More

    ಗಿನ್ನೆಸ್ ದಾಖಲೆ ಬರೆದ 75 ಕಿ.ಮೀ ಉದ್ದದ ಏಕಪಥ ಹೆದ್ದಾರಿ: ಸಚಿವ ನಿತಿನ್ ಗಡ್ಕರಿ ಅಭಿನಂದನೆ

    ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಅದರ ಗುತ್ತಿಗೆದಾರರು 5 ದಿನಗಳಲ್ಲಿ 75 ಕಿ.ಮೀ ಉದ್ದದ ಬಿಟುಮಿನಸ್ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ ಬರೆದಿದ್ದಾರೆ.

    ಇದೇ ತಿಂಗಳ 3ರಿಂದ ಆರಂಭವಾದ ಡಾಂಬರೀಕರಣ ಕಾಮಗಾರಿಗೆ ಶ್ರಮಿಸಿದ ಎನ್‌ಎಚ್‌ಎಐ, ಗುತ್ತಿಗೆದಾರರು, ಎಂಜಿನಿಯರ್‌ಗಳು ಮತ್ತು ಕಾರ್ಮಿಕರ ತಂಡವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಿನಂದಿಸಿದರು. ಪಶ್ಚಿಮ ವಿದರ್ಭದ ಅಮರಾವತಿ ಮತ್ತು ಅಕೋಲಾ ನಡುವಿನ NH-53 ವಿಭಾಗದಲ್ಲಿ ಒಂದೇ ಪಥದಲ್ಲಿ ಕೆಲಸವನ್ನು ಕೈಗೊಳ್ಳಲಾಯಿತು.

    ಗಿನ್ನೆಸ್ ದಾಖಲೆ ಬರೆದ 75 ಕಿ.ಮೀ ಉದ್ದದ ಏಕಪಥ ಹೆದ್ದಾರಿ: ಸಚಿವ ನಿತಿನ್ ಗಡ್ಕರಿ ಅಭಿನಂದನೆ

    ಅಮರಾವತಿ ಮತ್ತು ಅಕೋಲಾ ನಡುವಿನ NH-53 ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿದ್ದು, ಸುಮಾರು 75 ಕಿಮೀ ನಿರಂತರ ಒಂದೇ ಹಾದಿಯ ಬಿಟುಮಿನಸ್ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸುವ ಮೂಲಕ ಗಿನ್ನೆಸ್ ದಾಖಲೆ ಸೇರಿದೆ. ಈ ಸಾಧನೆಗೈದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಗೆ ನಿತಿನ್ ಗಡ್ಕರಿ ಶುಭಾಶಯ ತಿಳಿಸಿದ್ದಾರೆ.

    ಗಿನ್ನೆಸ್ ವಿಶ್ವ ದಾಖಲೆಯನ್ನು ಸಾಧಿಸಿದ ನಮ್ಮ ಅಸಾಧಾರಣ ತಂಡ ಎನ್ಎಚ್ಎಐ, ಕನ್ಸಲ್ಟೆಂಟ್ಸ್ ಮತ್ತು ಕನ್ಸೆಷನೇರ್, ರಾಜಪಥ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ ಮತ್ತು ಜಗದೀಶ್ ಕದಮ್ ಅವರನ್ನು ಅಭಿನಂದಿಸಲು ತುಂಬಾ ಸಂತೋಷವಾಗಿದೆ. ಈ ಅಸಾಧಾರಣ ಸಾಧನೆಯನ್ನು ಸಾಧಿಸಲು ಹಗಲಿರುಳು ಶ್ರಮಿಸಿದ ನಮ್ಮ ಎಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳುತ್ತೇನೆ ಎಂದು ನಿತಿನ್ ಗಡ್ಕರಿ ಕೂ ಮಾಡಿದ್ದಾರೆ.

    ಗಿನ್ನೆಸ್ ದಾಖಲೆ ಬರೆದ 75 ಕಿ.ಮೀ ಉದ್ದದ ಏಕಪಥ ಹೆದ್ದಾರಿ: ಸಚಿವ ನಿತಿನ್ ಗಡ್ಕರಿ ಅಭಿನಂದನೆ

    3.5 ಕೋಟಿ ರೂ. ಸಂಬಳದ ಉದ್ಯೋಗಕ್ಕೆ ಗುಡ್​ ಬೈ ಹೇಳಿದ ಭೂಪ: ಕಾರಣ ಕೇಳಿದ್ರೆ ಶಾಕ್​ ಆಗೋದು ಖಂಡಿತ!

    ಮತ್ತೆ ರೆಪೋ ದರ ಏರಿಸಿದ RBI: ಬ್ಯಾಂಕ್​ ಸಾಲಗಾರರಿಗೆ ಇಎಂಐ ಮತ್ತಷ್ಟು ಹೊರೆ

    ನಗರಸಭೆ ಸದಸ್ಯನ ಹತ್ಯೆ: ಭಕ್ತರ ಸೋಗಲ್ಲಿ ದೇಗುಲದ ಎದರೇ ಕೊಚ್ಚಿ ಕೊಲೆ, ಗ್ರಾಪಂ ಮಾಜಿ ಸದಸ್ಯೆ ಮೇಲೆ ಖಾಕಿ ಕಣ್ಣು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts