More

    ಸ್ಟಾರ್​ ನಟನ ಜತೆ ನಿತ್ಯಾ ಮೆನನ್​ ಮದುವೆ: ಮಲಯಾಳಂ ಬ್ಯೂಟಿ ಕೈಹಿಡಿಯುವ ವರನ್ಯಾರು?

    ಹೈದರಾಬಾದ್​: ನಟಿ ನಿತ್ಯಾ ಮೆನನ್​ ಹೆಸರು ಹೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಹಾಗೂ ಮಾಲಿವುಡ್​ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್​, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ.

    ನಿತ್ಯಾ ಮೆನನ್​ ವಿಚಾರದಲ್ಲಿ ಕೇಳಿಬಂದಿರುವ ತಾಜಾ ಸುದ್ದಿಯೆಂದರೆ, ಮಲಯಾಳಂ ಬ್ಯೂಟಿ ಮದುವೆ ಸಿದ್ದರಾಗುತ್ತಿದ್ದಾರಂತೆ. ಮೂಲಗಳ ಪ್ರಕಾರ ನಿತ್ಯಾ ಅವರು ಮಲಯಾಳಂ ಸ್ಟಾರ್​ ನಟರೊಬ್ಬರನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ, ಆ ನಟ ಯಾರು ಎಂಬುದೇ ಈಗ ಎಲ್ಲರ ಮುಂದಿರುವ ಪ್ರಶ್ನೆ. ಇದಕ್ಕೆ ನಿತ್ಯಾ ಅವರೇ ಉತ್ತರ ನೀಡಬೇಕಿದೆ.

    ಸಿನಿಮಾ ಲೋಕಕ್ಕೆ ಕಾಲಿಡುವ ಮುಂಚೆಯೇ ನಿತ್ಯಾ ಮತ್ತು ಸ್ಟಾರ್​ ನಟನ ನಡುವೆ ಸ್ನೇಹವಿತ್ತು ಎನ್ನಲಾಗಿದೆ. ಮೊದಲ ಪರಿಚಯ ನಂತರ ಸ್ನೇಹಕ್ಕೆ ತಿರುಗಿ, ಬಳಿಕ ಇಬ್ಬರ ನಡುವೆ ಲವ್​ ಆಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಹೀಗೊಂದು ವದಂತಿ ಸಾಮಾಜಿಕ ಜಾಲತಾಣ ಮತ್ತು ಮಲಯಾಳಂ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ಸುದ್ದಿಯ ಬಗ್ಗೆ ನಿತ್ಯಾ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

    ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ನಿತ್ಯಾ ಅವರು ಕೊನೆಯದಾಗಿ ಪವನ್​ ಕಲ್ಯಾಣ್​ ನಟನೆಯ ಭೀಮ್ಲಾ ನಾಯಕ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನ ತಿರುಚಿತ್ರಂಬಲಂ ಹಾಗೂ ಮಲಯಾಳಂನ ಆರಾಮ್​ ಥಿರುಕಲ್ಪನಾ ಸಿನಿಮಾದಲ್ಲಿ ನಟಿಸಿದ್ದಾರೆ. (ಏಜೆನ್ಸೀಸ್​)

    ಅತಿ ಕಡಿಮೆ ಬೆಲೆಗೆ ಚಿಕನ್​ ಮಾರಾಟ ಮಾಡುತ್ತಿದವನನ್ನು ಬಂಧಿಸಿದ ಪೊಲೀಸರು! ಕಾರಣ ಹೀಗಿದೆ ನೋಡಿ…

    ಕಾಂಗ್ರೆಸ್​ ನಾಯಕಿ ವಿರುದ್ಧ ಬೆಳಗಾವಿಯಲ್ಲಿ FIR ದಾಖಲು! ಖಾಸಗಿ ವಿಡಿಯೋ ತೋರಿಸಿ ಆಕೆ ಕೊಟ್ಟ ಚಿತ್ರಹಿಂಸೆ ಅಷ್ಟಿಷ್ಟಲ್ಲ

    ಭಾರತಕ್ಕೂ ಮತ್ತೊಂದು ಗಂಡಾಂತರ? ಮುನ್ನೆಲೆಗೆ ಬಂದ ಅತೀಂದ್ರಿಯ ಭವಿಷ್ಯಗಾರ್ತಿ ಬಾಬಾ ವಂಗಾ ವಾಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts