More

    ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಅಂದು ಯುದ್ಧ ಗೆದ್ದ ಹೀರೋ, ಈಗ ದಿವಾಳಿ ತಂದ ವಿಲ್ಲನ್

    ಕೊಲಂಬೊ: ಪುಟ್ಟ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ. ಹಿಂದೆಂದೂ ಕಾಣದಂತಹ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಅಗತ್ಯ ವಸ್ತುಗಳ ಬೆಲೆ ಕೊಳ್ಳಲಾರದಷ್ಟು ಗಗನಕ್ಕೇರಿದೆ. ಇಂಧನ ಪಡೆಯಲು ವಾರಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ತುತ್ತು ಅನ್ನಕ್ಕೂ ಪರದಾಡುವಂತಹ ಸಂಕಷ್ಟದ ಸ್ಥಿತಿ ಲಂಕಾದಲ್ಲಿ ನಿರ್ಮಾಣವಾಗಿದ್ದು, ಇದರಿಂದ ರೊಚ್ಚಿಗೆದ್ದಿರುವ ಲಂಕಾ ಜನರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

    ಪ್ರಧಾನಿ ರನಿಲ್​ ವಿಕ್ರಮಸಿಂಘೆ ನಿವಾಸಕ್ಕೆ ಬೆಂಕಿಯಿಟ್ಟಿರುವ ಪ್ರತಿಭಟನಾಕಾರರು ಅಧ್ಯಕ್ಷ ಗೋತಬಯ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿದ್ದಾರೆ. ಈ ಬೆಳವಣಿಗೆಯಿಂದ ಹೆದರಿ ಅಧ್ಯಕ್ಷ ಗೋತಬಯ ಮಾಲ್ಡೀವ್ಸ್​ಗೆ ಸೇನಾ ವಿಮಾನದಲ್ಲಿ ಹಾರಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಲ್ಡೀವ್ಸ್​ ತೊರೆದು ಸಿಂಗಾಪೂರ್​ಗೆ ಹಾರಲು ಗೋತಬಯ ಮುಂದಾಗಿದ್ದಾರೆ. ಇಂದಿನ ಲಂಕಾ ಪರಿಸ್ಥಿತಿಗೆ ಗೋತಬಯ ಕಾರಣ ಎಂದು ಜನರು ಆಕ್ರೋಶಭರಿತರಾಗಿದ್ದು, ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಜನರ ಪ್ರತಿಭಟನೆ ಹಿಂಸಾತ್ಮಕ್ಕೆ ತಿರುಗಿದ್ದು, ಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ.

    ಅಚ್ಚರಿಯ ಸಂಗತಿ ಎಂದರೆ, ಒಂದು ಕಾಲದಲ್ಲಿ ಲಂಕಾ ಜನರ ಪಾಲಿಗೆ ಹೀರೋ ಆಗಿದ್ದ ಗೋತಬಯ ಇದೀಗ ಅದೇ ಜನರ ಪಾಲಿಗೆ ವಿಲ್ಲನ್​ ಆಗಿದ್ದಾರೆ. ಈ ಕುರಿತ ಒಂದು ಹಿನ್ನೆಲೆ ಸ್ಟೋರಿ ಇಲ್ಲಿದೆ. ಲಂಕಾದ ಮಾಜಿ ಯೋಧರಾಗಿರುವ ಗೋತಬಯ 2019ರಲ್ಲಿ ರಾಜಕೀಯಕ್ಕೆ ಕಾಲಿಟ್ಟರು. 2019ರಲ್ಲಿ ಶ್ರೀಲಂಕಾದ 7 ನೇ ಕಾರ್ಯಕಾರಿ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಗೋತಬಯ ಅವರು ಲಂಕಾದ ಸೇನಾಧಿಕಾರಿಯಾಗಿ 26 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಲಂಕಾಗೆ ಮಗ್ಗಲು ಮುಳ್ಳಾಗಿದ್ದ ಎಲ್​ಟಿಟಿಇ ವಿರುದ್ಧ ಜಯ ಸಾಧಿಸಲು ಗೋತಬಯ ತೆಗೆದುಕೊಂಡ ಮಿಲಿಟರಿ ತಂತ್ರಗಳು ಅವರಿಗೆ ಒಳ್ಳೆಯ ಖ್ಯಾತಿಯನ್ನು ತಂದುಕೊಟ್ಟಿತು. 2019ರ ಏಪ್ರಿಲ್​ನಲ್ಲಿ ನಡೆದ ಹಾಗೂ 250 ಸಾವಿಗೆ ಕಾರಣವಾದ ಈಸ್ಟರ್​ ಉಗ್ರರ ದಾಳಿ ಸಂದರ್ಭದಲ್ಲೂ ಸೇನಾ ಉಸ್ತುವಾರಿ ತೆಗೆದುಕೊಳ್ಳುವಂತೆ ಗೋತಬಯ ಬೆಂಬಲಿಗರು ಒತ್ತಾಯಿಸಿದ್ದರು. ಶ್ರೀಲಂಕಾದ ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಗೋತಬಯ ಅವರು ಯುನೈಟೆಡ್ ಸ್ಟೇಟ್ಸ್​ನಲ್ಲಿ ಸಿಸ್ಟಮ್ಸ್ ಇಂಟಿಗ್ರೇಟರ್ ಆಗಿ ಕೆಲಸ ಮಾಡಿದರು. 2005ರಲ್ಲಿ ಲಂಕಾಗೆ ಮರಳಿದನ ಅವರು ರಕ್ಷಣಾ ಸಚಿವಾಲಯದ ಶಾಶ್ವತ ಕಾರ್ಯದರ್ಶಿಯಾಗಿ ನೇಮಕವಾದರು.

    ಮಹಿಂದಾ ರಾಜಪಕ್ಸ 2005ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರು. ಇದಾದ ಬಳಿಕ ಎಲ್‌ಟಿಟಿಇ ವಿರುದ್ಧ ಉತ್ತರ ಮತ್ತು ಪೂರ್ವದಲ್ಲಿ ಸಂಪೂರ್ಣ ಯುದ್ಧವನ್ನು ಪ್ರಾರಂಭಿಸುವ ನಿರ್ಧಾರವನ್ನು ಮಾಡಿದರು. ಈ ಹಿಂದೆ ಶ್ರೀಲಂಕಾ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಅವರ ಸಹೋದರ ಗೋತಬಯ ಅವರು ರಕ್ಷಣಾ ಕಾರ್ಯದರ್ಶಿಯ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ಎಲ್‌ಟಿಟಿಇ ಮೇಲಿನ ವಿಜಯವು ರಾಜಪಕ್ಸ ಕುಟುಂಬದ ಅಧಿಕಾರದ ಮೇಲಿನ ಹಿಡಿತವನ್ನು ಬಲಪಡಿಸಿತು. ಬಹುಸಂಖ್ಯಾತ ಸಿಂಹಳ-ಬೌದ್ಧ ಸಮುದಾಯದ ದೃಷ್ಟಿಯಲ್ಲಿ ಈ ಸಹೋದರರಿಬ್ಬರೂ ಪ್ರತ್ಯೇಕತಾವಾದಿಗಳ ಭಯೋತ್ಪಾದನೆಯಿಂದ ಜನರನ್ನು ಮುಕ್ತಗೊಳಿಸಿದ ದೇವರಂತಹ ವ್ಯಕ್ತಿಗಳಾದರು. ಮಹಿಂದಾ ಎರಡನೇ ಅವಧಿಗೆ ಅಧ್ಯಕ್ಷರಾಗಿ ಗೆದ್ದರು.

    ಉತ್ತರ ಶ್ರೀಲಂಕಾದಲ್ಲಿನ ಎಲ್​ಟಿಟಿಇ ಉಪಟಳವನ್ನು ಕೊನೆಗೊಳಿಸಿ ದೇಶದ ಹೀರೋ ಆಗಿದ್ದ ಅಧ್ಯಕ್ಷ ಗೋತಬಯ ರಾಜಪಕ್ಸ ಈಗ, ದೇಶವನ್ನು ದಿವಾಳಿಗೆ ತಂದು ನಿಲ್ಲಿಸಿದ ಖಳನಾಯಕರಾಗಿದ್ದಾರೆ. ಮಾತ್ರವಲ್ಲದೆ ಸಂಕಷ್ಟದ ಸಮಯದಲ್ಲಿ ಜನರ ಮಧ್ಯೆ ಇದ್ದು ಸ್ಥೈರ್ಯ ತುಂಬಬೇಕಿದ್ದ ನಾಯಕ, ದೇಶದಿಂದ ಪಲಾಯನಗೈದಿದ್ದಾರೆ. ಇದು ಕೂಡ ಜನರ ಸಿಟ್ಟನ್ನು ಹೆಚ್ಚಿಸಿದೆ. ರಾಜಪಕ್ಸ ಕುಟುಂಬದವರು ಪ್ರಚಾರಕ್ಕೆ ಹೋದರೆ ಗೆಲ್ಲುವ ಕ್ಷೇತ್ರಗಳಲ್ಲೂ ಪಕ್ಷ ಸೋಲಬಹುದು. ಅಷ್ಟರ ಮಟ್ಟಿಗೆ ಅವರ ವರ್ಚಸ್ಸು ಕುಗ್ಗಿದೆ ಎಂದು ಹೇಳಲಾಗಿದೆ. (ಏಜೆನ್ಸೀಸ್​)

    ಬಿಗ್​ಬಾಸ್ ಫೀವರ್ ಶುರು​: 9ನೇ ಸೀಸನ್​ನಲ್ಲಿ ಯಾರೆಲ್ಲ ಡೊಡ್ಮನೆ ಪ್ರವೇಶಿಸಲಿದ್ದಾರೆ? ಇಲ್ಲಿದೆ ಸಂಭವನೀಯ ಪಟ್ಟಿ​…

    ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ

    ಭಾರತ ಇಸ್ಲಾಮಿಕ್​ ಭಾರತದ ಆಡಳಿತ ಕಡೆಗೆ! ಬಿಹಾರದಲ್ಲಿ ಸಿಕ್ಕಿಬಿದ್ದ ಉಗ್ರರಿಬ್ಬರ ಭಯಾನಕ ಸಂಚು ಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts