More

    ದುಬಾರಿ ಆ್ಯಪಲ್ ವಾಚ್​ ಬುಕ್​ ಮಾಡಿದ್ದ ಖ್ಯಾತ ನಟನಿಗೆ ಶಾಕ್​ ಕೊಟ್ಟ ಆನ್​ಲೈನ್​ ಕಂಪನಿ: ಕೋರ್ಟ್​ನಲ್ಲಿ ಕೇಸ್​ ರಿವರ್ಸ್​ ​

    ನವದೆಹಲಿ: ಆನ್​ಲೈನ್​ನಲ್ಲಿ ಬುಕ್​ ಮಾಡಿದ ಪ್ರಾಡಕ್ಟ್​ ಬದಲಾಗಿ ಬೇರೆ ಪ್ರಾಡಕ್ಟ್​ ಕೈ ಸೇರುವ ಸಾಕಷ್ಟು ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಫೋನ್​ ಬದಲಿಗೆ ಸೋಪ್​ ಅಥವಾ ಖಾಲಿ ಬಾಕ್ಸ್​ ಪಡೆದುಕೊಂಡಿರುವುದನ್ನು ಕಂಡಿದ್ದೇವೆ. ಇಂತಹ ಕಹಿ ಅನುಭವ ಸಾಮಾನ್ಯ ವ್ಯಕ್ತಿಗೆ ಮಾತ್ರ ಎಂದು ನಾವು ತಿಳಿದುಕೊಂಡಿದ್ದೇವೆ. ಆದರೆ, ಸೆಲೆಬ್ರಿಟಿಗಳು ಕೂಡ ಇದರಿಂದ ಹೊರತಾಗಿಲ್ಲ ಎಂಬುದು ಈ ಸ್ಟೋರಿ ಓದಿದ ಬಳಿಕ ನಿಮಗೆ ತಿಳಿಯುತ್ತದೆ.

    ದುಬಾರಿ ಆ್ಯಪಲ್ ವಾಚ್​ ಬುಕ್​ ಮಾಡಿದ್ದ ಖ್ಯಾತ ನಟನಿಗೆ ಶಾಕ್​ ಕೊಟ್ಟ ಆನ್​ಲೈನ್​ ಕಂಪನಿ: ಕೋರ್ಟ್​ನಲ್ಲಿ ಕೇಸ್​ ರಿವರ್ಸ್​ ​ಪ್ರಖ್ಯಾತ ಬ್ರೆಜಿಲಿಯನ್​ ಕಲಾವಿದರೊಬ್ಬರಿಗೆ ಆನ್​ಲೈನ್​ ಶಾಪಿಂಗ್​ ವೇಳೆ ಕಹಿ ಅನುಭವವಾಗಿದೆ. ದುಬಾರಿ ಆ್ಯಪಲ್​ ವಾಚ್​ ಬುಕ್​ ಮಾಡಿದ್ದ ಕಲಾವಿದನಿಗೆ ಬಂದಿದ್ದು ಮಾತ್ರ ಕಲ್ಲು.

    ಪ್ರಖ್ಯಾತ ಕಲಾವಿದನ ಹೆಸರು ಮುರಿಲ್ಲೋ ಬೆನಿಸಿಯೋ (50). ಆನ್​ಲೈನ್​ನಲ್ಲಿ ಆ್ಯಪಲ್​ 6ನೇ ಸರಣಿಯ ಸ್ಮಾರ್ಟ್​ವಾಚ್​ ಬುಕ್​ ಮಾಡಿದ್ದರು. ಅದಕ್ಕಾಗಿ ಅವರು 530 ಡಾಲರ್​ (40 ಸಾವಿರ) ಕೂಡ ಪಾವತಿಸಿದ್ದರು. ಬುಕ್​ ಮಾಡಿದ 12 ದಿನಗಳ ಬಳಿಕ ವಾಚ್​ ಪಾರ್ಸೆಲ್​ ಡೆಲಿವರಿಯಾಯಿತು. ಖುಷಿಯಿಂದಲೇ ಬಾಕ್ಸ್​ ತೆರೆದ ಕಲಾವಿದನಿಗೆ ಆಘಾತ ಎದುರಾಗಿತ್ತು. ಏಕೆಂದರೆ, ಅಲ್ಲಿ ವಾಚ್​ ಬದಲಿಗೆ ಕಣ್ಣಿಗೆ ಕಂಡಿದ್ದು ಕಲ್ಲು.

    ಬಳಿಕ ಮುರಿಲ್ಲೋ ಬೆನಿಸಿಯೋ ಅವರು ಕೊರ್ರೆಫೊರ್​ ಹೆಸರಿನ ಆನ್​ಲೈನ್​ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಆದರೆ, ಪ್ರತಿಕ್ರಿಯೆ ನೀಡಲು ಕಂಪನಿ ನಿರಾಕರಿಸಿದೆ. ಹೀಗಾಗಿ ಕಂಪನಿ ವಿರುದ್ಧ ಬೆನಿಸಿಯೋ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿಯಾಗಿರುವ ಓರ್ವ ಸೆಲೆಬ್ರಿಟಿಗೆ ಸ್ಟಾರ್ ಹೀರೋಗೆ ಕಿರುಕುಳ ನೀಡುವುದು ಸರಿಯಲ್ಲ ಎಂದು ಅವರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು, ಕೊನೆಗೆ ಬೆನಿಸಿಯೋ ಅವರು ಕೇಸ್​ ಗೆದ್ದಿದ್ದಾರೆ. ಮೊದಲೇ ಪಾವತಿಸಿದ್ದ 530 ಡಾಲರ್​ಗೆ ಹೆಚ್ಚುವರಿಯಾಗಿ 1500 ಡಾಲರ್​ ಕೊಡುವಂತೆ ಕೋರ್ಟ್​ ಕಂಪನಿಗೆ ಆದೇಶಿಸಿದೆ. (ಏಜೆನ್ಸೀಸ್​)

    50 ಕೋಟಿ ರೂ. ದೋಚಿದ ಸೆಕೆಂಡ್​ ಹ್ಯಾಂಡ್​ ಐಟಂ ಎಂದ ಟ್ವಿಟ್ಟಿಗನಿಗೆ ಸಮಂತಾ​ ಕೊಟ್ಟ ಉತ್ತರ ಹೀಗಿತ್ತು…

    ಸುಳ್ಳು ಸುದ್ದಿ ಜಾಲ ಬಯಲು; 20 ಯೂಟ್ಯೂಬ್ ಚಾನೆಲ್, ಎರಡು ವೆಬ್​ಸೈಟ್ ನಿಷೇಧ

    ಇಂದಿನಿಂದ ಪ್ರೊ ಕಬಡ್ಡಿ ಲೀಗ್, ಬೆಂಗಳೂರು ಬುಲ್ಸ್-ಯು ಮುಂಬಾ ಮೊದಲ ಫೈಟ್

    ಜಾತಿ ಆಧಾರಿತ ನಿಗಮ-ಮಂಡಳಿ ಜಾತ್ಯತೀತ ವ್ಯವಸ್ಥೆಗೆ ವಿರುದ್ಧವೇ?; ನ್ಯಾಯಾಂಗ ಪರಾಮರ್ಶೆಗೆ ಮುಂದಾದ ಹೈಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts