್ಳದ ಸಮಂತಾ ತಮ್ಮ ಕೆಲಸ ಕಾರ್ಯಗಳಲ್ಲಿ ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

    8ನೇ ತರಗತಿ ವಿದ್ಯಾರ್ಥಿನಿಗೆ ಹೊಟ್ಟೆ ನೋವು: ಆಸ್ಪತ್ರೆಗೆ ಕರೆದೊಯ್ದ ತಾಯಿಗೆ ಸತ್ಯ ತಿಳಿದು ಆಘಾತ!

    ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ

    ಧೋನಿ ಬದಲು ರವೀಂದ್ರ ಜಡೇಜಾರನ್ನು ಮೊದಲು ರಿಟೇನ್ ಮಾಡಿಕೊಂಡಿದ್ದೇಕೆ ಸಿಎಸ್​ಕೆ? ಇಲ್ಲಿದೆ ಅಸಲಿ ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts