ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ

ಬೆಂಗಳೂರು: ಕಿಕ್ ಬಾಕ್ಸಿಂಗ್​ನಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ‌ ದುರಂತ ಅಂತ್ಯ ಕಂಡ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ನಿಖಿಲ್ (24) ಮೃತ ದುರ್ದೈವಿ. ಬೆಂಗಳೂರಿನ ಕೆಂಗೇರಿಯಲ್ಲಿ K 1 ಕಿಕ್ ಬಾಕ್ಸರ್ ಆರ್ಗನೈಸೇಷನ್ ವತಿಯಿಂದ ಜುಲೈ 10ರಂದು ಕಿಕ್ ಬಾಕ್ಸಿಂಗ್​ ಸ್ಪರ್ಧೆ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ನಿಖಿಲ್​ ಪಾಲ್ಗೊಂಡಿದ್ದರು. ಕಿಕ್ ಬಾಕ್ಸಿಂಗ್​ನ ರಿಂಗ್‌ನಲ್ಲಿ ಸೆಣಸಾಡುತ್ತಿರುವಾಗ ಎದುರಾಳಿಯು ನಿಖಿಲ್​ ತಲೆಗೆ ಹೊಡೆದ ಏಟಿಗೆ ಬಾಕ್ಸಿಂಗ್ ರಿಂಗ್​ನಲ್ಲೇ ನಿಖಿಲ್​ ಕೆಳಗೆ ಬಿದ್ದವರು ಮೇಲಕ್ಕೆ ಏಳಲೇ ಇಲ್ಲ. ಕೂಡಲೇ ಅವರನ್ನು ಬೆಂಗಳೂರಿನ‌ ಖಾಸಗಿ … Continue reading ಕಿಕ್​ ಬಾಕ್ಸಿಂಗ್​ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮೈಸೂರಿನ ಯುವಕ ಸಾವು: ಆಟ ಆಡುತ್ತಿರುವಾಗಲೇ ಜೀವ ಕಸಿದ ದುರ್ವಿಧಿ